Categories: ಕೋಲಾರ

ತಹಶೀಲ್ದಾರ್‌ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್‌ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ, ತ್ವರಿತವಾಗಿ ಕಡತ ವಿಲೇವಾರಿಗೆ ಸೂಚನೆ

ಕೋಲಾರ: ಶಾಸಕ ಕೊತ್ತೂರು ಮಂಜುನಾಥ್‌ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ದಿಢೀರನೇ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಡತ ಇಟ್ಟುಕೊಂಡು ಏಕೆ‌ ಜನಸಾಮಾನ್ಯರನ್ನು, ರೈತರನ್ನು ಸತಾಯಿಸುತ್ತೀರಿ ಎಂದು ಪ್ರಶ್ನಿಸಿದರು.

ಕಾನೂನು ಪ್ರಕಾರವೇ ಕಡತ ವಿಲೇವಾರಿ ಮಾಡಿ. ಆದರೆ, ವರ್ಷಗಟ್ಟಲೇ ತಮ್ಮ ಬಳಿ ಕಡತಗಳನ್ನು ಇಟ್ಟುಕೊಳ್ಳುವ ಉದ್ದೇಶವಾದರೂ ಏನು? ಎಷ್ಟು ಕಡತಗಳು ತಮ್ಮ ಬಳಿ ವಿಲೇವಾರಿ ಆಗಲು ಬಾಕಿ ಇವೆ ಎಂದು ಕೇಳಿದ ಅವರು, ಮುಂದಿನ ಬುಧವಾರ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿರಬೇಕು ಇದು ಮನವಿ ಅಲ್ಲ ಗಡುವು ಎಂದರು.

ತಮಗೆ ಎಷ್ಟು ಹಣ ಬೇಕು ಹೇಳಿ, ನಾನೇ ಕೊಡುತ್ತೇನೆ?‌ ಆದರೆ, ಬಡಜನರ‌ನ್ನು ಪದೇಪದೇ ‌ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ. ನನ್ನ ಸ್ವಂತ ಕೆಲಸಕ್ಕೆಂದು ನಾನು ಯಾವತ್ತೂ ತಹಶೀಲ್ದಾರ್ ಕಚೇರಿಗೆ ‌ಬಂದಿಲ್ಲ ಪೋನು ಸಹ ಮಾಡಿಲ್ಲ ಆದರೆ ಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿರುವ ಬಗ್ಗೆ ನನಗೆ ವಿಪರೀತ ದೂರುಗಳು ಬರುತ್ತಿವೆ. ರೈತರನ್ನು ಏಕೆ ಪದೇಪದೇ ಕಚೇರಿಗೆ ಅಲೆಸುತ್ತೀರಿ? ತಮ್ಮ ಟೇಬಲ್‌ಗೆ ಬರುವ ‌ಕಡತ‌ ಅಲ್ಲಿಂದ ಮುಂದೆ ಸಾಕಲು ಏಕೆ ವಿಳಂಬ ಮಾಡುತ್ತೀರಿ ಎಂದು ರೈತರು ಸಾಯಬೇಕು ಅವತ್ತು ಮಾಡಿಕೊಡತ್ತೀರ ಹೇಳಿ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.

ದ್ವಿತೀಯ ದರ್ಜೆ ಸಹಾಯಕಿಯರಾದ ಸುಜಾತಾ ಮತ್ತು ಚಾಮುಂಡೇಶ್ವರಿದೇವಿ ಬಳಿ ತೆರಳಿ ಹಳೆ ದಾಖಲೆಗಳನ್ನು ಜಾಲಾಡಿದರು. ಟೇಬಲ್‌ ಮೇಲೆ ರಾಶಿ ಕಡತ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಕೆಲವೊಂದು ದಾಖಲೆಗಳನ್ನು ಹುಡುಕಿ ಕೊಡಲು ಸಿಬ್ಬಂದಿ ಪರದಾಡಿದರು.

ಸರ್ವೆ ವಿಭಾಗ, ಟಪಾಲು ವಿಭಾಗ, ಡಿಜಿಟಲ್‌ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ನಂತರ ಸಭಾಂಗಣದಲ್ಲಿ ತಹಶೀಲ್ದಾರ್‌ ಡಾ.ನಯನಾ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು.

ಪ್ರಮುಖವಾಗಿ ಸುಜಾತಾ ಹಾಗೂ ಸುಲೋಚನಾ ಅವರ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಅವರನ್ನು ಮುಳಬಾಗಿಲಿಗೂ, ಶ್ರೀನಿವಾಸಪುರಕ್ಕೋ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಸರ್ವೆ ವಿಭಾಗದ ಮೇಲೆ ಇರುವಷ್ಟು ದೂರು ಬೇರೆ ಎಲ್ಲೂ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟುಬಿಡಿ. ಕೆಲಸ ಮಾಡದವರ ಹೆಸರು ಕೊಡಿ ಎಂದರು.

ಆಗ ತಹಶೀಲ್ದಾರ್‌ ನಯನಾ ಮಾತನಾಡಿ, ಸುಜಾತಾ ಅವರ ಕೆಲಸ ನಿಧಾನ. ಸುಲೋಚನಾ ಅವರ ಸಂಬಂಧ ಯಾವುದೇ ಭ್ರಷ್ಟಾಚಾರದ ದೂರುಗಳು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗಾದರೆ ಯಾಕೆ ದೂರುಗಳು ಜಾಸ್ತಿ ಬರತ್ತೇವೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.

‌ಸರ್ವೆ ಸಿಬ್ಬಂದಿ‌ ಕೊರತೆ ಇದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಬೇಕು ಎಂದು ಸರ್ವೆ ವಿಭಾಗದವರ ಆಗ್ರಹಿಸಿದರು.

ಡಾ.ನಯನಾ ವಿರುದ್ಧವೂ ದೂರುಗಳು ಬರುತ್ತಿರುವುದನ್ನು ಕೊತ್ತೂರು ಮಂಜುನಾಥ್‌ ಪ್ರಸ್ತಾಪಿಸಿದರು.

ಬೆಳಿಗ್ಗೆ ತಹಶೀಲ್ದಾರ್ ಬರುವುದೇ ಇಲ್ಲ,‌ ದೂರದ ಹಳ್ಳಿಗರ ಜನರಿಗೆ ತೊಂದರೆ ಆಗುತ್ತಿದೆ. ಸಂಜೆ‌ ಆರು ಗಂಟೆ ಮೇಲೆ ಬರುತ್ತಾರೆ ಎಂಬ ದೂರುಗಳು ಇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಆಗ ಡಾ.ನಯನಾ, ನಿತ್ಯ ಒಂದಿಲ್ಲೊಂದು ಸಭೆಗಳು ಇರುತ್ತವೆ. ಮುಖ್ಯಕಚೇರಿಯಲ್ಲಿ ಸಭೆ ಇರುತ್ತವೆ. ನ್ಯಾಯಾಲಯ ಪ್ರಕರಣಗಳಿರುತ್ತವೆ. ಅದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ತಹಶೀಲ್ದಾರ್ ಕಚೇರಿಯಲ್ಲಿ ವಾಸ್ತು ಸಮಸ್ಯೆ ಇದೆ. ಶೌಚಾಲಯ ಬದಲಾಯಿಸಿ. ಸಮಸ್ಯೆ ಸರಿ ಹೋಗಬಹುದು ಎಂದು ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Ramesh Babu

Journalist

Recent Posts

ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಜಿ. ಲಕ್ಷ್ಮೀಪತಿ

ದೊಡ್ಡಬಳ್ಳಾಪುರ: ಹುಟ್ಟುಹಬ್ಬವನ್ನು ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಆಚರಿಸಿದಾಗ ಅದಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು…

4 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2026: ಅಂತಿಮ ಮತದಾರ ಪಟ್ಟಿಯಲ್ಲಿ 2863 ಶಿಕ್ಷಕ ಮತದಾರರು : ಡಿಸಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುವ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದ ಅಂತಿಮ…

5 hours ago

ಸಿಮೆಂಟ್ ಲಾರಿ–ಕಂಟೇನರ್ ನಡುವೆ ಅಪಘಾತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಗೋದಿ ಮಿಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೆಳಗ್ಗೆ ಸಿಮೆಂಟ್ ಲಾರಿ…

11 hours ago

ನಾಯಿ ಕಡಿತದ ಸುಳಿಗೆ ಮಕ್ಕಳು: ನಾಲ್ಕು ವರ್ಷದಲ್ಲಿ 4.21 ಲಕ್ಷ ಪ್ರಕರಣ: ರೇಬಿಸ್‌ಗೆ ಮಕ್ಕಳ ಸಾವು

ಬೆಂಗಳೂರು ಗ್ರಾಮಾಂತರ: ಶಾಲೆಗೆ ಹೋಗುವ ದಾರಿ, ಅಂಗನವಾಡಿಯ ಅಂಗಳ, ಆಟವಾಡುವ ಮೈದಾನ... ಹೀಗೆ ಮಕ್ಕಳ ಸುರಕ್ಷಿತ ಬಾಲ್ಯ ಕಳೆಯಬೇಕಾದ ಜಾಗಗಳಲ್ಲೇ…

14 hours ago

ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ಮನೆಯವರಿಗೆ ವಿಡಿಯೋ ಕಾಲ್ ಮಾಡಿದ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

1 day ago

ಮಣ್ಣಿನಡಿ ಹುದುಗಿಹೋಗುತ್ತಿದ್ದ ವಿಜಯನಗರ ಕಾಲದ 6 ವೀರಗಲ್ಲುಗಳಿಗೆ ಮರುಜೀವ: ರಸ್ತೆ ವಿಸ್ತರಣೆ ವೇಳೆ ಪತ್ತೆ; ಪುರಾತತ್ವ ಇಲಾಖೆ ತ್ವರಿತ ಕಾರ್ಯಾಚರಣೆ

ದೊಡ್ಡಬಳ್ಳಾಪುರ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ…

1 day ago