Categories: ಕೋಲಾರ

ಸಿಎಂ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಕೋಲಾರ: ರಾಜ್ಯದಲ್ಲಿನ ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ‌ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಮೆರವಣಿಗೆಯ ಮೂಲಕ ಮೆಕ್ಕೆ ವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು, ಬಿಜೆಪಿ, ಜೆಡಿಎಸ್‌, ಕೇಂದ್ರ ಸರಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಜನಪರವಾದ ಯೋಜನೆಗಳನ್ನು ಜಾರಿ ತಂದು ಜನರ ವಿಶ್ವಾಸವನ್ನು ಗಳಿಸಿದ್ದಾರೆ ಮುಂಬರುವ ತಾಪಂ ಜಿಪಂ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಲಿದ್ದು ಹೇಗಾದರೂ ಮಾಡಿ ಸರಕಾರಕ್ಕೆ ಮತ್ತು ಸಿದ್ದರಾಮಯ್ಯ ನವರ ಆಡಳಿತಕ್ಕೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಷಗಳು ಒಳಸಂಚು ಮಾಡಲು ಹೊರಟಿದ್ದಾರೆ ನಮಗೆಲ್ಲ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು ಮೈತ್ರಿ ಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದು ಜನ ಯಾವತ್ತೂ ಇದ್ದರೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಲೂರು ಶಾಸಕ ಕೆ.ವೈ ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಆಡಳಿತವನ್ನು ಸಹಿಸದ ಮೈತ್ರಿ ಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆ ಮೂಲಕ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ ರಾಜ್ಯದ ಜನರು ಸೇರಿದಂತೆ 136 ಶಾಸಕರು ಸೇರಿದಂತೆ ಸಚಿವ ಸಂಪುಟದ ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ ಹಿಂದಿನ ಬಿಜೆಪಿ ಸರಕಾರದ 40 % ಕಮಿಷನ್ ವಿರುದ್ದ ರಾಜ್ಯಪಾಲರಿಗೆ ದೂರುಗಳು ಕೊಟ್ಟಾಗ ಯಾಕೆ ಕ್ರಮ ವಹಿಸಲಿಲ್ಲ ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಹಳ್ಳಿಗಳಿಂದ ಜನ ಮೈತ್ರಿ ಪಕ್ಷಗಳ ವಿರುದ್ದ ತಿರುಗಿ ಬೀಳಲಿದ್ದಾರೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿರುವ ರಾಜ್ಯಪಾಲರ ಕಛೇರಿಯು ಇವತ್ತು ಬಿಜೆಪಿ ಪಕ್ಷದ ಕಛೇರಿಯಾಗಿದೆ ಕೇಂದ್ರ ಸರಕಾರದ ಕೈಗೊಂಬೆಯ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಇವತ್ತು ಜನತೆಯ ಪರವಾಗಿ ನ್ಯಾಯಕೇಳಕ್ಕೆ ನಾವು ಬಂದಿದ್ದೇವೆ ಹಿಂದೆ ಸರಕಾರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬೈರತಿ ಬಸವರಾಜ್ ಉಸ್ತುವಾರಿ ಸಚಿವರಾಗಿ ಬಿಜೆಪಿ ನೇತೃತ್ವದ ಸರಕಾರವೇ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಸಿದ್ದರಾಮಯ್ಯ40 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತ ರಾಜಕಾರಣಿಗೆ ಕಳಂಕವನ್ನು ತರಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡಿದ್ದಾರೆ ಇವರಿಗೆ ಯಾವುದೇ ನೈತಿಕತೆ ಇಲ್ಲ ಹಿಂದೆ ಬಿಜೆಪಿ ಸರಕಾರದ ವಿರುದ್ದ ದೂರು ಕೊಟ್ಟಾಗ ಮೌನವಾಗಿದ್ದ ರಾಜ್ಯಪಾಲರು ಇವತ್ತು ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡವರು ದೂರು ಕೊಟ್ಟರೆ ನೋಟೀಸ್ ಕೊಡತ್ತಾರೆ ಎಂದರೆ ರಾಜ್ಯಪಾಲರ ಯಾರ ಪರವಾಗಿದ್ದಾರೆ ಕುಮಾರಸ್ವಾಮಿಯ ಊರು ಯಾವುದು ಅವರಿಗೆ ಮುಡಾದಲ್ಲಿ ಸೈಟ್ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಒಬ್ಬ ಬ್ರೋಕರ್ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಜೆಡಿಎಸ್‌ ಐಟಿ ಸೆಲ್ ಅಧ್ಯಕ್ಷ ಸ್ನೇಹಮಯಿ ಕೃಷ್ಣ ಮತ್ತು ಬಿಜೆಪಿ ಶಾಸಕರ ಸಂಬಂದಿ ಪ್ರದೀಪ್ ದೂರು ಕೊಟ್ಟಿದ್ದಾರೆ ಯಾವುದೇ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸದೇ ಏಕಾಏಕಿ ಸಿಎಂ ವಿರುದ್ಧ ನೋಟೀಸ್ ನೀಡಿದ್ದಾರೆ ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಇಲ್ಲದ ಪಕ್ಷಗಳ ವಿರುದ್ದ ಕೇಂದ್ರ ಸರಕಾರದ ನೇತೃತ್ವದ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿದ್ದಾರೆ ಸಂವಿಧಾನಕ್ಕೆ ಅಗೌರವ ತೋರುವ ಮೈತ್ರಿ ಪಕ್ಷಗಳ ವಿರುದ್ದ ಹಳ್ಳಿಗಳಿಂದ ಪ್ರತಿಭಟನೆ ನಡೆಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಿ.ಆದಿನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಚಂಜಿಮಲೆ ರಮೇಶ್, ಕೆ.ಜಯದೇವ್, ನಾಗರಾಜ್, ಮೈಲಾಂಡಹಳ್ಳಿ ಮುರಳಿ, ರವಿರಾಮಸ್ವಾಮಿ, ಹೊನ್ನೇನಹಳ್ಳಿ ಯಲ್ಲಪ್ಪ, ರಂಗನಾಥ್, ವೈ. ಶಿವಕುಮಾರ್, ರತ್ನಮ್ಮ, ಮಮತಾರೆಡ್ಡಿ, ವಕ್ಕಲೇರಿ ರಾಜಪ್ಪ, ಅಂಬರೀಶ್, ಆಫ್ಸರ್, ಷಂಷೀರ್, ಮಂಜುನಾಥ್, ಯುವ ಕಾಂಗ್ರೆಸ್ ಸುನಿಲ್ ನಂಜೇಗೌಡ, ಅಫ್ರಿದ್, ಉರಟಾಗ್ರಹಾರ ಚೌಡರೆಡ್ಡಿ ಮುಂತಾದವರು ಇದ್ದರು

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

1 hour ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

3 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

6 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

7 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

14 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

14 hours ago