ಸಮಾಜಸೇವಕ ಮಹೇಂದ್ರ ಬಾಬುಗೆ ಅದ್ಧೂರಿ ಜನ್ಮದಿನ ಆಚರಣೆ


ದೊಡ್ಡಬಳ್ಳಾಪುರ: ಸಾಯಿರಾಂ ಡ್ರಿಪ್ ಇರಿಗೇಷನ್ ಹಾಗೂ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಬಿ. ಮಹೇಂದ್ರ ಬಾಬು ಅವರ 46ನೇ ವರ್ಷದ ಹುಟ್ಟುಹಬ್ಬವನ್ನು ಲಕ್ಷ್ಮಿದೇವಿಪುರ ಗ್ರಾಮದ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಕಳೆದ ಹತ್ತು ವರ್ಷಗಳಿಂದ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹೇಂದ್ರ ಬಾಬು ಅವರು ಗ್ರಾಮದಲ್ಲಿನ ಬಡವರು ಮತ್ತು ನಿರ್ಗತಿಕರ ನೆರವಿಗೆ ಸದಾ ಕೈಜೋಡಿಸುತ್ತಿದ್ದಾರೆ. ಮನೆ ಇಲ್ಲದ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಜೊತೆಗೆ, ಎರಡು ಅಂತಸ್ತಿನ ಒಟ್ಟು 18 ಮನೆಗಳ ನಿರ್ಮಾಣಕ್ಕೆ ಸಹಾಯಧನ ನೀಡಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಬಡ ಕುಟುಂಬಗಳ ಮಕ್ಕಳ ವಿವಾಹಕ್ಕೆ ಬಟ್ಟೆ, ಪಡಿತರ ಸೇರಿದಂತೆ ಅಗತ್ಯ ನೆರವು ಒದಗಿಸುತ್ತಿರುವ ಅವರು, ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರದ ವೆಚ್ಚವನ್ನು ಭರಿಸುವ ಮೂಲಕ ಸಂಕಷ್ಟದ ಸಮಯದಲ್ಲೂ ಕುಟುಂಬಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡಿರುವ ಮಹೇಂದ್ರ ಬಾಬು ಅವರು, ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮತ್ತು ಸಾಮಾಜಿಕ ಕಾಳಜಿಯನ್ನು ಬೆಳೆಸುವ ಕಾರ್ಯದಲ್ಲೂ ತೊಡಗಿದ್ದಾರೆ.

46ನೇ ವರ್ಷದ ಜನ್ಮದಿನದ ಅಂಗವಾಗಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಮಹೇಂದ್ರ ಬಾಬು ಅವರಿಗೆ ಶುಭಾಶಯ ಕೋರಿ, ಸಮಾಜಸೇವೆಯ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ನರಸಿಂಹಮೂರ್ತಿ(ಸುಬ್ಬಣ್ಣ), ಮೂರ್ತಿ, ಗ್ರಾ.ಪಂ.ಮಾಜಿ ಸದಸ್ಯೆ ಲಕ್ಷ್ಮಮ್ಮ, ಮುನಿಯಪ್ಪ, ನರಸಿಂಹಮೂರ್ತಿ(ವೆಲ್ಡಿಂಗ್), ಪ್ರಕಾಶ್, ಕುಮಾರ್, ಹರೀಶ್, ಅರವಿಂದ್, ಮಧು, ದಿಲೀಪ್, ಚೇತನ್, ನಿಖಿಲ್, ಪವನ್, ರವಿರಾಜ್, ನಾರಾಯಣಸ್ವಾಮಿ, ಸುನೀಲ್, ಮದ್ದೂರಮ್ಮ ಇತರರು ಶುಭಾಶಯ ಕೋರಿದರು.

Leave a Reply

Your email address will not be published. Required fields are marked *

error: Content is protected !!