Categories: ಲೇಖನ

ನಿಮಿಷಾ ಪ್ರಿಯ….

ನಿಮಿಷಾ ಪ್ರಿಯ…….

ಬದುಕು ಜಟಕಾ ಬಂಡಿ,
ವಿಧಿ ಅದರ ಸಾಹೇಬ,
ಕುದುರೆ ನೀನ್,
ಅವನು ಪೇಳ್ದಂತೆ ಪಯಣಿಗರು,
ಮದುವೆಗೋ ಮಸಣಕೋ, ಹೋಗೆಂದ ಕಡೆಗೋಡು,
ಪದ ಕುಸಿಯೇ ನೆಲವಿಹುದು
ಮಂಕು ತಿಮ್ಮ,…….
ಡಿವಿಜಿ.

ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ ಪಾಲಕ್ಕಾಡಿನ ನಿಮಿಷಾ ಪ್ರಿಯ ಎಂಬ ದಾದಿ, ಬದುಕಿನ ಆಕಸ್ಮಿಕ ಹೊಡೆತಕ್ಕೆ ಸಿಲುಕಿ ಕೊಲೆ ಆರೋಪದ ಅಪರಾಧ ಸಾಬೀತಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಸಾವು ಬದುಕಿನ ನಡುವೆ ದಿನಗಳನ್ನು ದೂಡುತ್ತಾ ಯಾವುದೇ ಕ್ಷಣದಲ್ಲಿ ನೇಣುಗಂಬಕ್ಕೇರುವ ಅಥವಾ ಬಿಡುಗಡೆಯಾಗಿ ಹೊಸ ಬದುಕಿನೊಂದಿಗೆ ತನ್ನ ಹುಟ್ಟೂರಿಗೆ ಬರುವ ಅತ್ಯಂತ ತೆಳುವಾದ ಗೆರೆಯ ಮಧ್ಯೆ ನಿಂತಿದ್ದಾಳೆ.

ಕೆಲವು ವಿಷಯಗಳೇ ಹಾಗೆ. ಇದ್ದಕ್ಕಿದ್ದಂತೆ ತುಂಬಾ ಪ್ರಚಾರಕ್ಕೆ ಬಂದು ಬಿಡುತ್ತವೆ. ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಮಾತ್ರ ವಿಶೇಷ ಮಹತ್ವವನ್ನು ಪಡೆಯುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ನಡೆದಿದ್ದರು ಜ್ಯೋತಿಸಿಂಗ್ ಎಂಬ ನಿರ್ಭಯ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆಯಿತು. ಹಾಗೆಯೇ ಈಗ ನಿಮಿಷಾ ಪ್ರಿಯ ದೇಶದ ಎಲ್ಲರ ಮನಸ್ಸುಗಳಲ್ಲಿ ಸೇರಿ ಕುತೂಹಲದಿಂದ, ಮರುಕದಿಂದ ಬಿಡುಗಡೆಗಾಗಿ
ಪ್ರಾರ್ಥಿಸುವಂತಾಗಿದೆ.

ಇಡೀ ಘಟನೆಯ ಬಗ್ಗೆ ಬಂದಿರುವ ಸುದ್ದಿಗಳ ಆಧಾರದಲ್ಲಿ ಹೇಳುವುದಾದರೆ ಆಕೆಯದು ಉದ್ದೇಶಪೂರ್ವಕ ಕೊಲೆಯಲ್ಲ. 2017 ರಲ್ಲಿ ಸಾಂಸಾರಿಕ ಮತ್ತು ವ್ಯಾವಹಾರಿಕ ಘರ್ಷಣೆಯಲ್ಲಿ ಕೋಪದಿಂದ ತನ್ನ ಸಹಪಾಠಿಗೆ ನೀಡಿದ ಅನಸ್ತೇಶಿಯಾ ಮಾದರಿಯ ಔಷಧದ ಡೋಸ್ ಹೆಚ್ಚಾಗಿ ಆತ ನಿಧನ ಹೊಂದಿ, ಈಕೆಯನ್ನು ಕೊಲೆ ಆರೋಪದಲ್ಲಿ ಬಂಧಿಸಿ ಅಪರಾಧಿಯನ್ನಾಗಿ ಮಾಡಲಾಗಿದೆ. ಬಹುತೇಕ ಗಲ್ಲು ಶಿಕ್ಷೆ ಖಾಯಂ ಆಗಿದೆ. ಅದನ್ನು ತಪ್ಪಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಆಕೆ ಮರಳಿ ಭಾರತಕ್ಕೆ ಜೀವಂತ ಬಂದು ಹೊಸ ಬದುಕು ರೂಪಿಸಿಕೊಳ್ಳಲಿ ಎಂದು ತುಂಬು ಹೃದಯದಿಂದ ನಿಮ್ಮೆಲ್ಲರ ಪರವಾಗಿ ಹಾರೈಸುತ್ತಾ……

ಬದುಕೇ ಹಾಗೆ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಆಕಸ್ಮಿಕವಾಗಿ ಅನೇಕ ತಿರುವುಗಳನ್ನು ಪಡೆಯುತ್ತಾ ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಆ ಕೊಂಡೊಯ್ಯುವಿಕೆ ಪ್ರಗತಿಪರವಾಗಿ, ಸುಖಕರವಾಗಿ, ಆರೋಗ್ಯಕರವಾಗಿ, ಸಹಜವಾಗಿ ಇದ್ದರೆ ಅದೊಂದು ಯಶಸ್ವಿ ಬದುಕು. ಆದರೆ ಅದೇ ಬದುಕು ವಿಫಲವಾಗಿ, ಅಸಹಾಯಕವಾಗಿ, ವಿನಾಶದತ್ತ ಕೊಂಡೊಯ್ದರೆ ಆ ಬದುಕು ಅತ್ಯಂತ ಅಸಹನೀಯ ಮತ್ತು ದುರಾದೃಷ್ಟಕರವಾಗಿರುತ್ತದೆ.

ನಿಮಿಷಾ ಪ್ರಿಯ ಬದುಕು ಕೂಡ ಹಾಗೆ ವಿನಾಶದತ್ತ ಸಾಗಿದೆ. ಸುಮಾರು ಎಂಟು ವರ್ಷಗಳಿಂದ ಸತತವಾಗಿ ಜೈಲಿನಲ್ಲಿ ಕೊಳೆಯುತ್ತಾ ತನ್ನದಲ್ಲದ ದೇಶದಲ್ಲಿ, ಸದಾ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿರುವ, ಭಾರತದಂತ ಪ್ರಜಾಪ್ರಭುತ್ವ ಸರ್ಕಾರ ಇಲ್ಲದ, ಧರ್ಮಾಧಾರಿತ ದೇಶದಲ್ಲಿ ಒಂಟಿಯಾಗಿ, ಜೈಲಿನ ಸರಳುಗಳ ನಡುವೆ ಕಾಲ ಕಳೆಯುತ್ತಿರುವ ನಿಮಿಷಾ ಪ್ರಿಯ ಮಾನಸಿಕ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. ಬಹುಶಃ ಮಧ್ಯವಯಸ್ಕಳಾಗಿರುವ ಆಕೆ ತನ್ನ ಪರಿಸ್ಥಿತಿಗೆ ಎಷ್ಟೊಂದು ಪಶ್ಚಾತಾಪ ಪಡುತ್ತಿರಬಹುದು ಅಥವಾ ದೃಢ ಮನಸ್ಸಿನಿಂದ ತಾನು ಬಿಡುಗಡೆಯಾಗುವುದಾಗಿ ಆತ್ಮವಿಶ್ವಾಸದಿಂದ ಇರಬಹುದೇ. ಆಕೆಗೆ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ವಿಷಯಗಳು ಅರಿವಿರಬಹುದೇ….

ಯಾವುದೋ ವಾಸಿಯಾಗದ ಖಾಯಿಲೆಯಂತೆ, ಎಲ್ಲೋ ದಾರಿ ತಪ್ಪಿ ಕಳೆದು ಹೋದ ಆತಂಕದಂತೆ, ವಿಷಾನಿಲಕ್ಕೆ ಸಿಲುಕಿ ಉಸಿರುಗಟ್ಟಿದಂತೆ, ಪ್ರಪಾತಕ್ಕೆ ಬಿದ್ದು ಭಯಭೀತವಾದಂತೆ, ನೀರಿನ ಪ್ರವಾಹಕ್ಕೆ ತುತ್ತಾಗಿ ಕೊಚ್ಚಿ ಹೋದಂತೆ ನಿಮಿಷಾ ಪ್ರಿಯ ಮನಸ್ಸು ಅಲ್ಲೋಲ ಕಲ್ಲೋಲ ಆಗಿರಬಹುದಲ್ಲವೇ…

ಈ ರೀತಿಯ ಘಟನೆಗಳು ನಮ್ಮ ಅರಿವಿಗೆ ಬಂದಾಗ ನಾವು ಅದರ ಮೂಲವನ್ನು ಗಂಭೀರವಾಗಿ ಯೋಚಿಸಿ ಆತ್ಮವಿಮರ್ಶೆ ಮಾಡಿಕೊಂಡು ನಮ್ಮೊಳಗಿನ ತಾಳ್ಮೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ದುಡುಕಿ ಅತ್ಯಂತ ಅಪಾಯಕಾರಿ ಕೆಲಸಗಳಿಗೆ ಮುಂದಾಗಬಾರದು. ಅದರಿಂದಾಗಿ ಇಡೀ ಬದುಕೇ ಸರ್ವನಾಶವಾಗುತ್ತದೆ.

ಏನೇ ಆಗಲಿ ಆಕೆಯ ಬಿಡುಗಡೆಗಾಗಿ ನಡೆಯುತ್ತಿರುವ ಸಂಧಾನ ಯಶಸ್ವಿಯಾಗಿ ಆಕೆಗೆ ಮರುಜೀವ ಸಿಗಲಿ ಎಂದು ಮತ್ತೊಮ್ಮೆ ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

18 minutes ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

5 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

7 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

10 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

11 hours ago

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

22 hours ago