Categories: ಲೇಖನ

ಗಾಂಧಿ ಎಂದೆಂದಿಗೂ ಈ ನೆಲದ ಮಹಾತ್ಮ….

” ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ ” ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂದೇಶ ಹಂಚಿಕೊಂಡಿದ್ದಾರೆ….

ಯುದ್ಧ ಪೀಡಿತ ಉಕ್ರೇನ್ಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತನಾಡುತ್ತಾ ಮಹಾತ್ಮ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಜಗತ್ತಿನ ಶಾಂತಿಗೆ ಗಾಂಧೀಜಿಯವರ ಚಿಂತನೆಗಳು ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ….

ಹೌದು, ನರೇಂದ್ರ ಮೋದಿಯವರು ಹಾಗೆ ಹೇಳಲೇಬೇಕು ಮತ್ತು ಪ್ರತಿ ಬಾರಿಯೂ ಹೇಳುತ್ತಲೇ ಇರುತ್ತಾರೆ. ಹಿಂದಿನ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸಹ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಹೋರಾಟಗಾರರಾದ ನೆಲ್ಸನ್ ಮಂಡೇಲಾ, ಪ್ಯಾಲಿಸ್ಟೇನ್ ಸ್ವಾತಂತ್ರ್ಯ ಹೋರಾಟಗಾರ ಯಾಸಿರ್ ಅರಾಫತ್, ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್, ಭಾರತದ ಮಾಜಿ ಅಧ್ಯಕ್ಷ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಹ ಹಾಗೆ ಹೇಳಿದ್ದಾರೆ ಮತ್ತು ಬುದ್ಧಿ ಇರುವ, ಹೃದಯವಿರುವ, ಮಾನವೀಯತೆಗೆ ಮಿಡಿಯುವ ಯಾರೇ ಆಗಲಿ ಮೊದಲು ಹೇಳುವುದು ಅದು ಮಹಾತ್ಮ ಗಾಂಧಿ ಹೆಸರು….

ಜಗತ್ತಿನ ಮತ್ಯಾವುದೇ ಹೋರಾಟಗಾರರು, ದಾರ್ಶನಿಕರು ಅಥವಾ ಧಾರ್ಮಿಕ ನಾಯಕರು
ಗಾಂಧಿಯವರಷ್ಟು ಪರಿಣಾಮಕಾರಿಯಾದ ಶಾಂತಿದೂತರಾಗಲು ಸಾಧ್ಯವಿಲ್ಲ. ಇದನ್ನು ಭಾರತದ ಒಂದಷ್ಟು ಮಹಾತ್ಮ ಗಾಂಧಿಯ ದ್ವೇಷಿಗಳು ಅರ್ಥ ಮಾಡಿಕೊಳ್ಳಬೇಕು…..

ಮಹಾತ್ಮ ಗಾಂಧಿಯನ್ನು ವಿರೋಧಿಸಲು, ವಿಮರ್ಶಿಸಲು ಅವರವರಿಗೆ ಅವರವರದೇ ಕಾರಣಗಳಿರಬಹುದು. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ಆದರೆ ಖಂಡಿತವಾಗಿಯೂ ಗಾಂಧಿಯವರನ್ನು ದ್ವೇಷ ಮಾಡುವಷ್ಟು ಕೆಟ್ಟ ಮನುಷ್ಯ ಅವರಾಗಿರಲಿಲ್ಲ. ಅವರ ಯಾವುದೇ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸುವ, ಟೀಕಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರ ಬದುಕಿನ ಬಹು ಮುಖ್ಯ ಪ್ರಯೋಗಗಳಾದ ಸತ್ಯ, ಅಹಿಂಸೆ, ಸರಳತೆ, ಪಾರದರ್ಶಕತೆ, ಮಾನವೀಯತೆ, ನೈತಿಕತೆ, ಶಾಂತಿ ಇದನ್ನು ಯಾರು ಸಹ ಅಲ್ಲಗಳೆಯುವಂತಿಲ್ಲ…..

ಶರಣ ಸಂಸ್ಕೃತಿಯ ನಡೆ ನುಡಿ ಸಿದ್ಧಾಂತ ಬಹುತೇಕ ಗಾಂಧಿಯವರಲ್ಲಿ ತಿಳುವಳಿಕೆಯಾಗಿ ನಡುವಳಿಕೆಯಾಗಿತ್ತು. ನನ್ನ ಜೀವನವೇ ನನ್ನ ಸಂದೇಶ ಎನ್ನುವ ಮಹಾತ್ಮ ಗಾಂಧಿಯವರ ಮಾತುಗಳು, ಸತ್ಯದೊಂದಿಗೆ ಅವರು ನಡೆಸಿದ ಬದುಕಿನ ಪ್ರಯೋಗಗಳು ಇಡೀ ವಿಶ್ವದಲ್ಲಿ ತೀರಾ ಅಪರೂಪ. ಇವತ್ತಿನ ಅನೇಕ ರಾಜಕೀಯ, ಸಾಮಾಜಿಕ, ಧಾರ್ಮಿಕ ಫಲಿತಾಂಶಗಳ ಆಧಾರದ ಮೇಲೆ ಗಾಂಧಿಯವರನ್ನು ನಿರ್ಧರಿಸುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಗಾಂಧಿಯನ್ನು ಅರ್ಥ ಮಾಡಿಕೊಳ್ಳಲೇ ನಮಗೂ ಕೂಡ ಸಾಕಷ್ಟು ಅನುಭವ, ಅನುಭಾವ, ಸಂವೇದನಾಶೀಲತೆ ಬೇಕಾಗುತ್ತದೆ.

ಯಾರದೋ ಮೇಲಿನ ದ್ವೇಷದಿಂದ, ಇನ್ಯಾರದೋ ಮೇಲಿನ ಕೋಪದಿಂದ, ಮತ್ಯಾರದೋ ವಿದ್ವಂಸಕ ಕೃತ್ಯಗಳಿಂದ ಆ ಭಾರವನ್ನು ಮಹಾತ್ಮ ಗಾಂಧಿಯನ್ನು ದ್ವೇಷಿಸಲು ಉಪಯೋಗಿಸುವ ಕೆಲವು ಮೂಲಭೂತವಾದಿ ವ್ಯಕ್ತಿಗಳು, ಸಂಘಟನೆಗಳು ಅವರ ವಿಷಯದಲ್ಲಿ ಮತ್ತೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಶಸ್ತ್ರ, ಶಾಸ್ತ್ರ, ರಕ್ತ, ಹೊಡೆದಾಟಗಳಿಂದ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎನ್ನುವ ಹುಚ್ಚು ವಿಮರ್ಶೆಗಳಿಗೆ ಹೆಚ್ಚು ಮಹತ್ವ ಕೊಡಬಾರದು. ಸ್ವತಂತ್ರಕ್ಕಾಗಿ ಬಲಿಯಾದ ಎಲ್ಲ ತ್ಯಾಗ ಜೀವಿಗಳ ಹುತಾತ್ಮರ ತ್ಯಾಗವನ್ನು ಸ್ಮರಿಸುತ್ತಾ……..

ಗಾಂಧಿ ಎಂದೆಂದಿಗೂ ಈ ನೆಲದ ಮಹಾತ್ಮ. ಅನೇಕರು ಮೇಲ್ನೋಟಕ್ಕೆ ಮಾತ್ರ ಗಾಂಧಿಯನ್ನು ಸ್ಮರಿಸುತ್ತಾ ಒಳಗಡೆ ಅವರನ್ನು ಸಾಕಷ್ಟು ದ್ವೇಷಿಸಿ, ಅವರ ಕೊಂದವರನ್ನು ವಿಜೃಂಭಿಸುವುದು, ಪ್ರಶಂಶಿಸುವುದು ನಡೆಯುತ್ತಲೇ ಇದೆ……

ಇತ್ತೀಚಿನ ವರ್ಷಗಳಲ್ಲಿ ಗಾಂಧಿಯನ್ನು ಈ ನೆಲದಿಂದಲೇ ಓಡಿಸುವ, ಅವರನ್ನು ವಿಲನ್ ಆಗಿ ಚಿತ್ರಿಸುವ ಅನೇಕ ಅಜ್ಞಾನದ ಪ್ರಯತ್ನಗಳು ನಡೆಯುತ್ತಿದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗಾಂಧಿಯನ್ನು ಮರೆತ ದೇಶ ನೈತಿಕವಾಗಿ ಕುಸಿಯುತ್ತಲೇ ಹೋಗುತ್ತದೆ. ಮುಂದೊಂದು ದಿನ ದೇಶ ಆರ್ಥಿಕವಾಗಿ ಅಭಿವೃದ್ಧಿಯಾದರೂ ಆತ್ಮವಿಲ್ಲದ ಶರೀರದಂತೆ ಮಾನವೀಯ ಮೌಲ್ಯಗಳು ನಶಿಸಿರುತ್ತದೆ. ಮನುಷ್ಯ ಅನಾಗರಿಕವಾಗಿ, ವಸ್ತು ಸಂಸ್ಕೃತಿಯ ಬಲೆಯೊಳಗೆ ಸಿಲುಕಿ, ನಿರ್ಜೀವ ಶವದಂತೆಯೇ ಅಪನಂಬಿಕೆ, ಅಸಮಾಧಾನ, ಅಸಹಿಷ್ಣುತೆಯ ಬಲೆಯೊಳಗೆ ಸಿಲುಕಿ ಬದುಕಬೇಕಾಗುತ್ತದೆ……

ಆದ್ದರಿಂದ ದಯವಿಟ್ಟು ಗಾಂಧಿಯನ್ನು ಟೀಕಿಸುವ ಮೊದಲು ಸಾಕಷ್ಟು ವಿವೇಚನೆ ಬಳಸಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಧನ್ಯವಾದಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಫೆ.26ರಂದು ಪ್ರಸಿದ್ದ ಮಧುರೆ ಶನಿಮಹಾತ್ಮಸ್ವಾಮಿ 71ನೇ ಬ್ರಹ್ಮರಥೋತ್ಸವ

ಫೆ.26ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ…

2 hours ago

Accident Update: ನೆಲಮಂಗಲದ ಜಿಂದಾಲ್‌ ಸಮೀಪ ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು ಕೇಸ್: ಮೃತರಲ್ಲಿ ಮೂವರ ಕಣ್ಣುಗಳ ದಾನ

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ…

3 hours ago

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಫಾರ್ಮ್ ಪಾರ್ಟಿ: ಸಂತಸದಿಂದ ಪ್ರಾಣಿಗಳ ಜೊತೆಯಲ್ಲಿ ಸಮಯ ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ…

4 hours ago

Accident Update: ಹೊಸಕೋಟೆ ಸರಣಿ ಅಪಘಾತ ಪ್ರಕರಣ ಮಾಸುವ ಮುನ್ನವೇ, ನೆಲಮಂಗಲದ ಜಿಂದಾಲ್‌ ಸಮೀಪ ಮತ್ತೊಂದು ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು: ಮೃತರ ವಿವರ ಇಲ್ಲಿದೆ ನೋಡಿ…

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ…

11 hours ago

ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿದ ಖದೀಮರು

ದೊಡ್ಡಬಳ್ಳಾಪುರ: ಶಿವರಾತ್ರಿ ಹಬ್ಬಕ್ಕೆಂದು ಮನೆಯ ಮುಂದೆ ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು, ಸರ ಕಳ್ಳರು ಎಸ್ಕೇಪ್…

14 hours ago

ನಿಕ್ಷಯ ಮಿತ್ರ (Nikshay Mitra) ಕಾರ್ಯಕ್ರಮ ವೀಕ್ಷಣೆ ಹಾಗೂ ಫುಡ್ ಕಿಟ್ ವಿತರಣೆ

ಕೇಂದ್ರ ಟಿಬಿ ಡಿವಿಷನ್, ದೆಹಲಿಯಿಂದ ನಿಕ್ಷಯ ಮಿತ್ರ ಕಾರ್ಯಕ್ರಮದ ಪ್ರಗತಿ ವೀಕ್ಷಣೆಗಾಗಿ ತಾಂತ್ರಿಕ ಸಹಾಯ ತಂಡವು ದೊಡ್ಡಬಳ್ಳಾಪುರಕ್ಕೆ ಆಗಮಿಸಿ, ನಿಕ್ಷಯ…

14 hours ago