ಪ್ರಿಯತಮೆ ಹೊಟ್ಟೆಗೆ ಚಾಕುವಿನಿಂದ ಇರಿದು ಪ್ರಿಯಕರ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಲೆ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿರುವ ಘಟನೆ ಹೊಸಕೋಟೆ ನಗರದ ಕಾಲೇಜು ರಸ್ತೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಹೇಮಾವತಿ (35) ಕೊಲೆಗೀಡಾದ ಮಹಿಳೆ. ಚಿಂತಾಮಣಿ ಮೂಲದ ವೇಣು (40) ಕೊಲೆಗೈದ ವ್ಯಕ್ತಿ.
ಹೇಮಾವತಿ ಮದನಪಲ್ಲಿಯಿಂದ ಬಂದು ಕಳೆದ ನಾಲ್ಕು ತಿಂಗಳಿಂದ ಹೊಸಕೋಟೆಯಲ್ಲಿ ಮನೆ ಮಾಡಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ವೇಣು ಹಾಗೂ ಹೇಮಾವತಿ ನಡುವೆ ಸ್ನೇಹ ಬೆಳೆದಿದೆ. ಆರೋಪಿ ವೇಣು ಆಗಾಗ ಹೇಮಾವತಿ ಇದ್ದ ಮನೆಗೆ ಬಂದು ಕೆಲ ದಿನ ಇದ್ದು ಹೋಗುತ್ತಿದ್ದ.
ಹೇಮಾವತಿಗೆ ಮದುವೆ ಮಾಡಲು ಆಕೆಯ ಕುಟುಂವಸ್ಥರು ಗಂಡು ನೋಡುತ್ತಿದ್ದರು. ಈ ವಿಚಾರವನ್ನು ವೇಣುಗೆ ತಿಳಿಸುತ್ತಾಳೆ. ಆಗ ಆರೋಪಿ ವೇಣು ನಿಮ್ಮ ಮನೆಯವರು ನೀಡಿದ ಹುಡುಗನನ್ನು ಮದುವೆ ಆಗ ಬೇಡ ಎಂದು ತಿಳಿಸುತ್ತಾನೆ. ಹೀಗೆ ಹಲವು ದಿನಗಳಿಂದ ಹೇಳುತ್ತಾ ಬಂದಿದ್ದ. ಆದರೆ ಮದುವೆ ಮಾತ್ರ ಆಗಿರಲಿಲ್ಲ. ಆಗ ಹೇಮಾವತಿ, ನನ್ನನ್ನು ಮದುವೆ ಆಗು ಇಲ್ಲದಿದ್ದರೆ ನಮ್ಮ ಮನೆಯವರು ನೋಡಯವ ಹುಡುಗನನ್ನು ಮದುವೆ ಆಗುತ್ತೇನೆ ಎಂದು ವೇಣುಗೆ ತಿಳಿಸುತ್ತಾಳೆ. ಇದಕ್ಕೆ ಕುಪಿತಗೊಂಡು, ಅನುಮಾನ ಹೆಚ್ಚಾಗಿ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ರಾತ್ರಿಯೆಲ್ಲಾ ಆಕೆಯ ಜೊತೆ ಕಾಲ ಕಳೆದು ಮುಂಜಾನೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ವೇಣು ಮಹಿಳೆಯನ್ನ ಕೊಲೆ ಮಾಡಿ ಚಿಂತಾಮಣಿಗೆ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸದ್ಯ ಕೊಲೆ ಆರೋಪಿ ವೇಣು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…
ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…
ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…
ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…
ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದು*ರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.…