ಕೋಲಾರ: ಸಂವಿಧಾನವನ್ನು ಕೇವಲ ಒಂದು ಜಾತಿಗೆ ಸೀಮಿತವಲ್ಲ ಅದು ದೇಶಕ್ಕೆ ಸೀಮಿತವಾಗಿದೆ. ಅನ್ಯರಾಷ್ಟ್ರದ ಜನರು ನಮ್ಮ ದೇಶದ ಸಂವಿಧಾನದ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೊಂದಿದರೆ ನಾವು ಮಾತ್ರ ಪ್ರತಿ ವಿಷಯದಲ್ಲೂ ವಿರೋಧ ಮಾಡಿಕೊಂಡು ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದ್ದೇವೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಬುಧವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಇಡೀ ವಿಶ್ವದಲ್ಲೇ ಮರೆಯಲಾಗದ ಮಾನವ ಸ್ವರೂಪದ ಮಹಾನ್ ಚೇತನವಾಗಿದ್ದು, ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ರಕ್ಷಣೆ ಪಡೆಯಲು ಅಂಬೇಡ್ಕರ್ ಕಾರಣವಾಗಿದ್ದಾರೆ. ಅವರ ಜೀವನ, ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಾಗಿದೆ. ದೇಶದಲ್ಲಿ ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಒಂದೇ ಎನ್ನುವ ರೀತಿಯಲ್ಲಿ ಬದುಕುವ ಅವಕಾಶವನ್ನು ಸಂವಿಧಾನದಿಂದ ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ತಮ್ಮ ಕುಟುಂಬವನ್ನು ತ್ಯಾಗ ಮಾಡಿ ದೇಶದ ಬಡಜನರ ಬದುಕಿಗೆ ಆಸರೆಯಾಗಿದ್ದಾರೆ. ಅಂತಹ ಮಹಾನ್ ಚೇತನಕ್ಕೆ ಇವತ್ತು ಅಪಮಾನ ಅಗೌರವ ತೋರುವ ಶಕ್ತಿಗಳಿಗೆ ತನ್ನಷ್ಟಕ್ಕೆ ತಾನೇ ಶಿಕ್ಷೆಯನ್ನು ದೇವರು ನೀಡುವಂತಾಗಲಿ. ಪ್ರಾಚೀನ ಕಾಲದಿಂದ ದಲಿತರ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಅದು ಇಂದಿಗೂ ನಿಂತಿಲ್ಲ. ಸಂವಿಧಾನ ಇದ್ದರೂ ಹೆಸರಿಗಷ್ಟೆ ಎಲ್ಲರೂ ಒಂದೇ ಎನ್ನುವ ನೀತಿ ಇದೆ. ಆದರೆ, ನಿಜವಾಗಲೂ ಜಾತೀಯತೆ ಅತಿಯಾಗಿದೆ ಇದನ್ನು ಹೊಗಲಾಡಿಸಿ ನೆಮ್ಮದಿ ಬದುಕು ಕಾಣಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ರಕ್ಷಣೆ ಮಾಡಿದರೆ ಬಿಜೆಪಿ ಸಂವಿಧಾನ ಬದಲಾವಣೆಗೆ ಮುಂದಾಗಿದೆ. ದೇಶದಲ್ಲಿ ಯಾವುದೇ ಚುನಾವಣೆ ಬಂದರೂ ಅಂಬೇಡ್ಕರ್ ಅವರ ಹೆಸರು ಹೇಳದೇ ಇರುವ ಪಕ್ಷಗಳು ಇಲ್ಲ ದಲಿತರ ಬಗ್ಗೆ ಗೌರವದಿಂದ ಕಾಣುವ ಕಾಂಗ್ರೆಸ್ ಪಕ್ಷದಿಂದ ಮುಂದೆ ಇಂಡಿಯಾ ಒಕ್ಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಿ ಮಾಡುವ ಅವಕಾಶಗಳು ಇದ್ದು, ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಜಯಂತಿ ಕೇವಲ ಚುನಾವಣೆ ಬಂದಾಗ ಮಾತ್ರವೇ ಸೀಮಿತಗೊಳಿಸದೇ ವರ್ಷದ 365 ದಿನವು ನೆನೆಯುವಂತಾಗಬೇಕು. ಜಯಂತಿಗೆ ಜಾತಿಯ ಬಣ್ಣ ಕಟ್ಟಬಾರದು. ಸಮಾಜದಲ್ಲಿ ಮೀಸಲಾತಿ ದಲಿತರಿಗೆ ಅಷ್ಟೇ ಸೀಮಿತವಲ್ಲ. ಸಮಾಜದಲ್ಲಿನ ಬಡವರಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಹೋಗಬೇಕು. ಆಗ ಮಾತ್ರವೇ ಸಮಸ್ಯೆಗೆ ಶೀಘ್ರದಲ್ಲಿ ಪರಿಹರಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ಲೋಕೇಶ್, ದಸಂಸ ರಾಜ್ಯ ಸಂಚಾಲಕ ಮೋಹನ್ ರಾಜ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮಲೇಷಿಯಾ ರಾಜಕುಮಾರ್, ವೈ ಶಿವಕುಮಾರ್, ಛತ್ರಕೋಡಿಹಳ್ಳಿ ಮಂಜುನಾಥ್, ಇನಾಯಿತ್ ಪಾಷ, ಪೀಸ್ ಮಂಜು, ನಾಗೇಂದ್ರ, ಖಯ್ತೂಂ, ಪ್ರವೀಣ್ ಮುಂತಾದವರು ಇದ್ದರು
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…