ಕೋಲಾರ: ತಾಲೂಕಿನ ನರಸಾಪುರ ಗ್ರಾಮದಲ್ಲಿನ ಬೆಂಗಳೂರು-ಕೋಲಾರದ ಮುಖ್ಯ ರಸ್ತೆಯ ಕಾಮಗಾರಿ ಪ್ರಾರಂಭವಾಗಿ ಸುಮಾರು ದಿನಗಳಾದರೂ ಕಾಮಗಾರಿ ಮುಗಿಸಿಲ್ಲ ಎಂದು ನರಸಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು,
ಈ ಸಂದರ್ಭದಲ್ಲಿ ನರಸಾಪುರ ಗ್ರಾಮ ಸದಸ್ಯ ಕೆಇಬಿ ಚಂದ್ರು ಮಾತನಾಡಿ ಕಾಮಗಾರಿ ಪ್ರಾರಂಭ ಮಾಡಿ ಸುಮಾರು 8 ತಿಂಗಳು ಆಗಿದ್ದರೂ ಇದುವರೆಗೂ ಗುತ್ತಿಗೆಯದಾರು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಪೂರ್ಣಗೊಳಿಸುವಂತೆ ಒತ್ತಾಯ ಮಾಡಿದರು ಕಾಲಹರಣ ಮಾಡುತ್ತಾ ನಮಗೆ ಧೂಳಿನ ಭಾಗ್ಯ ನೀಡಿದ್ದಾರೆ ಎಂದು ಆರೋಪಿಸಿದರು,
ನರಸಾಪುರ ಕೈಗಾರಿಕಾ ಪ್ರದೇಶವಾಗಿರುವುದರಿಂದ ಜನಸಂಖ್ಯೆ ಹೆಚ್ಚಾಗಿದೆ, ಕೈಗಾರಿಕಾ ಪ್ರದೇಶಕ್ಕೆ ಓಡಾಡುವ ಬೃಹತ್ ಪ್ರಮಾಣದ ವಾಹನಗಳು ಹಾಗೂ ಇತರೆ ಎಲ್ಲಾ ರೀತಿಯ ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ಪ್ರತಿನಿತ್ಯ ಓಡಾಡುವುದರಿಂದ ರಸ್ತೆಯ ಮೇಲಿರುವ ದೂಳು ಚಿಮಣಿಯಿಂದ ಬರುವ ಹೊಗೆಯ ರೀತಿಯಲ್ಲಿ ಬರುತ್ತದೆ, ಇದರಿಂದ ರಸ್ತೆಯ ಪಕ್ಕದಲ್ಲಿನ ಅಂಗಡಿಗಳ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಗುತ್ತಿಗೆದಾರನು ಅನೇಕ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಾ ಬರುತ್ತಿದ್ದಾರೆ, ರಸ್ತೆಗೆ ಧೂಳು ಹೇಳದಂತೆ ಸರಿಯಾಗಿ ನೀರನ್ನು ಸಹ ಹಾಕುತಿಲ್ಲ, ಧೂಳು ಮುಕ್ತ ನರಸಾಪುರ ಗ್ರಾಮ ಮಾಡಬೇಕೆಂದು ರಸ್ತೆಗೆ ಡಾಂಬರನ್ನು ಕೂಡಲೇ ಹಾಕಬೇಕೆಂದು ಆಗ್ರಹಿಸಿದರು,
ತಾಪಂ ಮಾಜಿ ಸದಸ್ಯ ಎನ್. ಕೆ. ನಾಗರಾಜ್ ಮಾತನಾಡಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಹಾಗೂ ಗುತ್ತಿಗೆದಾರನ ಬಳಿ ಹೋದರು ಏನು ಪ್ರಯೋಜನವಾಗಿಲ್ಲ, ಇದೇ ರಸ್ತೆಯಲ್ಲಿ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಹೋಗಬೇಕಾಗಿದ್ದು, ಈ ರಸ್ತೆಯಲ್ಲಿನ ಧೂಳಿನ ಪ್ರಭಾವದಿಂದ ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಗೆ ಕಳುಹಿಸಲು ಆತಂಕ ವ್ಯಕ್ತಪಡಿಸಿದ್ದಾರೆ, ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು,
ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬಂದು ಮಾತನಾಡಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಮುಂದಿನ ಮಂಗಳವಾರ ಅಥವಾ ಬುಧವಾರದ ಒಳಗೆ ರಸ್ತೆಗೆ ಡಾಂಬರು ಹಾಕಿ ಕಾಮಗಾರಿಯನ್ನು ಮುಕ್ತಾಯಗೊಳಿಸಿಕೊಡಲಾಗುತ್ತದೆ ಇಂಜಿನಿಯರ್ ಯಾವ ರೀತಿ ಪ್ಲಾನ್ ಹಾಕಿದ್ದಾರೆ ಅದರಂತೆ ಕೆಲಸ ಮಾಡಲಾಗುತ್ತದೆ ಎಂದರು,
ನರಸಾಪುರ ಗ್ರಾಮದ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಸಹಕಾರ ನೀಡಿದರು, ಸ್ಥಳದಲ್ಲಿ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್ ಇದ್ದರು
ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ದಲಿತ ಸಂಘಟನೆ ಮುಖಂಡ ಪುರಹಳ್ಳಿ ಯಲ್ಲಪ್ಪ, ನರಸಾಪುರ ಗ್ರಾಮದ ಮುಖಂಡರುಗಳಾದ ಕುಮಾರ್, ಬಿ ಶ್ರೀನಿವಾಸ್, ಎನ್.ಪಿ ಶ್ರೀನಿವಾಸ್, ಭಾನುಪ್ರಕಾಶ್, ಓಂ ಪ್ರಕಾಶ್, ಗೋಪಿ, ಸುಮನ್, ಮುನಿರಾಜು ಸತೀಶ್, ಶೇಖರ್, ರಾಜೇಂದ್ರ, ಎಲ್. ನಾಗರಾಜ್ ಪಾನಿಪುರಿ ವೆಂಕಟೇಶ್, ಟಿ ಬಾಬು, ಕೃಷ್ಣಪ್ಪ, ಟಿಪ್ಪು, ಉಮೇಶ್, ವರ್ತಕರ ಸಂಘದ ಪದಾಧಿಕಾರಿಗಳು, ಅಂಗಡಿಗಳ ಮಾಲೀಕರಗಳು ಹಾಗೂ ನೂರಾರು ಮುಖಂಡರುಗಳು ಹಾಜರಿದ್ದರು.
ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL)…
ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…
ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…
ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್ಗಳು…
ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…
ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…