ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಲಕ್ಷಾಂತರ ರೂ. ಗೆ ಮಾರಾಟ: ಜನರಿಗೆ ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡಿದ್ದ‌ ಕೋಲಾರದ ಖತರ್ನಾಕ್ ಗ್ಯಾಂಗ್ ಹೊಸಕೋಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಕೋಲಾರದ ಖತರ್ನಾಕ್ ಗ್ಯಾಂಗ್ ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 65 ಲಕ್ಷ ವಂಚನೆ ಮಾಡಿದ್ದಾರೆ. ಬೆಂಗಳೂರು ಹೊರಹೊಲಯವೇ ಇವರ ಟಾರ್ಗೆಟ್ ಏರಿಯಾಗಳು..

ತಾಲೂಕು ಕಚೇರಿ, ಹೋಟೆಲ್ ಗಳ ಬಳಿ ತೆಲುಗು ಭಾಷೆ ಮಾತಾಡೋರೇ ಇವರ ಬಂಡವಾಳ.. ಆತ್ಮೀಯ ಪರಿಚಿತರಂತೆ ಬಿಲ್ಡಪ್ ಕೊಟ್ಟು ಬ್ರೈನ್ ವಾಶ್ ಮಾಡಿ, ಕೇರಳದ ಒಂದು ಜಾಗದಲ್ಲಿ ಭೂಮಿ ಕೆಲಸ ಮಾಡುವಾಗ ಚಿನ್ನದ ಹಾರ ಸಿಕ್ಕಿದೆ..ಅದು ರಾಜಮಹಾರಾಜರ ಕಾಲದ ಚಿನ್ನದ ಹಾರ, ಈಗಿನ ಚಿನ್ನದ ರೇಟಿಗಿಂತ ಹೆಚ್ಚು.. ಹೀಗೆ ವ್ಯಕ್ತಿಗಳನ್ನ ಬ್ರೈನ್ ವಾಶ್ ಮಾಡಿ ಮೊಬೈಲ್ ನಲ್ಲಿ ನಕಲಿ ಚಿನ್ನದ ಹಾರವನ್ನು ತೋರಿಸೋದು.. ನಂಬಿಕೆ ಬರಲಿ ಅಂತ ಎರಡು ಚಿನ್ನದ ಅಸಲಿ ಗುಂಡುಗಳನ್ನ ತೋರಿಸಿ ಇದು ಸರದ ತುದಿಯ ಗುಂಡುಗಳು ಎಂದು ನಂಬಿಕೆ ಬರುವಂತೆ ಚರ್ಚೆ ಮಾಡೋದು, ಎಂಟು ಕೆಜಿ ಚಿನ್ನದ ಹಾರವನ್ನು ಕಡಿಮೆ ಬೆಲೆಗೆ ಕೊಡ್ತೇವೆಂದು ಯಾಮಾರಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ಈ‌ ಗ್ಯಾಂಗ್.

ಎಲ್ಲಾ ಮೊಬೈಲ್ ನಲ್ಲೇ ನೋಡಿ ವಿಡಿಯೋ ಕಾಲ್ ಮೂಲಕ ಜಾಗ ಫಿಕ್ಸ್ ಮಾಡಿ, ಈ ಮೂಲಕ ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್ ಆಗೋದು ಇವರ ಕೆಲಸ. ಮನೆಗೆ ಹೋಗಿ ಪರಿಶೀಲಿಸಿದ್ದ ಹಣ ಕೊಟ್ಟಿದ್ದ ವ್ಯಕ್ತಿಗಳು ಶಾಕ್ ಆಗುತ್ತಿತ್ತು.

ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಪೊಲೀಸರಿಂದ ಪ್ರಮುಖ ಆರೋಪಿ ರಾಜೇಶ್ ಎಂಬಾತ ಸೇರಿ ನಾಲ್ವರ ಬಂಧನ ಮಾಡಲಾಗಿದೆ….

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

10 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

10 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

12 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

21 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

23 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

1 day ago