“ದೊಡ್ಡಬಳ್ಳಾಪುರ ಸ್ಯಾರಿ ಸಂತೆ” ರಘು ದೀಕ್ಷಿತ್ ಸಂಗೀತದೊಂದಿಗೆ ತೆರೆ: ಮಹಿಳೆಯರ ಮನ ಗೆದ್ದ ಸ್ಯಾರಿ ಸಂತೆ: 2 ಕೋಟಿಗೂ ಅಧಿಕ ವಹಿವಾಟು

ಕಳೆದ ಮೂರು ದಿನಗಳಿಂದ ನಡೆದ “ದೊಡ್ಡಬಳ್ಳಾಪುರ ಸ್ಯಾರಿ ಸಂತೆ”ಗೆ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು. ಮೂರು ದಿನಗಳ ಕಾಲ ಲಕ್ಷಾಂತರ ಮಂದಿ ಸ್ಯಾರಿ ಸಂತೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಂತಿಮ ದಿನವಾದ ಭಾನುವಾರ ಖ್ಯಾತ ಸಂಗೀತ ಮಾಂತ್ರಿಕ ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಕೋಟಿಗೂ ಅಧಿಕ ವಹಿವಾಟು

ಮೂರು ದಿನಗಳ ಕಾಲ ನಡೆದ ಸ್ಯಾರಿ ಸಂತೆ ಮಹಿಳೆಯ ಮನ ಗೆದ್ದಿದ್ದಲ್ಲದೆ, ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಆಯೋಜಕರ ಪ್ರಕಾರ ಸುಮಾರು 2 ಕೋಟಿ ರೂ. ಗು ಅಧಿಕ ವ್ಯಾಪಾರ ಆಗಿದೆ ಎನ್ನಲಾಗಿದೆ.

ಭಾರತದ ಮ್ಯಾಂಜೆಸ್ಚರ್ ಅಂತಾನೇ ದೊಡ್ಡಬಳ್ಳಾಪುರ ನಗರವನ್ನು ಕರೆಯಲಾಗುತ್ತಿದೆ, ನೇಕಾರಿಕೆ ಇಲ್ಲಿನ ಮೂಲ ವೃತ್ತಿ, ಇತ್ತಿಚೇಗೆ ಸೂರತ್ ಸೀರೆಗಳಿಂದ ಇಲ್ಲಿನ ನೇಕಾರಿಕೆ ನೆಲಕಚ್ಚಿತ್ತು, ನೇಕಾರರು ಸಂಕಷ್ಟದಲ್ಲಿದ್ದರು, ದೊಡ್ಡಬಳ್ಳಾಪುರ ಸೀರೆಗಳಿಗೆ ಮಾರುಕಟ್ಟೆಯನ್ನ ಕಲ್ಪಿಸ ಬೇಕೆನ್ನುವ ಉದ್ದೇಶದಿಂದ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ಸ್ಯಾರಿ ಸಂತೆ ಕಾರ್ಯಕ್ರಮವನ್ನು ಶಾಸಕರಾದ ಧೀರಜ್ ಮುನಿರಾಜು ಅಯೋಜನೆ ಮಾಡಿದ್ದರು.

ಸ್ಯಾರಿ ಸಂತೆಯಲ್ಲಿ ದೊಡ್ಡಬಳ್ಳಾಪುರ ನೇಕಾರರು ತಾವು ನೇಯ್ದ ಸೀರೆಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು, ಸುಮಾರು 75 ಸೀರೆ ಮಾರಾಟ ಮಳಿಗೆಗಳನ್ನ ನೇಕಾರರು ಹಾಕಿದ್ದರು, ಸ್ಯಾರಿ ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ, ಇದರಿಂದ ನೇಕಾರರು ಖುಷಿಗೊಂಡಿದ್ದಾರೆ.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ನಮ್ಮ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ರೈತಪರವಾರ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಹೈನುಗಾರಿಕೆ, ಫ್ಲೋರಿ ಕಲ್ಚರ್ ಗೆ ಬೋರ್ಡ್ ಸ್ಥಾಪನೆಗೆ ಲೋಕಸಭೆಯಲ್ಲಿ ಖಾಸಗಿ ಬಿಲ್ ಮಂಡಿಸಿದ್ದಾರೆ. ಅದೇ ರೀತಿ ನೇಕಾರರ ಮಳಿಗೆ ಕಟ್ಟಲು ಸರ್ಕಾರದಲ್ಲಿ ಅನುದಾನ ಇಲ್ಲ ನಿಮ್ಮ ಅನುದಾನದಲ್ಲಿ ಹಣ ಮೀಸಲಿಡಬೇಕು ಅದೇ ರೀತಿ ಹ್ಯಾಂಡ್ ಲೂಮ್ ರಿಸರ್ವೇಶನ್ ಆಕ್ಟ್ ನಂತೆ ಪವರ್ ಲೂಂ ರಿಸರ್ವೇಶನ್ ಆಕ್ಟ್ ಜಾರಿಗೆ ತಂದು ನೇಕಾರರ ಸಂಕಷ್ಟ ನೀಗಿಸಬೇಕು ಎಂದು ಮನವಿ ಮಾಡಿದರು.

Ramesh Babu

Journalist

Recent Posts

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

3 hours ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

3 hours ago

ಸ್ಟಿಂಗ್ ವಿಡಿಯೋ ವಿವಾದ: ಪೊಲೀಸ್ ತನಿಖೆ, ನ್ಯಾಯಾಲಯದ ಮೊರೆ ಹೋದ ಮಾಜಿ ಸಿಎಂ ಸಿದ್ದರಾಮಯ್ಯ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ…

14 hours ago

ಅಕ್ಟೋಬರ್ 26 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್ 26 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ…

17 hours ago

ಮೀಸಲಾತಿ ಹೆಚ್ಚಳ ವಿಚಾರ: ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಕುರಿತು ಸಂಪುಟದಲ್ಲಿ ಚರ್ಚೆ- ಡಿಸಿಎಂ ಡಾ ಜಿ.ಪರಮೇಶ್ವರ್

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ…

21 hours ago

ಕರ್ನಾಟಕದ ನೂತನ ರಾಜ್ಯಪಾಲರು ಯಾರು ಗೊತ್ತಾ…?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಮೂರು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಬದಲಾವಣೆ…

1 day ago