ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲೆಂದು ವಧು-ವರರ ಸರಳ ಸಾಮೂಹಿಕ ವಿವಾಹಕ್ಕಾಗಿ ‘ಸಪ್ತಪದಿ’ ಯೋಜನೆ ಜಾರಿಗೆ ತರಲಾಗಿದೆ. ಪ್ರಸ್ತುತ ಈ ಸಪ್ತಪದಿ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಲಾಗಿದೆ.
‘ಮಾಂಗಲ್ಯ ಭಾಗ್ಯ’ ಯೋಜನೆಯ ಉದ್ದೇಶವು ಮದುವೆಗೆ ದುಂದು ವೆಚ್ಚ ಮಾಡುವ ಮೂಲಕ ಬಡ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವುದಾಗಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸಲಾಗಿದೆ.
ಸಪ್ತಪದಿ ಯೋಜನೆಯಡಿಯ ಮಾರ್ಗಸೂಚಿಗಳನ್ನೇ ‘ಮಾಂಗಲ್ಯ ಭಾಗ್ಯ’ದಲ್ಲಿ ಅಳವಡಿಸಲಾಗಿದೆ. ವರನಿಗೆ ಅಂಗಿ-ಧೋತಿ, 5 ಸಾವಿರ ರೂ. ನಗದು ಹಾಗೂ ವಧುವಿಗೆ ಮಂಗಳಸೂತ್ರಕ್ಕಾಗಿ ಸೀರೆ, 1 ಸಾವಿರ ರೂ. ನಗದು, 8 ಗ್ರಾಂ. ಚಿನ್ನದ ತಾಳಿ-ಗುಂಡುಗಳನ್ನ ನೀಡಲಾಗುತ್ತದೆ.
ದೇವಾಲಯ ಆಡಳಿತ ಮಂಡಳಿಗಳು ಮದುವೆಗೆ ಬರುವ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿವೆ. ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹಕ್ಕೆ ಬೇಕಾಗುವ ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ. ದೇವಸ್ಥಾನದಿಂದ ಸಾಧ್ಯವಾಗದಿದ್ದಾಗ ಮಾತ್ರ ವಧು-ವರರಿಗೆ ನೀಡುವ ಆರ್ಥಿಕ ಸಹಾಯ ಧನವನ್ನು ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…