25 ವರ್ಷಗಳ ನಂತರ ತಮಗೆ ಶಿಕ್ಷಣ ನೀಡಿದ ಗುರುಗಳ ಪಾದಪೂಜೆ

ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ಧ್ಯೇಯ ವಾಕ್ಯದೊಂದಿಗೆ ತಾನು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಹಿಂದಿರುಗಿ ನೋಡಿದ ವಿದ್ಯಾರ್ಥಿಗಳೆಂದರೆ 2001-02ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮಾತ್ರ ಎಂದು ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ 2001-02ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುಗಳಿಗೆ ಪಾದಪೂಜೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಓದಿದ ಶಾಲೆಗೆ ಸುಮಾರು 50,000 ಮೌಲ್ಯದ ಶಾಲಾ ಪರಿಕರಗಳನ್ನು ನೀಡಿ ತಮ್ಮ ನೆಚ್ಚಿನ ಗುರುಗಳನ್ನು 25 ವರ್ಷದ ನಂತರ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಮಂಗಳವಾದ್ಯಗಳೊಂದಿಗೆ ಕರೆತಂದು ಪಾದಪೂಜೆ ನೆರವೇರಿಸಿದ ಸಂಸ್ಕೃತಿ ಉಳಿದಿರುವುದು ಅಂದಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದರು

ಮತ್ತೊಬ್ಬ ಶಿಕ್ಷಕಿ ಶೋಭಾ ಮಾತನಾಡಿ, ನಾನೊಬ್ಬ ವಿಜ್ಞಾನ ಶಿಕ್ಷಕಿಯಾಗಿ ವಿಜ್ಞಾನವನ್ನು ಬರಿ ಪ್ರಗತಿಗಷ್ಟೇ ಬಳಸಬೇಕು ನಾವು ನಮ್ಮ ನಿತ್ಯ ಜೀವನವನ್ನು ಉತ್ತಮ ಪರಿಸರದೊಂದಿಗೆ ಜೀವನ ಕಳೆಯಬೇಕು ಆದ್ದರಿಂದ ನಿಮ್ಮ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಎಲ್ಲರೂ ನಾವು ಹಚ್ಚಿರುವ ದೀಪ ಸುಂದರವಾಗಿ ಬೆಳಗುತ್ತಿದೆ ಎಂದರೆ ಅದು ನಾವು ನೀಡಿದ ಸಂಸ್ಕಾರದಿಂದ ಮಾತ್ರ ಇಂದಿನ ಮಕ್ಕಳ ಶಿಕ್ಷಕರ ಬಾಂಧವ್ಯ ಕ್ಷೀಣಿಸುತ್ತಿದೆ ಇಂದು ನೀಡಿದ ಗೌರವ ಯಾವುದೇ ಪ್ರಶಸ್ತಿಗೂ, ಊಹಿಸಲು ಸಾಧ್ಯವಿಲ್ಲದ ಗೌರವವಾಗಿದೆ ನಮ್ಮ ಶಿಕ್ಷಕ ವೃತ್ತಿ ನಮಗೆ ಸಾರ್ಥಕ ಮನೋಭಾವನೆಯನ್ನು ಬೆಳೆಸಿದೆ ಎಂದರು.

ಮತ್ತೊಬ್ಬ ನಿವೃತ್ತ ಮುಖ್ಯ ಶಿಕ್ಷಕ ಜಿಎಂ ಮುನಿಕೃಷ್ಣಪ್ಪ ಮಾತನಾಡಿ, ನನ್ನ 30 ವರ್ಷಗಳ ಸೇವಾ ಅವಧಿಯಲ್ಲಿ 20 ವರ್ಷಗಳು ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಇಂತಹ ತೃಪ್ತಿ ನನಗೆ ಬೇರೆ ಯಾವುದೇ ಶಾಲೆಗಳಲ್ಲೂ ದೊರೆತಿಲ್ಲ ಈ ಬ್ಯಾಚಿನ ಹಳೆಯ ವಿದ್ಯಾರ್ಥಿಗಳ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಶಿಕ್ಷಕಿ ರೇಣುಕಾ ಭಟ್,ಇಂದಿರಾ, ಶೈಲಜಾ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಅನಂತ ಪದ್ಮನಾಭ ಶರ್ಮಾ, ಎ.ಆರ್. ಸುಬ್ಬರಾವ್ .ಸಿ.ಕೆ.ಕೃಷ್ಣಪ್ಪ ನಾರಾಯಣಪ್ಪ ಮಂಜುನಾಥ್ ಗುಮಾಸ್ತರಾದ ಭಾಗ್ಯಮ್ಮ ಹಳೆ ವಿದ್ಯಾರ್ಥಿಗಳಾದ ನವೀನ್, ಸುಬ್ರಹ್ಮಣ್ಯ, ಟಿ.ಡಿ.ರವಿಕುಮಾರ್, ಸಂಪತ್, ವೆಂಕಟೇಶ್, ಗಂಗರಾಜು. ಮೃತ್ಯುಂಜಯ, ಎನ್. ಶಿವಕುಮಾರ್, ಮಮತಾ, ಚೈತ್ರ,ಪಾರ್ವತಿ, ಸೇರಿದಂತೆ ನೂರ ಹತ್ತು ಹಳೆ ವಿದ್ಯಾರ್ಥಿಗಳು ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Ramesh Babu

Journalist

Recent Posts

ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

8 hours ago

ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…

9 hours ago

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

21 hours ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

21 hours ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

22 hours ago

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

1 day ago