Categories: ಕೋಲಾರ

ಕ್ರಿಕೆಟ್ ಪಂದ್ಯಾವಳಿ: ಪೊಲೀಸರನ್ನು ಮಣಿಸಿದ ಪತ್ರಕರ್ತರು

ಕೋಲಾರ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಾರಥ್ಯದ ಜಿಲ್ಲಾ ಪೊಲೀಸ್‌ ತಂಡದ ವಿರುದ್ಧ ಎ.ಜಿ.ಸುರೇಶ್‌ ಕುಮಾರ್‌ ನೇತೃತ್ವದ ಪತ್ರಕರ್ತರು ಎಂಟು ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರು.

ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಕ್ರೀಡಾಕೂಟದ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಪತ್ರಕರ್ತರು ಮಿಂಚು ಹರಿಸಿದರು.

ಮೊದಲು ಬ್ಯಾಟ್‌ ಮಾಡಿದ ಪೊಲೀಸರು ನಿಗದಿತ 8 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 72 ರನ್‌ ಗಳಿಸಿದರು. ಪತ್ರಕರ್ತರ ತಂಡದವರು 6.1 ಓವರ್‌ಗಳಲ್ಲಿ ಕೇವಲ 2ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿದರು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕಿರಣ್‌ ಹಾಗೂ ರಘುರಾಜ್‌ ಉತ್ತಮ ಆರಂಭ ನೀಡಿದರು. ಸಿಕ್ಸರ್‌ಗಳ ಮೂಲಕ ಪೊಲೀಸರ ಬೆವರಿಳಿಸಿದರು. ನಂತರ ನಾಯಕ ಸುರೇಶ್‌ ಕುಮಾರ್‌ ಹಾಗೂ ಸಮೀರ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬೌಲಿಂಗ್‌ನಲ್ಲೂ ಪತ್ರಕರ್ತರು ಉತ್ತಮ ಪ್ರದರ್ಶನ ನೀಡಿದರು. ದೀಪಕ್‌ ಎರಡು ಓವರ್‌ಗಳಲ್ಲಿ ಮೂರು ವಿಕೆಟ್‌ ಪಡೆದರು ಮಿಂಚಿದರು. ಮುದುವಾಣಿ ವೇಣು, ಮಹೇಶ್‌, ಕಿರಣ್‌, ಸುನಿಲ್‌ ಕೂಡ ಗಮನ ಸೆಳೆದರು. ರವಿಕುಮಾರ್‌ ಉತ್ತಮ ಕ್ಯಾಚ್‌ ಪಡೆದರು. ತಂಡದಲ್ಲಿ ರವಿಕುಮಾರ್‌, ಗಂಗಾಧರ್‌, ರವಿ, ಓಂಕಾರ ಮೂರ್ತಿ ಇದ್ದರು.

ಪೊಲೀಸರು, ಸಿಬ್ಬಂದಿ ವರ್ಗದವರು ಸ್ಥಳದಲ್ಲಿದ್ದು ಆಟಗಾರರಿಗೆ ಹುರುಪು ತುಂಬಿದರು. ತಮ್ಮ ತಂಡದ ಆಟಗಾರರು ಸಿಕ್ಸರ್‌, ಬೌಂಡರಿ ಗಳಿಸಿದ ಚಪ್ಪಾಳೆ ತಟ್ಟಿ ಸ್ಫೂರ್ತಿ ತುಂಬಿದರು. ಆದರೆ, ಕಳೆದ ವರ್ಷ ಪೊಲೀಸರ ಎದುರು ಸೋತಿದ್ದ ಪತ್ರಕರ್ತರು ಈ ಬಾರಿ ಗೆಲ್ಲುವ ಮೂಲಕ ತಿರುಗೇಟು ನೀಡಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

7 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

11 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

11 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

16 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago