ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಜಿಲ್ಲೆಯ ಕೈಮಗ್ಗ, ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಕೆಗಳಲ್ಲಿ ತೊಡಗಿರುವ ನೇಕಾರರು ವಸತಿ ಕಾರ್ಯಗಾರ ಯೋಜನೆಯಡಿ ನೇಕಾರಿಕೆ ವೃತ್ತಿಯಲ್ಲಿ ನಿರತರಾಗಿರುವ ಈ ಹಿಂದೆ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆಯದ, ಸ್ವಂತ ನಿವೇಶನ ಹೊಂದಿರುವ ಅರ್ಹ ವೃತ್ತಿನಿರತ ವಸತಿ ರಹಿತ ನೇಕಾರರಿಂದ ವಸತಿ ಕಾರ್ಯಾಗಾರ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿ ಇರುವ ಅರ್ಹ ಫಲಾನುಭವಿಗಳು ಕಚೇರಿ ಕೆಲಸದ ವೇಳೆಯಲ್ಲಿ ಅರ್ಜಿಯನ್ನು ಪಡೆದು ಜೊತೆಗೆ ಇತ್ತೀಚಿನ ಫೋಟೋ/ ಭಾವಚಿತ್ರ, ನಿವೇಶನದ ದಾಖಲಾತಿಗಳು, ಖಾತಾ ಪ್ರತಿ/ ಹಕ್ಕುಪತ್ರ/ಮಂಜೂರಾತಿ ಪತ್ರ/ ನೊಂದಾವಣೆ ಪ್ರತಿ, ಸ್ಥಳೀಯ ಪ್ರಾಧಿಕಾರದಿಂದ ಪಡೆದ ಕಟ್ಟಡದ ಲೈಸನ್ಸ್ /ಪರವಾನಗಿ, ಸ್ಥಳೀಯ ಪ್ರಾಧಿಕಾರ ಗ್ರಾಮ ಪಂಚಾಯತ್ / ನಗರ ಸಭೆ/ಪುರಸಭೆ ವತಿಯಿಂದ ನೀಡಿದ ನಿರಪೇಕ್ಷಣಾ ಪತ್ರದ ದಾಖಲಾತಿಗಳೊಂದಿಗೆ ನವೆಂಬರ್ 02 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬೇಕು.
ಫಲಾನುಭವಿಗಳು ವಸತಿ ರಹಿತ ನೇಕಾರರಾಗಿರಬೇಕು, ಫಲಾನುಭವಿಯು ವೃತ್ತಿನಿರತ/ ನೇಯ್ಗೆ ಚಟುವಟಕಗಳಲ್ಲಿ ಕಾರ್ಯನಿರತರಾಗಿರಬೇಕು, ನೇಯ್ಗೆ ಚಟುವಟಿಕೆಗಳಿಂದ ಕನಿಷ್ಠ ಶೇಕಡ 50 ರಷ್ಟು ವಾರ್ಷಿಕ ಆದಾಯ ಹೊಂದಿರಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮತ್ತು ಜಿಲ್ಲಾ ವಲಯ ಯೋಜನೆಗಳಡಿ ಯಾವುದೇ ಇಲಾಖೆ ಅಥವಾ ಕಾರ್ಯಕ್ರಮಗಳಲ್ಲಿ ವಸತಿ ಸೌಲಭ್ಯವನ್ನು ಈ ಹಿಂದೆ ಪಡೆದಿರಬಾರದು, ವಸತಿ ರಹಿತ ನೇಕಾರರಾಗಿರಬೇಕು, ಸರ್ಕಾರದ ಯಾವುದೇ ಯೋಜನೆಗಳಡಿ ಪತಿ ಅಥವಾ ಪತ್ನಿಯ ಹೆಸರಲ್ಲಿ ಇಂತಹ ಸೌಲಭ್ಯ ಪಡೆದಿರಬಾರದು, ಒಂದೇ ಕುಟುಂಬದಲ್ಲಿ ವಾಸವಾಗಿರುವ ಸದಸ್ಯರಿಗೆ ಗಂಡ ಅಥವಾ ಹೆಂಡತಿ ಹೆಸರಿನಲ್ಲಿ ಒಂದು ಮನೆಗೆ ಮಾತ್ರ ಈ ಸೌಲಭ್ಯ ಅನ್ವಯಿಸತಕದ್ದು, ನೇಕಾರಿಕೆ ವೃತ್ತಿ ಅವಲಂಭಿಸಿರುವ ಫಲಾನುಭವಿಯು ಕನಿಷ್ಟ 18 ವರ್ಷ ವಯೋಮಿತಿ ಹೊಂದಿರಬೇಕು.
ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ, ಗಾರ್ಮೆಂಟ್ಸ್ ತರಬೇತಿ ಕೇಂದ್ರದ ಕಟ್ಟಡ, ಕೆಐಎಡಿಬಿ ಅಪೇರಲ್ ಪಾರ್ಕ್, ದೊಡ್ಡಬಳ್ಳಾಪುರ-561203, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಕಚೇರಿಯ ಸಮಯದಲ್ಲಿ ಖುದ್ದು ಬೇಟಿ ನೀಡಿ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…
ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…