Categories: ಕೋಲಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿದ ಅರಣ್ಯ ಭೂಮಿ ವಶಕ್ಕೆ ಪಡೆಯಲು ರೈತ ಸಂಘ ಮನವಿ

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್‌ರವರ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಸರ್ವೇ ಜಮೀನನ್ನು ಒತ್ತುವರಿಯಾಗಿರುವುದನ್ನು ತೆರೆವುಗೊಳಿಸಿ ಕಾನೂನಿನಲ್ಲಿ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ಒಂದೇ ಕಾನೂನು ಎಂಬುದನ್ನು ಸಾಬೀತು ಪಡಿಸಬೇಕೆಂದು ರೈತ ಸಂಘದಿಂದ ವಲಯ ಅರಣ್ಯಾಧಿಕಾರಿ ರವಿಕೀರ್ತಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ ಮಾತನಾಡಿ ಅರಣ್ಯ ಭೂಮಿಯನ್ನು ಉಳಿಸಲು ಮುಂದಾಗಿರುವ ಅರಣ್ಯ ಅಧಿಕಾರಿಗಳಿಗೆ ಅರಣ್ಯ ಸಚಿವರು ಹೆಚ್ಚಿನ ಭದ್ರತೆ ನೀಡಿ ಒತ್ತುವರಿ ಕಾರ್ಯಾಚರಣೆ ಮುಂದುವರೆಸಲು ಆದೇಶ ಮಾಡುವ ಜೊತೆಗೆ ತಾಂತ್ರಿಕ ದೋಷದ ನೆಪದಲ್ಲಿ ಸರ್ವೇ ಸ್ಥಗಿತಗೊಳಿಸುವ ಮೂಲಕ ಸಾರ್ವಜನಿಕರ ಬಡ ರೈತರು ಶಾಪ ಹಾಕುವ ಮೊದಲು ಬಲಾಡ್ಯರ ಭೂ ಒತ್ತುವರಿ ತೆರೆವುಗೊಳಿಸಬೇಕೆಂದು ಸಲಹೆ ನೀಡಿದರು.

ಹತ್ತಾರು ವರ್ಷಗಳ ಹಿಂದೆ ರಾಜಕೀಯ ಬಲದಿಂದ ಕಾನೂನು ಬಾಹಿರವಾಗಿ ಒಂದೊಂದು ಕುಟುಂಬಕ್ಕೆ 5 ರಿಂದ 100 ಎಕರೆ ವರೆಗೂ ಅರಣ್ಯ ಭೂಮಿಯನ್ನು ಮಂಜೂರು ಮಾಡುವ ಮುಖಾಂತರ ಕೋಟಿ ಕೋಟಿ ಲಂಚದ ವಹಿವಾಟು ನಡೆಯುವ ಜೊತೆಗೆ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೂರಾರು ಕೋಟಿ ಬ್ಯಾಂಕ್ ಸಾಲ ಪಡೆದಿರುವ ಭೂಗಳ್ಳರ ವಿರುದ್ದ ಅರಣ್ಯ ಅಧಿಕಾರಿಗಳ ದೈರ್ಯತೋರಿ ಸಿಂಹಸ್ವಪ್ನವಾಗಿ ಭೂಗಳ್ಳರ ನಿದ್ದೆಗೆಡಿಸುವಂತೆ ಪ್ರಭಾವಿ ರಾಜಕಾರಣಿಗಳ ಒತ್ತುವರಿ ಅರಣ್ಯ ಭೂಮಿಯನ್ನು ತೆರೆವುಗೊಳಿಸಬೇಕೆಂದು ಒತ್ತಾಯಿಸಿದರು.

ತಾಲ್ಲೂಕಾದ್ಯಕ್ಷ ತರ‍್ನಹಳ್ಳಿ ಆಂಜಿನಪ್ಪ ಮಾತನಾಡಿ ಬಡವರ ಬದುಕನ್ನು ಬೀದಿಗೆ ತಳ್ಳಿ 10 ಸಾವಿರ ಕೋಟಿ ಅರಣ್ಯ ಆಸ್ತಿ ಉಳಿಸಿದ್ದೇವೆ ಎಂದು ಹೇಳುವುದು ಸಾಧನೆ ಅಲ್ಲ ನೂರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಲಾಡ್ಯ ಭೂಗಳ್ಳರ ಒತ್ತುವರಿ ತೆರೆವುಗೊಳಿಸಿದಾಗ ಮಾತ್ರ ಅರಣ್ಯಧಿಕಾರಿಗಳ ಸಾಧನೆ ಎಂದು ತೋರಿಸಬಹುದೆಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಒಂದು ಎಕರೆಯಿಂದ 4 ಎಕರೆಯವರೆಗೆ ಕಾನೂನು ಬದ್ದವಾಗಿ ಮಂಜೂರಾಗಿದ್ದರೆ ಅಂತಹವರನ್ನು ರೈತರು ಎಂದು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿ ನ್ಯಾಯ ಕೊಡಿಸಿಕೊಳ್ಳಲು ನಮ್ಮ ಬೆಂಬಲವಿದೆ. ಆದರೆ ಒಂದೇ ಕುಟುಂಬಕ್ಕೆ 10 ರಿಂದ 80 ಎಕರೆ ಯವರೆಗೆ ಮಂಜೂರಾತಿ ನಕಲಿ ಸಾಗುವಳಿಗಳನ್ನು ಸೃಷ್ಠಿಸಿಕೊಂಡು ಅರಣ್ಯ ಭೂಮಿಗೆ ಬ್ಯಾಂಕ್‌ಗಳಲ್ಲಿ ನೂರಾರು ಕೋಟಿ ಕೋಳಿ ಪಾರಂ ಮತ್ತಿತರ ಸಾಲಗಳನ್ನು ಪಡೆದುಕೊಂಡಿರುವವರು ಸಣ್ಣ ರೈತರೇ ಅಮಾಯಕ ರೈತರ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿರುವ ಶ್ರೀಮಂತ ಭೂಗಳ್ಳರಲ್ಲ ಜಮೀನನ್ನು ಕೂಡಲೇ ವಶಕ್ಕೆ ಪಡೆಯದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ ಮಾಜಿ ಶಾಸಕರು ಪ್ರಭಾವಿ ರಾಜಕಾರಣಿಗಳಾದ ಕೆ.ಆರ್ ರಮೇಶ್ ಕುಮಾರ್‌ರವರ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಸರ್ವೇ ಮಾಡಿ ಒತ್ತುವರಿ ತೆರೆವುಗೊಳಿಸಿ ಕಾನೂನಿನಲ್ಲಿ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ಒಂದೇ ಕಾನೂನು ಎಂಬುದನ್ನು ಸಾಭೀತುಪಡಿಸಿ ಅರಣ್ಯ ಜಮೀನನ್ನು ಉಳಿಸಬೇಕು ಇಲ್ಲವೇ ಬಡ ರೈತರ ಭೂಮಿಯನ್ನು ವಾಪಸ್ ನೀಡುವ ಹೋರಾಟಕ್ಕೆ ಚಾಲನೆ ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ರವಿಕೀರ್ತಿ ಅರಣ್ಯ ಭೂಮಿಯನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲಿಯೇ ಮಾಜಿ ಶಾಸಕರ ಅರಣ್ಯ ಒತ್ತುವರಿ ತೆರೆವುಗೊಳಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವ, ದ್ಯಾವಂಡಹಳ್ಳಿ ರಾಜೇಂದ್ರ ರೆಡ್ಡಿ, ಸಹದೇವಣ್ಣ, ಶಪಿ, ತಿಮ್ಮಣ್ಣ, ಗೀರೀಶ್ ಮುಂತಾದವರಿದ್ದರು.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

4 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

14 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

1 day ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

1 day ago