Categories: ಲೇಖನ

ನಮ್ಮ ಎಲ್ಲ ಭಾವನೆಗಳನ್ನು ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು

” Looking ugly and madness is the ultimate status (Freedom ) of mind ”

” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ ”
ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು…..

ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ….

ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ…..

ಬಗೆಹರಿಸಲಾಗದ, ಗೊಂದಲದ ಪರಿಸ್ಥಿತಿಯಲ್ಲಿ, ವೈರುಧ್ಯಮಯ ಗುಣಗಳ ಜನರ ನಡುವೆ ಉಂಟಾಗುವ ಸಂಘರ್ಷಮಯ ಮನಸ್ಥಿತಿ ನಮ್ಮನ್ನು ಆ ಹಂತಕ್ಕೆ ತಲುಪಿಸುತ್ತದೆ….

ಸೌಂದರ್ಯ, ಅಧಿಕಾರ, ಆಸ್ತಿ, ಹಣ, ಸಂಬಂಧಗಳು, ಬುದ್ದಿವಂತಿಕೆ, ಒಳ್ಳೆಯತನ, ಹೆಸರು ಎಲ್ಲವೂ ನಮ್ಮನ್ನು ನಿರಂತರವಾಗಿ ಒತ್ತಡದಲ್ಲಿ ಇಟ್ಟಿರುತ್ತವೆ. ಇದು ಯಾವುವೂ ನಮಗೆ ನಮ್ಮ ಸ್ವಾತಂತ್ರ್ಯ ಅನುಭವಿಸಲು ಬಿಡುವುದಿಲ್ಲ. ಇವುಗಳನ್ನು ಗಳಿಸಿಕೊಳ್ಳಲು ಎಷ್ಟು ಶ್ರಮಪಡಬೇಕೋ ಅದನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚು ಶ್ರಮಪಡಬೇಕು…..

ಅಸೂಯಾಪರ, ಉಢಾಪೆ ಮನೋಭಾವದ, ವಿಷಯಗಳ ಆಳವನ್ನು ಸಂಪೂರ್ಣವಾಗಿ ಗ್ರಹಿಸದ, ವ್ಯಕ್ತಿ ಸ್ವಾತಂತ್ರ್ಯದ ಅರ್ಥವೇ ಗೊತ್ತಿಲ್ಲದ, ತಮಗೆ ಯಾವ ರೀತಿಯು ಸಂಬಂಧವೇ ಇಲ್ಲದ ವಿಷಯಗಳಲ್ಲಿ ಮೂಗು ತೂರಿಸುವ ಜನರಿರುವ ಈ ಸಮಾಜದಲ್ಲಿ, ಕಾಲೆಳೆಯುವುದನ್ನೇ ಉದ್ಯೋಗ ಮಾಡಿಕೊಂಡಿರುವ ಒಂದು ವರ್ಗವೇ ಇದೆ. ಅದರ ನಡುವೆ ಹೋರಾಡಿ ನಮ್ಮ ಆ ಭ್ರಮಾಲೋಕದ ಪಟ್ಟವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಇಡೀ ಬದುಕನ್ನು ಸವೆಸಿಬಿಡುತ್ತೇವೆ. ನಮ್ಮ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವೇ ಆಗುವುದಿಲ್ಲ…..

” ಪ್ರಪಂಚ ನನ್ನ ನೋಡಿ ನಕ್ಕಾಗ ನಾನು ಪ್ರಪಂಚ ನೋಡಿ ನಗುತ್ತೇನೆ ” ( When world Laugh’s at me I Laugh’s at the world )
ಎಂಬ ಮನಸ್ಥಿತಿ ನಮಗೆ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿಕೊಂಡುತ್ತದೆ….

ಇದೊಂದು ಹುಚ್ಚುತನ. ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಬದುಕಿನ ಸಾಧನೆಗಳು, ವಿಫಲತೆಗಳು, ಸಂಕೀರ್ಣತೆ, ನೋವುಗಳು, ನಿರಾಸೆಗಳು, ಗೊಂದಲಗಳು, ಯಶಸ್ಸಿನ ಉತ್ತುಂಗದಲ್ಲಿ ಅನುಭವಿಸುವ ಶೂನ್ಯತೆ ಮುಂತಾದ ಅನೇಕ ಸನ್ನಿವೇಶಗಳ ಪರಿಣಾಮ ಆತ್ಮಹತ್ಯೆಯ ಹಂತ ಮೀರಿದ ಮೇಲೆ ಈ ಸ್ಥಿತಿ ನಿರ್ಮಾಣವಾಗುತ್ತದೆ…..

ಏಕೆಂದರೆ ದುರ್ಬಲ ಮನಸ್ಥಿತಿಯ ಜನ ಈ ಹಂತದಲ್ಲಿ ಆತ್ಮಹತ್ಯೆಗೆ ಅಥವಾ ದುಶ್ಚಟಗಳಿಗೆ ಅಥವಾ ಆಧ್ಯಾತ್ಮಿಕ ಸನ್ಯಾಸಕ್ಕೆ ಜಾರುವ ಸಾಧ್ಯತೆ ಹೆಚ್ಚು. ಅದನ್ನು ಮೀರಿ ಸಹಜವಾಗಿ ಅನುಭವಿಸುವ ಸ್ವಾತಂತ್ರ್ಯವೇ ಈ ಹುಚ್ಚು ಮನಸ್ಥಿತಿ…..

ಹಾಗೆಂದು ಇದು ಮಾನಸಿಕ ಅಸ್ವಸ್ಥತೆಯಲ್ಲ. ಅತ್ಯಂತ ಸಹಜ ಸ್ಥಿತಿ. ಆದರೆ ಇಂದಿನ ಅಸಹಜ ಜೀವನಶೈಲಿ, ಸಮಾಜ ಸೃಷ್ಟಿಸಿರುವ ಯಶಸ್ಸುಗಳ ಮಾನದಂಡ, ಜನರ ವೇಗದ ಬದುಕು ಸಹಜತೆಯನ್ನೇ ಅಸಹಜವಾಗಿ ಮಾಡಿದೆ. ಬದುಕು ಅವಕಾಶ ಕೊಟ್ಟರೆ ಇದನ್ನು ಅನುಭವಿಸಲು ಪ್ರಯತ್ನಿಸಿ. ಇನ್ನೊಬ್ಬರನ್ನು ಮೆಚ್ಚಿಸುವ ಹಂಗಿಲ್ಲದ ನಮ್ಮದೇ ಸ್ವತಂತ್ರ ಮನಸ್ಥಿತಿ ಇದು. ಜೊತೆಗೆ ಇದೊಂದು ಪ್ರಜಾಸತ್ತಾತ್ಮಕ ಗುಣ. ನಮ್ಮನ್ನು ಟೀಕಿಸುವವರಿಗೂ ಇದು ಅವಕಾಶ ಮಾಡಿಕೊಡುತ್ತದೆ….

ಈ ಸ್ಥಿತಿಯನ್ನು ಪದಗಳಲ್ಲಿ ವರ್ಣಿಸುವುದು ಸ್ವಲ್ಪ ಕಷ್ಟ. ಅದೊಂದು ಅನುಭಾವ. ಆದರೂ ಅದನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ ಈ ಲೇಖನ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಮೂರು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ರೌಡಿ ಶೀಟರ್ ಅರೆಸ್ಟ್! ದೊಡ್ಡಬಳ್ಳಾಪುರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ | 2 ಕೆ.ಜಿ. 64 ಗ್ರಾಂ ಗಾಂಜಾ ವಶ

ದೊಡ್ಡಬಳ್ಳಾಪುರ: ಸುಮಾರು ಮೂರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ವೊಬ್ಬ ಗಾಂಜಾ ಮಾರಾಟ ಮಾಡಲು ಬಂದಾಗ ಪೊಲೀಸರ ಬಲೆಗೆ…

13 minutes ago

ಡಿವೈಡರ್ ದಾಟಿ ಆಲ್ಟೋ ಕಾರಿಗೆ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ದೇವನಹಳ್ಳಿ: ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ…

34 minutes ago

15 ನೇ ಸೆಪ್ಟೆಂಬರ್ 2026, ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ…

  ಸಂವಿಧಾನದ ಆಶಯಗಳು ಇರುವುದು ಕೇವಲ ಓದುವುದಕ್ಕಾಗಿಯಲ್ಲ, ಅದನ್ನು ಕಾಯಾ ವಾಚಾ ಮನಸಾ ಅನುಸರಿಸಲಿಕ್ಕಾಗಿ.‌ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ…

3 hours ago

ಗಣೇಶ ಹಬ್ಬದ ಸಂಭ್ರಮದ ನಡುವೆ ಮಸಣವಾದ ಮನೆ: ಅಗ್ನಿ ದುರಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…

5 hours ago

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

17 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

17 hours ago