2026-27ನೇ ಸಾಲಿನ ರಾಜ್ಯ ಬಜೆಟ್: ಬಜೆಟ್ ಬಗ್ಗೆ ಶಾಸಕ ಧೀರಜ್ ಮುನಿರಾಜ್ ಏನಂದ್ರು ಗೊತ್ತಾ….? ಅವರ ಪ್ರತಿಕ್ರಿಯೆ ಇಲ್ಲಿದೆ ನೋಡಿ….

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಎಲ್ಲಾ ಬಜೆಟ್ ಗಳ ಪೈಕಿ 2026-27ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಈ ಬಜೆಟ್ ನಲ್ಲಿ ಹೊಸ ಯೋಜನೆ ಯಾವುದು ಇಲ್ಲ. ಬಡವರು, ಮಹಿಳೆಯರು, ದಲಿತರು, ಹಿಂದುಳಿದ ವರ್ಗದವರು, ಶ್ರಮಿಕರು, ನೇಕಾರರು, ರೈತರು ಹಾಗೂ ಇತರೆ ವರ್ಗದವರ ಪರವಾಗಿ ಯಾವುದೇ ಯೋಜನೆ ಇಲ್ಲ. ಗ್ಯಾರೆಂಟಿಗಳಿಗೆ ಮಾತ್ರ ಹೆಚ್ಚು ಒತ್ತನ್ನ ನೀಡಲಾಗಿದೆ ಅಷ್ಟೇ. ರಾಜ್ಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಜೆಟ್ ನ ಶೇ.18ರಷ್ಟು ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಾರೆ‌ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ..

100ರೂ. ಅಲ್ಲಿ 18ರೂ. ಅನ್ನು ಸಾಲವಾಗಿ ಪಡೆದು ಖರ್ಚು ಮಾಡುತ್ತಿರುವ ಕೀರ್ತಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ…4 ಲಕ್ಷದ 46ಸಾವಿರ ಕೋಟಿ ಗ್ರಾತ್ರದ ಬಜೆಟ್ ನಲ್ಲಿ 100 ರುಪಾಯಿಯಲ್ಲಿ 84 ರೂ. ಗಳನ್ನು ಗ್ಯಾರೆಂಟಿಗಳು, ಪೆನ್ಷನ್, ವೇತನ, ಈಗಾಗಲೇ ಸಾಲ ಪಡೆದಿರುವ 8 ಲಕ್ಷದ 24ಸಾವಿರ ರೂ.ಗೆ ಬಡ್ಡಿಯನ್ನು ಕಟ್ಟಲು ಮೀಸಲು ಇಡಲಾಗಿದೆ…ಇನ್ನು ಉಳಿದ ಕೇವಲ 16ರೂ‌. ಅನ್ನು ಮಾತ್ರ ಬಂಡವಾಳ ವೆಚ್ಚಕ್ಕೆ ಬಳಸಲಾಗುತ್ತಿದೆ…ಎಂದರು.

ಕಳೆದ ಮೂರು ವರ್ಷಗಳಿಂದ ಆದಾಯ ಕೊರತೆ 148%ರಷ್ಟಿದೆ.. ನಮ್ಮ ಅಂದರೆ ಜನ ಕಟ್ಟುವ ತೆರಿಗೆಯನ್ನು ಅತ್ಯಂತ ಕೆಟ್ಟದಾಗಿ ಉಪಯೋಗಿಸಲಾಗುತ್ತಿದೆ…ಈ ವರ್ಷ 1 ಲಕ್ಷದ 32 ಸಾವಿರ ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದಾರೆ… ಈ ಸಾಲ ಅಭಿವೃದ್ಧಿಗಾಗಿ ಬಳಕೆ ಮಾಡಲ್ಲ. ಕೇವಲ 71 ಸಾವಿರ ಕೋಟಿ ಮಾತ್ರ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಾರೆ ಅಷ್ಟೇ…ಎಂದು ತಿಳಿಸಿದ್ದಾರೆ…

ವೃಷಭಾವತಿ ವ್ಯಾಲಿ ನೀರಿನ ಬಗ್ಗೆ ಸ್ಪಷ್ಟನೆ

ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ(ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಅಲ್ಲ) 119 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ..ಎಂದರು.

ನೆಲಮಂಗಲ ತಾಲೂಕಿನ 20 ಕೆರೆಗಳು, ಗೌರಿಬಿದನೂರು ತಾಲೂಕಿನ 37 ಕೆರೆಗಳು, ದೇವನಹಳ್ಳಿ ತಾಲೂಕಿನ 32 ಕೆರೆಗಳು, ದೊಡ್ಡಬಳ್ಳಾಪುರ ತಾಲೂಕಿನ(ದೇವನಹಳ್ಳಿ ವಿಧಾಸಭಾ ಕ್ಷೇತ್ರ) 21 ಕೆರೆಗಳು, ಬೆಂಗಳೂರು ಉತ್ತರ ತಾಲೂಕಿನ 9 ಕೆರೆಗಳನ್ನು ಒಳಗೊಂಡಂತೆ ಒಟ್ಟಾರೆ 119ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ

ದೊಡ್ಡಬಳ್ಳಾಪುರ ತಾಲೂಕಿನ (ದೇವನಹಳ್ಳಿ ವಿಧಾನಸಭಾ ಕ್ಷೇತ್ರ) ಕೆರೆಗಳ ಪಟ್ಟಿ

1. ಕಾರ್ನಾಳ ಕೆರೆ

2. ಲಕ್ಷ್ಮೀದೇವಿಪುರ ಕೆರೆ

3. ತಿರುಮಗೊಂಡನಹಳ್ಳಿ ಕೆರೆ

4. ಕುರುವೆಗೆರೆ ಕೆರೆ

5. ಕಾರ್ನಾಳ ಕೆರೆ(1)

6. ಕಸಬಾ ತೂಬಗೆರೆ ಕೆರೆ

7. ಗೂಳ್ಯ ನಂದಿಗುಂದಿ ಕೆರೆ

8. ಮೆಳೇಕೋಟೆ ಕೆರೆ

9. ಗಂಟಿಗಾನಹಳ್ಳಿ ಕೆರೆ

10. ಕಂಚಿಗಾನಳ ಕೆರೆ

11. ತಪಸೀಪುರ ಕೆರೆ

12. ದೊಡ್ಡರಾಯಪ್ಪನಹಳ್ಳಿ ಕೆರೆ

13. ಶ್ರೀನಿವಾಸಪುರ ಕೆರೆ

14. ನಾಗಶೆಟ್ಟಿಹಳ್ಳಿ(ಚೀಲೇನಹಳ್ಳಿ) ಕೆರೆ

15. ಅಂತರಹಳ್ಳಿ ಕೆರೆ

16. ಬಚ್ಚಹಳ್ಳಿ ಕೆರೆ

17. ಕಲ್ಲದೇವನಹಳ್ಳಿ (ಶಿರವಾರ) ಕೆರೆ

18. ಕಮಲೂರು ಕೆರೆ

19. ತಪಸೀಹಳ್ಳಿ ಕೆರೆಗಳಿಗೆ ವೃಷಭಾವತಿ ನೀರನ್ನು ಬಿಡಲಾಗುವುದು…

ಆದರೆ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಒಂದು ಕೆರೆಗೂ ವೃಷಭಾವತಿ ವ್ಯಾಲಿಯಿಂದ ಬರುವ ನೀರನ್ನು ಬಿಡಿಸುವುದಿಲ್ಲ… ಅದಕ್ಕೆ ನಾನು ಬದ್ಧನಾಗಿದ್ದೇನೆ..ಎಂದು ತಿಳಿಸಿದ್ದಾರೆ…

ದೊಡ್ಡಬಳ್ಳಾಪುರ ಸಮಗ್ರ ಅಭಿವೃದ್ಧಿಗೆ 150 ಯೋಜನೆಗಳನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾಗ ಕಾಂಗ್ರೆಸ್ ಶಾಸಕರು ಒಬ್ಬರೂ ಖುಷಿಯಿಂದ ಟೇಬಲ್ ಕುಟ್ಟಿಲ್ಲ. ಯಾರಿಗೂ ಈ ಬಜೆಟ್ ತೃಪ್ತಿ ಕೊಟ್ಟಿಲ್ಲ ಎಂದರು.

ದೊಡ್ಡಬಳ್ಳಾಪುರಕ್ಕೆ ಬಜೆಟ್ ನಲ್ಲಿ ಘೋಷಣೆ ಆದ ಪ್ರಮುಖಾಂಶಗಳು

• ದೊಡ್ಡಬಳ್ಳಾಪುರದಲ್ಲಿ ಹೊಸದಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ.

• ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗುವುದು.

• ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ʻವಿಜ್ಞಾನ ನಗರʼ ವನ್ನು (ಸೈನ್ಸ್ ಸಿಟಿ) 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮಕೈಗೊಳ್ಳಲಾಗುವುದು.

• ಕಾರ್ಮಿಕ ಇಲಾಖೆ ವತಿಯಿಂದ ಹಂತ-2ರಲ್ಲಿ ದೇವನಹಳ್ಳಿ (ಗುಂಡಂಗೆರೆ ಕ್ರಾಸ್-ತೂಬಗೆರೆ ಹೋಬಳಿ)ಯಲ್ಲಿ “ಶ್ರಮಿಕ ವಸತಿ ಶಾಲೆ”ಯನ್ನು  ಪ್ರಾರಂಭಿಸಲಾಗುವುದು.

• ದೊಡ್ಡಬಳ್ಳಾಪುರ ನಗರದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಬಜೆಟ್ ನಲ್ಲಿ ಘೋಷಣೆ….

• ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೆ 620 ಕೋಟಿ ರೂ ಮತ್ತು ಉಪಕರಣಗಳ ಖರೀದಿಗೆ 220 ಕೋಟಿ ರೂ ಗಳು ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಸ್ಪತ್ರೆಯ ಕಾಮಗಾರಿಯೂ ಸಹ ಒಂದಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದರು.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

8 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

13 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

16 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago