Categories: ಲೇಖನ

ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ….?

ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ?

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ,……

ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಒಮ್ಮೆ ಚುನಾವಣೆ ನಡೆದು ಸೇವೆಗಾಗಿಯೋ, ಅಧಿಕಾರಕ್ಕಾಗಿಯೋ ಒಟ್ಟಿನಲ್ಲಿ ಬಹುಮತ ಪಡೆದ ವ್ಯಕ್ತಿಯೊಬ್ಬ ಜನ ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಈ ಕಾರ್ಯಕರ್ತರಿಗೆ ಇರುವ ಕೆಲಸವಾದರೂ ಏನು…..

ನಾವೆಲ್ಲರೂ ಭಾರತೀಯರೇ, ವಿವಿಧ ಪಕ್ಷಗಳ ಬೆಂಬಲವನ್ನು ಆ ಸಂದರ್ಭಕ್ಕೆ ತಕ್ಕಂತೆ ಮಾಡುತ್ತೇವೆ. ಗೆದ್ದ ನಂತರ ಅಭ್ಯರ್ಥಿಗಳು ತಮ್ಮ ತಮ್ಮ ಸಂವಿಧಾನಾತ್ಮಕ ಕೆಲಸಗಳನ್ನು ಕಾನೂನು ಅಡಿಯಲ್ಲಿ ಮಾಡುತ್ತಾರೆ. ಏಕೆಂದರೆ ಗೆದ್ದ ನಂತರ ಆತ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿರುವುಳಿದಿಲ್ಲ. ಎಲ್ಲಾ ಸಾರ್ವಜನಿಕರಿಗೂ ಆತ ಸಮಾನ ಪ್ರತಿನಿಧಿ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮಾಡಬಹುದಾದ ಕೆಲಸವಾದರೂ ಏನು….

ಸುಮ್ಮನೆ ಅನಾವಶ್ಯಕವಾಗಿ ಎಂದೋ ಬರುವ ಚುನಾವಣೆಗಾಗಿ, ಯಾವುದೋ ಪಕ್ಷದ ಬೆಂಬಲಿಗನಾಗಿ, ಸದಸ್ಯತ್ವಗಳನ್ನು ಮಾಡಿಸುತ್ತಾ, ಸುಮ್ಮನೆ ಖಾಲಿ ಪೋಲಿ ಸುತ್ತಾಡುತ್ತಾ, ಜನರಲ್ಲಿ ತಮ್ಮ ಪಕ್ಷದ ಬಗ್ಗೆ ಇರುವ, ಇಲ್ಲದಿರುವ ಎಲ್ಲವನ್ನೂ ಹೇಳುತ್ತಾ, ಇನ್ನೊಂದು ಪಕ್ಷವನ್ನು ಟೀಕಿಸುತ್ತಾ, ತಮ್ಮ ಪಕ್ಷ ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸುತ್ತಾ, ಸಾಮಾನ್ಯ ಜನರಲ್ಲಿ ದ್ವೇಷ, ಅಸೂಯೆ ಹುಟ್ಟಿಸುತ್ತಾ ಇರುವ ಈ ಅಜೀವ ಕಾರ್ಯಕರ್ತರ ಅವಶ್ಯಕತೆ ಇದೆಯೇ……

ಚುನಾವಣೆ ಸಂದರ್ಭದಲ್ಲಿ ಮಾತ್ರ, ಆ ಸಮಯದ ಸ್ವಲ್ಪ ದಿನಗಳ ಕಾಲ, ತಮ್ಮ ಪಕ್ಷದ ಸಿದ್ಧಾಂತ, ಸೇವಾ ಮನೋಭಾವ, ಭರವಸೆ, ದೃಷ್ಟಿಕೋನವನ್ನು ಹೇಳುವುದು ಹೊರತುಪಡಿಸಿ ಇವರಿಗೆ ಇನ್ಯಾವ ಕೆಲಸ ಇರುತ್ತದೆ. ಸುಮ್ಮನೆ ಯಾವುದೋ ರಾಜಕೀಯ ವ್ಯಕ್ತಿಗಳ ಹಿಂದೆ ಪುಡಾರಿಯಂತೆ ಜೀವನಪೂರ್ತಿ ಅಲೆದಾಡುವುದು, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡುವುದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಹೆಚ್ಚು ಮಾಡುವುದು ಇವರ ಅನಧಿಕೃತ ಕೆಲಸವಾಗಿರುತ್ತದೆ.
ಜನ ಪ್ರತಿನಿಧಿಗಳಿಗಿಂತ ಇವರದೇ ಹಾವಳಿ ಜಾಸ್ತಿ……

ಇದೊಂದು ರಾಷ್ಟ್ರೀಯ ಸಂಪನ್ಮೂಲದ ನಷ್ಟ ಅಥವಾ ದುರುಪಯೋಗವಲ್ಲವೇ,
ಐದು ವರ್ಷಕ್ಕೋ, ಎರಡು ವರ್ಷಕ್ಕೋ ಇರುವ ಚುನಾವಣೆಗಾಗಿ ಎಲ್ಲ ಕೆಲಸ ಬಿಟ್ಟು ಒಂದು ಪಕ್ಷದ ಪರವಾಗಿ ಜೀವನ ಕಳೆಯುವುದು ಅವಮಾನಕರವಲ್ಲವೇ. ಪ್ರಜಾಪ್ರಭುತ್ವ ಎಂಬ ಕಾರಣದಿಂದ ಸುಮ್ಮನೆ ಪಕ್ಷಗಳಿಗೆ ಜೀತ ಮಾಡುವುದಕ್ಕಿಂತ ಬೇರೆ ಏನಾದರೂ ಒಳ್ಳೆಯ ಕೆಲಸ, ಸಾಧನೆ ಮಾಡಬಹುದಲ್ಲವೇ….

ಕೆಲವರಿಗೆ ಎಂದೋ ಒಂದು ದಿನ, ಯಾವುದೋ ಒಂದು ಅಧಿಕಾರ ದೊರೆಯಬಹುದು ಎಂಬ ಆಸೆಯಿಂದ ಎಷ್ಟೆಲ್ಲಾ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಲಾಮಿತನದ ಕೆಲಸ ಮಾಡಿಕೊಂಡು ಯಾಕೆ ಇರಬೇಕು. ದೇಶ ಮುಖ್ಯವೇ ಹೊರತು ಪಕ್ಷ ಮುಖ್ಯವಲ್ಲ. ಹಾಗಿದ್ದ ಮೇಲೆ ಆ ಪಕ್ಷಕ್ಕಾಗಿ ಏಕೆ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಕು…..

ಯಾರೋ ಒಬ್ಬರು ಗೆಲ್ಲಲಿ. ಚುನಾವಣೆ ಸಂದರ್ಭದಲ್ಲಿ ಮೂರು ತಿಂಗಳು ಮಾತ್ರ ಈ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸಿ ಉಳಿದಂತೆ ಬೇರೆ ಕೆಲಸ ಮಾಡಬಹುದಲ್ಲವೇ. ನಾಯಕನ ಹಿಂದೆ ನಾಯಿಯಂತೆ ಹಿಂಬಾಲಿಸುತ್ತಾ, ಅವನ ಸುಖ ದುಃಖಗಳಲ್ಲಿ ಭಾಗಿಯಾಗಿ, ನಮ್ಮ ಬದುಕನ್ನು ವ್ಯರ್ಥ ಮಾಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ…..

ಆ ಕಾರಣದಿಂದ ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಶಾಶ್ವತ ಕಾರ್ಯಕರ್ತರ ಅವಶ್ಯಕತೆ ಇರುವುದಿಲ್ಲ. ಅದು ಇದ್ದರೂ ಚುನಾವಣೆ ಸಂದರ್ಭದಲ್ಲಿ ಎರಡು ಮೂರು ತಿಂಗಳುಗಳಿಗೆ ಮಾತ್ರ ಸೀಮಿತವಾಗಿರಬೇಕು. ಅನಂತರ ನಾವೆಲ್ಲರೂ ಒಂದೇ. ಈ ಮನೋಭಾವ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಅಂದಾಜು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 10% ಕ್ಕೂ ಹೆಚ್ಚು ಜನ ಕೇವಲ ಈ ರೀತಿಯ ಕೆಟ್ಟ ರಾಜಕೀಯದಲ್ಲಿಯೇ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಕಾರುತ್ತಾ ಸುಮ್ಮನೆ ಕೆಲಸವಿಲ್ಲದೆ ಪ್ರಚಾರ ಮಾತ್ರ ಮಾಡಿಕೊಂಡು ಸಾಗುವುದು ಖಂಡಿತಾ ಅಭಿವೃದ್ಧಿಗೆ ಮಾರಕ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಏನಾದರೂ ಸರಿಯಾದ ವಾಸ್ತವಿಕ ಬದಲಾವಣೆ ಅಥವಾ ಪರಿವರ್ತನೆ ಮಾಡಬೇಕು……

ಇತ್ತೀಚೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಅನಾವಶ್ಯಕವಾಗಿ ಸಮ್ಮೇಳನಗಳು, ಪ್ರದರ್ಶನಗಳು, ಕಾಲ್ನಡಿಗೆ, ಪ್ರತಿಭಟನೆ, ವಿಜಯೋತ್ಸವ ಹೀಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಅದಕ್ಕೆ ಪಕ್ಷದ ಕಾರ್ಯಕರ್ತರ ಹೆಸರಿನಲ್ಲಿ ಸಾವಿರಾರು ಜನರನ್ನು ದುಡಿಸಿಕೊಳ್ಳುತ್ತಿವೆ. ಇದೆಲ್ಲಾ ಅನಾವಶ್ಯಕವಲ್ಲವೇ….

ಇಷ್ಟೊಂದು ಸಮೂಹ ಸಂಪರ್ಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ವಿವಿಧ ಸ್ಯಾಟಲೈಟ್ ತಂತ್ರಜ್ಞಾನ ಬೆಳವಣಿಗೆ ಆಗಿರುವ ಸಂದರ್ಭದಲ್ಲಿ ಈ ಹಳೆಯ ಕಾಲದ ಜೈಕಾರ ಸಂಸ್ಕೃತಿಯ ಪಳೆಯುಳಿಕೆ ಅನಿವಾರ್ಯತೆ ಇದೆಯೇ……

ಇಷ್ಟೇ ಶ್ರಮವನ್ನು ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸಿದರೆ, ಶ್ರಮಪಟ್ಟರೆ ಎಷ್ಟೋ ಉತ್ತಮ ಕೆಲಸಗಳಾಗುತ್ತವೆ. ಗುಲಾಮಿತನದ ಪಕ್ಷಗಳ ಈ ಕಾರ್ಯಕರ್ತರ ಪಡೆ ನಿಜಕ್ಕೂ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ……

ಬೇರೆ ಬೇರೆ ಕೆಲವು ಕಾರಣಗಳನ್ನು ನೀಡಿ ಇದನ್ನು ಸಮರ್ಥಿಸಿಕೋಳ್ಳಬಹುದು. ಅದನ್ನೂ ಮೀರಿ ಅತ್ಯಂತ ಉಪಯೋಗಕಾರಿ ಪರ್ಯಾಯ ಮಾರ್ಗಗಳನ್ನು ಯೋಚಿಸುವುದು ಒಳಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ……

ಇದು ಪಕ್ಷದ ಕಚೇರಿಯ ವಿವಿಧ ಹುದ್ದೆಗಳ ಪದಾಧಿಕಾರಿಗಳಿಗೆ ಅನ್ವಯಿಸುವುದಿಲ್ಲ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

6 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

10 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

11 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

12 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

14 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

17 hours ago