ಬರ್ತಡೇ ಪಾರ್ಟಿ ಕಂಟಿನ್ಯೂ ಮಾಡಲು ಶಾರ್ಟೇಜ್ ಆಫ್ ಅಮೌಂಟ್: ಮತ್ತಿಗಾಗಿ ಮಧ್ಯರಾತ್ರಿ ರಾಬರಿಗೆ ಇಳಿದ ಪುಂಡರು: ಹೊಡೆದು ಬಡಿದು ದುಡ್ಡು ಕಿತ್ತು ಕಂಠ ಪೂರ್ತಿ ಕುಡಿದು ಎಂಜಾಯ್ ಮಾಡ್ತಿದ್ದ ಪೊರ್ಕಿಗಳು ಅಂದರ್

ಅಂದು ಫ್ರೆಂಡ್ ಬರ್ತಡೇ ಇತ್ತು. ಒಂದೇ ಊರಿನ ಐದು ಮಂದಿ, ಒಬ್ಬ ಕೋಲಾರದ ಮಾಲೂರು ಮೂಲದವನು ಸೇರಿ ಬರ್ತಡೇ ಬಾಯ್ ಗೆ ಕೇಕ್ ಕಟ್ ಮಾಡಿ, ಬರ್ತಡೇ ಪಾರ್ಟಿ ಮಾಡಲು ಮಾ.10 ರಾತ್ರಿ ಸುಮಾರು 11 ಗಂಟೆಗೆ ಬಾರ್ ನಿಂದ ಎಣ್ಣೆ ತಂದು ಕುಡಿಯಕ್ಕೆ ಗೀತಂ ಕಾಲೇಜು ಹಿಂಭಾಗ ಕುಳಿತುಕೊಳ್ಳುತ್ತಾರೆ. ಒಂದೇ ರೌಂಡ್ ಗೆ ತಂದಿರೋ ಎಲ್ಲಾ ಎಣ್ಣೆಯನ್ನ ಮುಗಿಸುತ್ತಾರೆ. ಅದು ಆ ಕುಡುಕರಿಗೆ ಸಾಕಾಗೋದಿಲ್ಲ. ಆ ಎಣ್ಣೆಯಲ್ಲಿ ಕಿಕ್ ಬರೋದಿಲ್ಲ. ಇನ್ನೂ ಕಿಕ್ ಬೇಕೆಂದರೆ ಮತ್ತೆ ಎಣ್ಣೆ ಬೇಕು. ಆದ್ರೆ, ಯಾರ ಜೇಬಲ್ಲಿ ದುಡ್ಡು ಇರೋದಿಲ್ಲ. ಏನಾದ್ರು ಮಾಡಿ ಕುಡಿಲೇ ಬೇಕು ಎಂದು ತೀರ್ಮಾನಿಸಿ ಗೀತಂ ಕಾಲೇಜು ರೋಡ್ ಹಿಡಿತಾರೆ…

ಮಾ. 11ರ ಮುಂಜಾನೆ ಸುಮಾರು 12:40ರ ಸಮಯದಲ್ಲಿ ಈ ಪೊರ್ಕಿಗಳಿಗೆ ಸಿಕ್ಕಿದ್ದು ಗೀತಂ ಕಾಲೇಜಿನ ವಿದ್ಯಾರ್ಥಿಗಳು, ಅನ್ಯ ಕೆಲಸದ ಮೇರೆಗೆ ಪಿಜಿಯಿಂದ ಹೊರಬಂದಿದ್ದಾಗ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡುತ್ತಾರೆ. ಹೊಡೆದು ಬಡೆದು ಮೊಬೈಲ್ ಹಾಗೂ ಜೇಬುಗಳಲ್ಲಿ ಇದ್ದ ಹಣವನ್ನು ಕಸಿದುಕೊಳ್ಳುತ್ತಾರೆ. ನಂತರ ಬಲವಂತವಾಗಿ ಮೊಬೈಲ್ ಪಾಸ್ ವರ್ಡ್ ಪಡೆದು ಆನ್ ಲೈನ್ ಮೂಲಕ ಹಣವನ್ನು ದೋಚುತ್ತಾರೆ… ಹೀಗೆ ಇಬ್ಬರ ಬಳಿ ಸಾವಿರಾರು ರೂಪಾಯಿ ಹಣವನ್ನು ರಾಬರಿ ಮಾಡಿ ಕುಡಿದು ಎಂಜಾಯ್ ಮಾಡುತ್ತಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ಪೋಕರಿಗಳು ಮಂಗ ಮಾಯವಾಗುತ್ತಾರೆ. ಆದರೆ, ಪೊಲೀಸರು ಪೊರ್ಕಿಗಳ ಬೆನ್ನತ್ತಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ… ಓರ್ವ ತಲೆಮರೆಸಿಕೊಂಡಿದ್ದಾನೆ. ಅವನ ಸೆರೆಗೂ ಪೊಲೀಸರು ಬಲೆ ಬೀಸಿದ್ದಾರೆ….

ಬಂಧಿತ ಆರೋಪಿಗಳ ವಿವರ

ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎ1 ಆನಂದ್ ಕುಮಾರ್ (25), ಎ2 ಡ್ರೈವರ್ ತಿಲಕ್ (19) ಎ3 ಗಾರೆ ಕೆಲಸಗಾರ ಆಕಾಶ್ (21), ಎ4 ಡ್ರೈವರ್ ಮುನೇಗೌಡ (21), ಎ5 ಕೋಲಾರದ ಮಾಲೂರು ಮೂಲದ ಅಕ್ಷಯ್ ಕುಮಾರ್, ಸದ್ಯ ತಲೆಮರೆಸಿಕೊಂಡಿದ್ದಾನೆ. ಎ6 ಗೌತಮ್ ಬಂಧಿತ ಆರೋಪಿಗಳು….

ಈ ಖದೀಮರಿಗೆ ಯುವಕರು ಸಿಕ್ಕಿದ್ದಕ್ಕೆ ಹಣ ಮಾತ್ರ ದೋಚಿ ಸುಮ್ಮನಾದ್ರು, ಒಂದು ವೇಳೆ ಯುವತಿಯರು ಸಿಕ್ಕಿದ್ರೆ ಏನು ಗತಿ….? ಈ ಪುಂಡರಿಗೆ ತಕ್ಕ ಪಾಠವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ….

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

Ramesh Babu

Journalist

Recent Posts

ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

2 hours ago

ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…

3 hours ago

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

15 hours ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

16 hours ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

16 hours ago

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

1 day ago