Categories: ಲೇಖನ

ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ಕೆಲವೇ ಪ್ರಮುಖರಲ್ಲಿ ಲಂಕೇಶ್ ಒಬ್ಬರು

ಪಿ. ಲಂಕೇಶ್……..
ಮಾರ್ಚ್ 8, 1935,
ಜನವರಿ 25, 2000….

ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ – ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ……

70/80/90 ರ ದಶಕದಲ್ಲಿ ಕರ್ನಾಟಕ ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ಕೆಲವೇ ಪ್ರಮುಖರಲ್ಲಿ ಲಂಕೇಶ್ ಒಬ್ಬರು.

ಒಬ್ಬ ಸಾಧಾರಣ ಕುಟುಂಬದ ಶಿಕ್ಷಕ ತನ್ನ ಚಿಂತನೆಗಳಿಂದಲೇ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ, ಸಂಘಟನೆ, ರಾಜಕೀಯ, ಹೋರಾಟಗಳಲ್ಲಿ ಒಂದು ಕ್ರಿಯಾತ್ಮಕ ಮತ್ತು ಚಲನಾತ್ಮಕ ಚಳವಳಿ ರೂಪಿಸಿರುವುದು ಒಂದು ಅಧ್ಯಯನ ಯೋಗ್ಯ ವಿಷಯ.

ಹೌದು, ಅವರನ್ನು ತೀವ್ರವಾಗಿ ಪ್ರೀತಿಸುವ ಮತ್ತು ಅಭಿಮಾನಿಸುವ ಒಂದು ವರ್ಗವಿದೆ, ಹಾಗೆಯೇ ತೀಕ್ಷ್ಣವಾಗಿ ವಿರೋಧಿಸುವ – ದ್ವೇಷಿಸುವ ವರ್ಗವೂ ಇದೆ.

ಸ್ವಾತಂತ್ರ್ಯ ನಂತರ ಸುಮಾರು 25/30 ವರ್ಷಗಳು ಭಾರತದಲ್ಲಿ ಗಾಂಧಿ ಪ್ರಭಾವದ ನೆಹರು ಮತ್ತು ಇಂದಿರಾ ಆಡಳಿತ ಆಕ್ರಮಿಸಿಕೊಂಡಿತ್ತು. ಅವರ ಬಹುತೇಕ ಆಡಳಿತ ಬಡವರ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸುತ್ತವೇ ಇರುತ್ತಿತ್ತು. ಚೀನಾ, ಪಾಕಿಸ್ತಾನದ ಜೊತೆ ಒಂದೆರಡು ಯುದ್ಧ ಹೊರತುಪಡಿಸಿದರೆ ಬಹುತೇಕ ಕೃಷಿ, ಕೈಗಾರಿಕೆ, ಸ್ವಾವಲಂಬನೆಯೇ ಅವರ ಆಧ್ಯತೆಯಾಗಿತ್ತು.

ಆದರೆ 1977 ರ ತುರ್ತು ಪರಿಸ್ಥಿತಿಯ ನಂತರ ಭಾರತದ ಸಾಮಾನ್ಯ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ, ರೈತ ಚಳವಳಿ, ದಲಿತ – ಬಂಡಾಯ ಚಳವಳಿ, ಭಾಷೆ ಮತ್ತು ದ್ರಾವಿಡ ಚಳವಳಿ, ಪ್ರಗತಿಪರ ಚಳವಳಿ ಎಲ್ಲವೂ ಅಂದಿನ ಕಾಲಘಟ್ಟದಲ್ಲಿ ‌ಟಿಸಿಲೊಡೆದವು ಮತ್ತು ಮುನ್ನಲೆಗೆ ಬಂದವು. ಆಗ ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಲಂಕೇಶ್ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡರು.

ಅವರ ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮದ ಭಾಷೆಯೇ ಒಂದು ಹೊಸ ತಿರುವಿಗೆ ಕಾರಣವಾಯಿತು. ಮುಂದೆ ಅದರ ಪರಿಣಾಮ ಬಹಳಷ್ಟು ಒಳ್ಳೆಯ, ಒಂದಷ್ಟು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಯಿತು. ಅದು ಈಗಲೂ ಮುಂದುವರಿದಿದೆ.

ಲಂಕೇಶ್ ಅವರ ಬಹುದೊಡ್ಡ ಸಾಮರ್ಥ್ಯ ಅವರ ಚಿಂತನೆಯಲ್ಲ, ಹೋರಾಟವಲ್ಲ, ಸಾಹಿತ್ಯವಲ್ಲ ಅದೆಲ್ಲವನ್ನೂ ಮೀರಿದ ಗ್ರಹಿಕೆ.

ಖುರಾನ್ ಇರಬಹುದು, ಭಗವದ್ಗೀತೆ, ಬೈಬಲ್, ಸಂವಿಧಾನ ಅಥವಾ ಯಾವುದೇ ಧರ್ಮಶಾಸ್ತ್ರವಿರಬಹುದು ಅನೇಕರು ಅನೇಕ ಬಾರಿ ಓದುತ್ತಾರೆ. ಕೆಲವರು ಕಂಠಪಾಠ ಮಾಡಬಹುದು ಎಲ್ಲವನ್ನೂ ನೆನಪಿಟ್ಟುಕೊಳ್ಳಬಹುದು. ಆದರೆ ಅವುಗಳ ವಾಸ್ತವತೆ ಅರಿಯುವಲ್ಲಿ ವಿಫಲರಾಗುತ್ತಾರೆ.

ಯಾವುದೇ ಪರೀಕ್ಷೆಗಳಲ್ಲಿ 100/100 ಅಂಕಗಳನ್ನು ಪಡೆಯಬಹುದು. ಆದರೆ ಅದು ಜ್ಞಾನದ ಆಳವನ್ನು ಅರಿಯುವ ಸಾಧನವಾಗುವುದಿಲ್ಲ. ಒಟ್ಟು ಗ್ರಹಿಕೆ ಮುಖ್ಯ.

ಸಮಾಜವನ್ನು ಗ್ರಹಿಸುವಲ್ಲಿ ಲಂಕೇಶರು ಬಹು ಸೂಕ್ಷ್ಮತೆಯನ್ನು ಹೊಂದಿದ್ದರು. ಮನುವಾದ, ಬಸವ ಧರ್ಮ, ಗಾಂಧಿವಾದ, ಅಂಬೇಡ್ಕರ್ ಚಿಂತನೆಗಳು, ಪ್ರಜಾಪ್ರಭುತ್ವ, ಇಂದಿರಾಗಾಂಧಿಯ ಧೋರಣೆ, ಮಾರ್ಕ್ಸ್ ಮತ್ತು ವಿಶ್ವದ ಇನ್ನಿತರ ವಿಚಾರಗಳ ಜೊತೆಗೆ ಮಣ್ಣಿನ ಸೊಗಡಿನ ಸ್ಥಳೀಯತೆಯನ್ನು ಸಮೀಕರಿಸಿ ಅಭಿಪ್ರಾಯ ರೂಪಿಸಿಕೊಳ್ಳುವ ಅರಿವನ್ನು ಹೊಂದಿದ್ದರು.

ಅಮ್ಮನ ಶ್ರೇಷ್ಠತೆಯನ್ನು ಬಣ್ಣಿಸುತ್ತಾ ಅಮ್ಮನ ಸ್ವಾರ್ಥ ಮತ್ತು ನೀಚತನವನ್ನು ಗುರುತಿಸಬಲ್ಲವರಾಗಿದ್ದರು. ವಿಶ್ವಮಾನವ ಪ್ರಜ್ಞೆಯ ಜೊತೆ ಗೆಳೆತನದ ಅಸೂಯೆಗಳನ್ನು ಅರ್ಥಮಾಡಿಕೊಂಡಿದ್ದರು. ಆದರ್ಶ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಅವರಿಗೆ ತಿಳಿದಿತ್ತು. ತಮ್ಮ ತಪ್ಪುಗಳು, ಅದನ್ನು ಮರೆಮಾಚುವ ವಿಧಾನ, ವ್ಯಕ್ತಿ ಸ್ವಾತಂತ್ರ್ಯ, ಆತ್ಮಾವಲೋಕನ, ಇದರ ನೆರಳಲ್ಲಿ ಮತ್ತೊಬ್ಬರಿಗೆ ವಂಚಿಸುವ ನೋಯಿಸುವ ಕಲೆಗಾರಿಕೆ ಅವರಿಗೆ ಗೊತ್ತಿತ್ತು.

ಜೀವನೊತ್ಸಾಹದ ಕುರುಹಾಗಿ ಬೇರೆಯವರನ್ನು ಅನವಶ್ಯಕವಾಗಿ ಮೇಲೆತ್ತುವ, ಕಾಲೆಳೆಯುವ, ಶಾಂತಿಯ ಸಮಯದಲ್ಲಿ ಸಂಘರ್ಷ ಉಂಟುಮಾಡುವ, ಅದನ್ನು ತಮ್ಮ ವಿಚಾರಗಳ ಅಡಿಯಲ್ಲಿ ಸಮರ್ಥಿಸಿಕೊಳ್ಳುವ ಉದ್ದೇಶ ಪೂರ್ವಕ ತುಂಟತನವೂ ಇತ್ತು.

ಈ ಎಲ್ಲದರ ಪ್ರಭಾವದಿಂದಾಗಿ ಭಿಕ್ಷುಕನ್ನು, ಸಾಮಾನ್ಯನನ್ನು, ಅಸಾಮಾನ್ಯನನ್ನು, ಅದ್ಭುತನನ್ನು ಒಂದು ಜೀವಿಯಂತೆ ಗ್ರಹಿಸಿ ಅವರನ್ನು ವಿಮರ್ಶಿಸಬಲ್ಲ‌ ಪಾಂಡಿತ್ಯ ಅವರಿಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ‌ಅಥವಾ ಯಾರೇ ಇರಲಿ ಅವರ ಶ್ರೇಷ್ಠತೆಯ ಜೊತೆಗೆ ಮನುಷ್ಯ ಸಹಜ ದೌರ್ಬಲ್ಯಗಳನ್ನು ಗುರುತಿಸಿ ಹೇಳಬಲ್ಲವರಾಗಿದ್ದರು.

ಸಾಹಿತ್ಯಕವಾಗಿಯೂ ಜಗತ್ತಿನ ಅದ್ಭುತ ಸಾಹಿತ್ಯವನ್ನು, ವಿಚಾರಗಳನ್ನು ಪತ್ರಿಕೆಯ ಮೂಲಕ ಸಾಮಾನ್ಯ ಜನರಿಗೆ ತಲುಪಿಸಿದರು. ಕಾಮು, ಕಾಪ್ಕ, ಎಲಿಯಟ್, ವರ್ಡ್ಸ್ ವರ್ಥ್, ಶೇಕ್ಸ್ಪಿಯರ್, ಗಾರ್ಸಿಯಾ ಮಾರ್ಕ್ವೆಜ್, ಪ್ಲಾಬೋ ನರೋಡ,, ರೂಮಿ ಮುಂತಾದ ಅದ್ಭುತ ವ್ಯಕ್ತಿಗಳನ್ನು, ಅವರ ಸಾಹಿತ್ಯಕ ಚಿಂತನೆಯನ್ನು ತುಂಬಾ ನಿಷ್ಟರವಾಗಿ ವಿಮರ್ಶಿಸ ಬಲ್ಲವರಾಗಿದ್ದರು.

ದೇಹ ಬಯಲು, ಭಾವ ಬಯಲಿನ, ಮುಕ್ತ ಚಿಂತನೆಯ, ಅತ್ಯಂತ ಸೂಕ್ಷ್ಮ ವಿಮರ್ಶಾತ್ಮಕ ಮನಸ್ಥಿತಿ, ವಾಸ್ತವ ಪರಿಸ್ಥಿತಿ ಅರಿತವರಾಗಿದ್ದರು.

ನಮ್ಮ ಆಧುನಿಕ ಸಮಾಜದ, ಮಾಧ್ಯಮ ಕ್ರಾಂತಿಯ ಒಂದು ಸಮಸ್ಯೆಯೆಂದರೆ, ಜಾಗೃತವಾಗಿರುವ ಬಲ ಮತ್ತು ಎಡ ಪಂಥಗಳ ಮನಸ್ಥಿತಿ ಮತ್ತು ವಿವೇಚನೆಯನ್ನು ನುಂಗಿ ಹಾಕಿದ ಭಾವೋದ್ವೇಗ ಮತ್ತು ಅತಿರೇಕಗಳು.

ಒಬ್ಬ ಜನಪ್ರಿಯ ವ್ಯಕ್ತಿಯನ್ನು ಎಡಕ್ಕೋ ಬಲಕ್ಕೋ ವಾಲಿಸಲಾಗುತ್ತದೆ. ತದನಂತರ ಆತನ ಬಗೆಗಿನ ಅಧ್ಯಯನವನ್ನೇ ಮರೆಯಲಾಗುತ್ತದೆ. ಕೇವಲ ಪರ ವಿರೋಧದ ಚರ್ಚೆ ಮಾತ್ರ ನಡೆಯುತ್ತದೆ.

ಸ್ವತಃ ಲಂಕೇಶರೇ ಹೇಳಿರುವಂತೆ ಆರಾಧನಾ ಭಾವ ಅಥವಾ ದ್ವೇಷ ಅಸೂಯೆಯ ಭಾವ ಎರಡೂ ಸಹ ವಿಮರ್ಶಕರಲ್ಲಿ ಕುರುಡುತನ ಸೃಷ್ಟಿಸುತ್ತದೆ.

ಸತ್ಯವನ್ನು ವಾಸ್ತವವನ್ನು ಗ್ರಹಿಸುವ ಮತ್ತು ಎದುರಿಸುವ ಮಾನಸಿಕತೆಯೇ ಕಡಿಮೆಯಾಗಿದೆ.

ಆ ದೃಷ್ಟಿಯಿಂದ ಲಂಕೇಶ್ ನಿಜಕ್ಕೂ ವಿಚಾರ ಪ್ರಚೋದಕ ನಿಷ್ಠುರವಾದಿ. ಕೆಲವೇ ಅಪರೂಪದ ವ್ಯಕ್ತಿಗಳಿಗೆ ಮಾತ್ರ ಸಾಧ್ಯವಾಗಬಹುದಾದ ನೇರವಂತಿಕೆ ಅವರಲ್ಲಿತ್ತು.

ಅವರ ಚಿಂತನೆಗಳನ್ನು ಒಪ್ಪುವ, ನಿರ್ಲಕ್ಷಿಸುವ, ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರ ಗ್ರಹಿಕೆಯ ಶಕ್ತಿ ಒಂದು ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ, ಸ್ಪೂರ್ತಿದಾಯಕವಾಗಿದೆ ಎಂದು ಹೇಳಬಹುದು.

ಅವರ ಜನುಮ ದಿನದ ನೆನಪಿನಲ್ಲಿ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

16 hours ago

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

1 day ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

3 days ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

3 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

4 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

4 days ago