Categories: ಲೇಖನ

UPSC: ಐಎಎಸ್ – ಐಎಫ್ಎಸ್- ಐಪಿಎಸ್….

ಕೇಂದ್ರ ಲೋಕ ಸೇವಾ ಆಯೋಗದ ( UPSC ) ಫಲಿತಾಂಶ ಪ್ರಕಟವಾಗಿದೆ. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲ ಇರಬಹುದು. ಐಎಎಸ್, ಐಎಫ್ಎಸ್ ಐಪಿಎಸ್ ಉದ್ಯೋಗಗಳ ಬಗ್ಗೆ, ಅದರ ಕಾರ್ಯನಿರ್ವಹಣೆ ಬಗೆಗೆ ಸರಳವಾಗಿ ಹೇಳುವ ಒಂದು ಪ್ರಯತ್ನ………

ಭಾರತದಲ್ಲಿರುವುದು ಸಂಸದೀಯ ಪ್ರಜಾಪ್ರಭುತ್ವ. ಅದರ ಮೂರು ಮುಖ್ಯ ಆಧಾರ ಸ್ತಂಭಗಳು ಅಥವಾ ಅಂಗಗಳು ಶಾಸಕಾಂಗ – ಕಾರ್ಯಾಂಗ ಮತ್ತು ನ್ಯಾಯಾಂಗ……

ಶಾಸಕಾಂಗದ ಮುಖ್ಯ ಕಾರ್ಯನಿರ್ವಹಣೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳದು. ರಾಜ್ಯ ಸರ್ಕಾರಗಳಲ್ಲಿ ಎಂಎಲ್ಎ ಅಂದರೆ ವಿಧಾನಸಭಾ ಸದಸ್ಯರು ಜನರಿಂದ ಆಯ್ಕೆಯಾಗಿ ಅವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಕೇಂದ್ರದಲ್ಲಿ ಎಂಪಿ ಅಂದರೆ ಲೋಕ ಸಭಾ ಸದಸ್ಯರು ಆಯ್ಕೆಯಾಗಿ ಪ್ರಧಾನಮಂತ್ರಿಯನ್ನು ಚುನಾಯಿಸುತ್ತಾರೆ. ಇದು ಶಾಸಕಾಂಗದ ಪ್ರಮುಖ ಹುದ್ದೆಗಳು……

ಹಾಗೆಯೇ ನ್ಯಾಯಾಂಗದಲ್ಲಿ ಪ್ರತಿ ರಾಜ್ಯಗಳಲ್ಲಿ ಶ್ರೇಷ್ಠ (ಹೈಕೋರ್ಟ್) ಎಂಬ ನ್ಯಾಯಾಲಯವಿರುತ್ತದೆ. ಅದರಲ್ಲಿ ನ್ಯಾಯಾಧೀಶರುಗಳು ಮತ್ತು ಅವರಿಗೆ ಒಬ್ಬರು ಮುಖ್ಯ ನ್ಯಾಯಾಧೀಶರು, ಹಾಗೆಯೇ ಕೇಂದ್ರದಲ್ಲಿ ಸರ್ವೋಚ್ಚ ( ಸುಪ್ರೀಂಕೋರ್ಟ್ ) ನ್ಯಾಯಾಲಯ ಅದಕ್ಕೆ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳು ಇರುತ್ತಾರೆ…….

ಕಾರ್ಯಾಂಗದಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಸಿಲ್ದಾರ್ ಅಥವಾ ತಾಲೂಕು ದಂಡಾಧಿಕಾರಿಗಳು ಮತ್ತು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ದಂಡಾಧಿಕಾರಿಗಳು ಅಥವಾ ಕೆಲವು ಕಡೆ ಕಲೆಕ್ಟರ್ ಎಂದು ಕರೆಯಲ್ಪಡುವ ಡಿಸಿಗಳು ಆಡಳಿತ ನಡೆಸುತ್ತಾರೆ. ಇವರಿಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿ (ಚೀಫ್ ಸೆಕ್ರೆಟರಿ) ಮುಖ್ಯಸ್ಥರಾಗಿರುತ್ತಾರೆ, ಹಾಗೆಯೇ ಕೇಂದ್ರದಲ್ಲೂ ಸಹ ಇದೇ ಐಎಎಸ್ ಐಪಿಎಸ್ ಐಎಫ್ಎಸ್ ಅಧಿಕಾರಿಗಳು ಆಡಳಿತ ನಡೆಸುತ್ತಾರೆ. ಅವರಿಗೆ ಸಂಪುಟ ಕಾರ್ಯದರ್ಶಿ (ಕ್ಯಾಬಿನೆಟ್ ಸೆಕ್ರೆಟರಿ) ಮುಖ್ಯಸ್ಥರಾಗಿರುತ್ತಾರೆ. ಇದು ದಿನನಿತ್ಯದ ಕಾರ್ಯ ಚಟುವಟಿಕೆಯ ಮೇಲ್ಮೈ ಪ್ರಜಾಪ್ರಭುತ್ವ ವ್ಯವಸ್ಥೆ……..

ಇದರಲ್ಲಿ ಶಾಸಕಾಂಗದ ಸಮಯ ಐದು ವರ್ಷಗಳು ಮತ್ತು ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಶಾಸಕಾಂಗದ ಜನಪ್ರತಿನಿಧಿಗಳು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಿದರು ಕೂಡ ಬಹುತೇಕ ಸಾರ್ವಜನಿಕರಿಗೆ ಹೆಚ್ಚು ಜವಾಬ್ದಾರರಾಗಿರುತ್ತಾರೆ. ವಿವೇಚನಾ ಅಧಿಕಾರವೂ ಸಹ ಇರುತ್ತದೆ…..

ಇನ್ನು ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸಂವಿಧಾನಾತ್ಮಕವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಅವರು ಕಾನೂನು ಹೊರತುಪಡಿಸಿ ಜನಾಭಿಪ್ರಾಯ, ಜನರ ಭಾವನೆಗಳಿಗೆ ಅಂತಹ ಮಹತ್ವವೇನು ನೀಡುವುದಿಲ್ಲ. ಅವರಿಗೂ ಸ್ವಲ್ಪ ವಿವೇಚನೆಯ ಸ್ವಾತಂತ್ರ್ಯಕ್ಕೆ ಅವಕಾಶವಿದೆ….

ಆದರೆ ಕಾರ್ಯಾಂಗ ಈ ಎರಡಕ್ಕೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಕಾನೂನಿಗೂ ಸಂಪೂರ್ಣ ನಿಷ್ಠರಾಗಿರುವುದರ ಜೊತೆಗೆ ಸಾರ್ವಜನಿಕವಾಗಿಯೂ ಅವರು ಜವಾಬ್ದಾರರಾಗಿರುತ್ತಾರೆ. ಹಾಗೆ ನ್ಯಾಯಾಂಗ ಮತ್ತು ಶಾಸಕಾಂಗದ ಒತ್ತಡಗಳಿಗೂ ಅವರು ಉತ್ತರಿಸಬೇಕಾಗುತ್ತದೆ. ಅವರ ಕಾರ್ಯ ಚಟುವಟಿಕೆಗಳಲ್ಲಿ ಈ ಮೂರು ಅಂಶಗಳು ಸೇರಿರುತ್ತದೆ. ಇಂತಹ ಪ್ರಮುಖ ಕಾರ್ಯಾಂಗದ ಅಧಿಕಾರಿಗಳನ್ನು ಕೆಲವು ರಾಜ್ಯಗಳಲ್ಲಿ ಆಯಾ ರಾಜ್ಯ ಲೋಕಸೇವಾ ಆಯೋಗಗಳು ಮತ್ತು ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗ ಅತ್ಯಂತ ಕಠಿಣ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ…..

ನಿಜಕ್ಕೂ ಒಂದು ದೇಶದ ಪ್ರಗತಿ ಆಧರಿಸುವುದು ಇಂತಹ ಕಾರ್ಯಾಂಗದ ಅಧಿಕಾರಿಗಳಿಂದಲೇ. ಏಕೆಂದರೆ ಇವರ ಅಧಿಕಾರ ಅವಧಿ ಹೆಚ್ಚು ಕಡಿಮೆ ಸುಮಾರು 30 ವರ್ಷಗಳು. ಸರ್ಕಾರಗಳು ಬದಲಾದರು ಇವರು ಮಾತ್ರ ಆ ಉದ್ಯೋಗದಲ್ಲಿ ಮುಂದುವರೆಯುತ್ತಲೇ ಇರುತ್ತಾರೆ…..

ಕೆಲವು ವರ್ಷಗಳ ಹಿಂದೆ ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಇಂಜಿನಿಯರಿಂಗ್, ಡಾಕ್ಟರ್ ಆಗಬೇಕೆಂದು ಆಸೆ ಪಡುತ್ತಿದ್ದರು. ಇತ್ತೀಚೆಗೆ ಸಾಫ್ಟ್ವೇರ್ ಇಂಜಿನಿಯರುಗಳಿಗೆ ಸ್ವಲ್ಪ ಬೇಡಿಕೆ ಇದೆ. ಆದರೆ ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಮಕ್ಕಳ ಪೋಷಕರು ಈಗ ಬಹುತೇಕ ತಮ್ಮ ಮಕ್ಕಳು ಐಎಎಸ್ ಐಪಿಎಸ್ ಐಎಫ್ಎಸ್ ಅಧಿಕಾರಿಗಳಾದರೆ ಉತ್ತಮ ಎಂದೇ ಅಪೇಕ್ಷಿಸುತ್ತಾರೆ….

ಇದು ಅಷ್ಟು ಸುಲಭವಲ್ಲ. ನಿಮ್ಮ ಇಡೀ ವ್ಯಕ್ತಿತ್ವ, ಬುದ್ಧಿವಂತಿಕೆ, ವೈಶಾಲ್ಯತೆ, ನೆನಪಿನ ಶಕ್ತಿ, ಕಠಿಣಶ್ರಮ ಎಲ್ಲವನ್ನು ಬೇಡುತ್ತದೆ. ಒಂದು ವರ್ಷಕ್ಕೆ ಇಡೀ ದೇಶದ ಅತ್ಯಂತ ಬುದ್ಧಿವಂತ ಸುಮಾರು ಸಾವಿರ ಜನರಿಗೆ ಮಾತ್ರ ಈ ಅವಕಾಶ ದೊರೆಯುತ್ತದೆ. ಈಗ ಇದಕ್ಕಾಗಿ ಅನೇಕ ತರಬೇತಿ ಶಾಲೆಗಳು, ಅಕಾಡೆಮಿಗಳು, ತರಬೇತಿಯ ವಿಧಾನಗಳು ಬಹಳಷ್ಟು ಬೆಳವಣಿಗೆ ಕಾಣುತ್ತಿದೆ……

ಮೊದಲು ದೆಹಲಿ ಇದರ ಕೇಂದ್ರ ಸ್ಥಾನವಾಗಿತ್ತು. ಅಲ್ಲಿಯೇ ಅತ್ಯುತ್ತಮ ತರಬೇತಿ ನೀಡಲಾಗುತ್ತಿತ್ತು. ಉತ್ತರ ಭಾರತದ ವಿದ್ಯಾರ್ಥಿಗಳು ಹೆಚ್ಚು ಇದರಲ್ಲಿ ಆಯ್ಕೆಯಾಗುತ್ತಿದ್ದರು. ಆದರೆ ಇದು ಈಗ ಬದಲಾವಣೆಯಾಗುತ್ತಿದೆ. ದಕ್ಷಿಣ ಭಾರತೀಯರು ಸಹ ಸಾಕಷ್ಟು ಸಂಖ್ಯೆಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ ಆಗುತ್ತಿದ್ದಾರೆ. ಒಂದು ಅಂದಾಜಿನಂತೆ ಬೆಂಗಳೂರು ಈಗ ಈ ತರಬೇತಿ ವಿಷಯದಲ್ಲಿ ದಕ್ಷಿಣ ಭಾರತದ ಕೇಂದ್ರ ಸ್ಥಾನದಲ್ಲಿದೆ. ಇದು ಒಂದು ರೀತಿಯ ಹೆಮ್ಮೆಯ ವಿಷಯ‌. ಅತ್ಯುತ್ತಮ ಗುಣಮಟ್ಟದ ಅಕಾಡೆಮಿಗಳು, ಕರ್ನಾಟಕದಲ್ಲಿವೆ‌. ಅದರ ಪರಿಣಾಮ ಸಾಕಷ್ಟು ಕನ್ನಡಿಗರು ಸಹ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ….

ಕೇಂದ್ರ ಲೋಕಸೇವಾ ಆಯೋಗದ ಬಗ್ಗೆ ಸಣ್ಣ ಮಾಹಿತಿ……

ಕೇಂದ್ರ ಲೋಕಸೇವಾ ಆಯೋಗ ( UNION PUBLIC SERVICE COMMISSION )

ಭಾರತದ ಆಡಳಿತ ವ್ಯವಸ್ಥೆಯ ಕಾರ್ಯಾಂಗದ ಬಹುಮುಖ್ಯ ಅಧಿಕಾರಿಗಳಾದ ಐಎಫ್ಎಸ್ ಐಎಎಸ್‌ ಐಪಿಎಸ್ ಮತ್ತು ಅದಕ್ಕೆ ಪೂರಕ ಐಆರ್ಎಸ್, ಐಬಿಪಿಎಸ್ ಮುಂತಾದ ಉದ್ಯೋಗಗಳಿಗೆ ಮೂರು ಹಂತದಲ್ಲಿ ಪರೀಕ್ಷೆ ಮಾಡಿ ಅತ್ಯುತ್ತಮ ವ್ಯಕ್ತಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಇದರ ನೇರ ಜವಾಬ್ದಾರಿ ಇರುವುದು ಕೇಂದ್ರ ಲೋಕಸೇವಾ ಆಯೋಗದ ಬಳಿ……

ನಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿ ಭ್ರಷ್ಟಾಚಾರ ಎಷ್ಟೊಂದು ವ್ಯಾಪಕವಾಗಿದೆ ಎಂದರೆ ಅದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ…..

ಆದರೆ ನನಗಿರುವ ಮಾಹಿತಿಯ ಮಿತಿಯಲ್ಲಿ ಹೇಳಬೇಕೆಂದರೆ, ಇಡೀ ಭಾರತದಲ್ಲಿ ಇರುವ ಕೆಲವೇ ಸ್ವತಂತ್ರ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಭ್ರಷ್ಟಾಚಾರ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ರೀತಿಯಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ಕೇಂದ್ರ ಲೋಕಸೇವಾ ಆಯೋಗ…..

ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂರು ಹಂತಗಳಲ್ಲಿ ಆಯ್ಕೆ ನಡೆಯುತ್ತದೆ. ನಂತರ ತರಬೇತಿ ನೀಡಿ ಉದ್ಯೋಗಕ್ಕೆ ಕಳಿಸಲಾಗುತ್ತದೆ. ಯಾವುದೇ ಪದವಿ ಪಡೆದ ಯಾರು ಬೇಕಾದರೂ ಈ ಪರೀಕ್ಷೆ ಬರೆಯಬಹುದು….

ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಪ್ರಕ್ರಿಯೆ ನಡೆಸಲಾಗುತ್ತದೆ. ತೀರಾ ಆಂತರಿಕವಾಗಿ ಕಣ್ಣಿಗೆ ಕಾಣದಂತೆ ಅಪರೂಪಕ್ಕೆ ಸ್ವಜನ ಪಕ್ಷಪಾತ ನಡೆಯಬಹುದೇನೋ. ಅದೂ ಸಹ ತುಂಬಾ ಕಷ್ಟ…..

ಆದರೆ ಉದ್ಯೋಗದ Posting ಸಮಯದಲ್ಲಿ ಬಹುಶಃ ರಾಜಕಾರಣಿಗಳ ಕೈವಾಡ ನಡೆದು ತಮ್ಮ ಅನುಕೂಲಕರ ಸ್ಥಳಗಳಗೆ ಅವರನ್ನು ವರ್ಗಾಯಿಸಿಕೊಳ್ಳಬಹುದು.
ಆಯ್ಕೆಯಾದ ವ್ಯಕ್ತಿಗಳು ನಂತರ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂಬುದು ಬೇರೆ ಮಾತು…..

ಭಾರತದ ಆ ವರ್ಷದ ಅತ್ಯಂತ ಪ್ರತಿಭಾವಂತ ಸುಮಾರು 1000 ಜನರನ್ನು ಆಯ್ಕೆ ಮಾಡುವ ಸಂಸ್ಥೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತದೆ ಎಂದು ಕೇಳುವುದೇ ಸಂತೋಷ ಮತ್ತು ರೋಮಾಂಚನವಲ್ಲವೇ, ಇದು ಬಹುತೇಕ ನಿಜ….

ಇದು ಈಗಿನ ಬೆಳವಣಿಗೆಯಲ್ಲ. ಭಾರತದ ಸ್ವಾತಂತ್ರ್ಯ ನಂತರದ ಕಾಲದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ…..

ಏನೇ ಇರಲಿ ಕನಿಷ್ಠ ಕೆಲವೇ ಕೆಲವು ಸಂಸ್ಥೆಗಳಾದರೂ ತುಂಬಾ ಕಡಿಮೆ ಭ್ರಷ್ಟಾಚಾರ ಇದೆ ಎನ್ನುವುದೇ ನಮ್ಮ ವ್ಯವಸ್ಥೆಯ ಹೆಮ್ಮೆ. ಈ ರೀತಿಯ ಇಡೀ ವ್ಯವಸ್ಥೆಯೇ ಬದಲಾದರೆ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

3 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

19 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago