RSS ನೋಂದಣಿಗೆ ಆಗ್ರಹಿಸಿ ಪ್ರತಿಭಟನೆ; ರಾಷ್ಟ್ರಪತಿಗಳಿಗೆ ಮನವಿ

ದೊಡ್ಡಬಳ್ಳಾಪುರ : ಹೊರದೇಶಗಳಲ್ಲಿ ಅಲ್ಲಿನ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಘ ಪರಿವಾರ, ಇಲ್ಲಿನ ನೆಲದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ದೇಶದ್ರೋಹವಲ್ಲದೇ ಮತ್ತೇನು..? ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಚಂದ್ರತೇಜಸ್ವಿ ಅವರು ಪ್ರಶ್ನೆ ಮಾಡಿದರು.

ನಗರದ ತಾಲ್ಲೂಕು ಕಚೇರಿ ಮುಂದೆ ಭೀಮ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ನಡೆದ, ನಕಲಿ ದೇಶಭಕ್ತ ಅರ್ ಎಸ್ ಎಸ್ ನೋಂದಣಿಗಾಗಿ ಒತ್ತಾಯಿಸಿ ಮತ್ತು ಕೋಮುವಾದಿ ರಾಜಕಾರಣವನ್ನು ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಗತ್ತಿನ 38 ರಾಷ್ಟ್ರಗಳಲ್ಲಿ ಸಂಪರ್ಕ ಹೊಂದಿರುವ ಸಂಘ ಪರಿವಾರ 2240 ಅಂಗಸಂಸ್ಥೆಗಳನ್ನು ಹೊಂದಿದೆ. ಆದರೆ, ಅದರ ಕಾರ್ಯ ಚಟುವಟಿಕೆ ತುಂಬಾ ನಿಗೂಢವಾಗಿದೆ. ಇಡೀ ದೇಶದಲ್ಲಿ ಕೋಮು ವಿಭಜನೆ, ಅಲ್ಪಸಂಖ್ಯಾತರು ಮತ್ತು ಚರ್ಚುಗಳ ಮೇಲೆ‌ ದಾಳಿ, ದಲಿತರು ಮಹಿಳೆಯರ ಮೇಲಿನ ಶೋಷಣೆಗೆ ಈ ಸಂಘಟನೆಯ ಬೆಂಬವಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಮುನ್ನ 40 ಸಾವಿರದಷ್ಟಿದ್ದ ಶಾಖೆಗಳ ಸಂಖ್ಯೆ ಕಳೆದ 12 ವರ್ಷಗಳಲ್ಲಿ 88 ಸಾವಿರಕ್ಕೆ ಏರಿಕೆಯಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ಹೊರ ದೇಶದಲ್ಲೇ 2,300 ಕೋಟಿ ಹಣ ಸಂಗ್ರಹವಾಗಿದೆ. ಈ ಹಣವನ್ನು ಬೇರೆ ಬೇರೆ ಮೂಲಗಳಲ್ಲಿ ಅಕ್ರಮವಾಗಿ ನಮ್ಮ ದೇಶಕ್ಕೆ ಹಣ ಸಾಗಣೆ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಲೆಕ್ಕಪತ್ರಗಳನ್ನು ಇಟ್ಟಿಲ್ಲ. ಸರ್ಕಾರಕ್ಕೆ ಲೆಕ್ಕ ಕೊಡುವುದಿಲ್ಲ‌ ಆದ್ದರಿಂದ ಈ ಕೂಡಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಿಮೋಚನಾ ಚಳವಳಿ ಸಂಘಟನೆಯ ರಾಜ್ಯಾಧ್ಯಕ್ಷ ಮುನಿ ಆಂಜಿನಪ್ಪ ಮಾತನಾಡಿ, ಕಳೆದ 12 ವರ್ಷಗಳಿಂದಲೂ ದೇಶದಲ್ಲಿ ಕೋಮುವಾದಿ ರಾಜಕೀಯ ರಾರಾಜಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪರೋಕ್ಷವಾಗಿ ಬಿ.ಜೆ.ಪಿಯ ಮೂಲಕ ಮನುವಾದಿ ಮನಸ್ಥಿತಿಯಂತೆ ಕೇವಲ
ಸುಳ್ಳುಗಳಿಂದ ಕೂಡಿದ ಮತ್ತು ದೇವರು-ಧರ್ಮದ ಹೆಸರಿನಲ್ಲಿ ನಡೆಸುತ್ತಿದೆ. ಈ ಹೀನ ರಾಜಕೀಯ ವ್ಯವಸ್ಥೆಯಿಂದಾಗಿ 76 ವರ್ಷಗಳ ಇತಿಹಾಸವುಳ್ಳ ಭಾರತದ ಸಂವಿಧಾನದ ಮೇಲೆ ತೀವ್ರತರ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಭಾವನೆ ದೇಶದ ಜನಮಾನಸದಲ್ಲಿ ಬೆರೆತು ಎನ್ ಡಿಎ ಸರ್ವಾಧಿಕಾರಿಯ ಆಡಳಿತವನ್ನು ಭವ್ಯ ಭಾರತದ ಏಕತೆ ಮತ್ತು ಪರಂಪರೆ, ದೇಶವು ನಡೆದು ಬಂದ ದಾರಿಯನ್ನು ಜನತೆ ಪದೇಪದೇ ಅವಲೋಕಿಸುತ್ತಿರುವುದು ಸುಳ್ಳಾಗಿ ಉಳಿದಿಲ್ಲ ಎಂದರು.

ಅರ್ ಎಸ್ ಎಸ್ ನ ನೆರಳಿನಲ್ಲಿ ಬಿಜೆಪಿ ನಡೆಸುತ್ತಿರುವ ಕೋಮುವಾದದ ದುರಾಡಳಿತವನ್ನು ನಾಡಿನ ಜನತೆ ನಿತ್ಯವೂ ಲೆಕ್ಕ ಹಾಕುವಂತಾಗಿದೆ. ನೂರು ವರ್ಷಗಳು ತುಂಬಿದೆಯೆಂದು ಶತಮಾನದ ಸಂಭ್ರಮಾಚರಣೆಯಲ್ಲಿ ಬೀಗುವ ಅರ್ ಎಸ್ ಎಸ್ ಸಂಚಾಲಕರಾದ ಮೋಹನ್ ಭಾಗವತ್‌ ರಿಗೆ ವಾರ್ಷಿಕ 54 ರಿಂದ 55 ಕೋಟಿ ರೂಪಾಯಿಗಳ ತೆರಿಗೆದಾರನ ಹಣವನ್ನು ರಕ್ಷಣೆಗಾಗಿ ವೆಚ್ಚ ಮಾಡಲಾಗುತ್ತಿದೆ. ದೇಶದ ಸಂವಿಧಾನದ ಪ್ರಕಾರ ಕಾನೂನು ಪಾಲಿಸಿ ಸಂಘವನ್ನು ನೊಂದಾಯಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಪ್ರಿಯಾಂಕ್ ಖರ್ಗೆರವರು ಒತ್ತಾಯಿಸಿದ್ದೇ ಪ್ರಮಾದವಾಗಿಬಿಟ್ಟಿದೆ. ಮಂತ್ರಿಗಳ ವಿರುದ್ಧ ಸಂಘ ಪರಿವಾರದವರು ಮನಸ್ಸಿಗೆ ಬಂದಂತೆ ವಿಷ ಕಾರುತ್ತಾ, ಹೀಯಾಳಿಸಿ ನಿತ್ಯವೂ ಬೈಗುಳದ ಸುರಿಮಳೆಗೈಯ್ಯುತ್ತಿರುವುದು ನಾಗರೀಕ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯದಿಲ್ಲ. ದೇಶವು ಪರಿಕೀಯರಿಂದ ಸ್ವಾತಂತ್ರ್ಯ ಪಡೆಯಲು ಹನಿರಕ್ತ ನೀಡದೇ ದೂರ ಉಳಿದ ಮನುವಾದಿಗಳು ಮನುಧರ್ಮವನ್ನು ದೇಶದಲ್ಲಿ ಮತ್ತೊಮ್ಮೆ ಜಾರಿಗೊಳಿಸಲು ಹವಣಿಸುತ್ತಿರುವ ಸಂಘ ಪರಿವಾರದ ಕೋಮುವಾದಿ ರಾಜಕಾರಣ ದೇಶದ ಜನತೆಯಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ರಾಷ್ಟ್ರಪತಿಗಳು ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ದೇಶಭಕ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸಂವಿಧಾನಬದ್ಧ ಆಶಯದಂತೆ ಕಾನೂನುಬದ್ಧ ನೊಂದಣಿಗಾಗಿ ಒತ್ತಾಯಿಸಲು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದರು.

ಸಂಘಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟರಮಣಪ್ಪ, ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಪ್ರಜಾವಿಮೋಚನಾ ಸಮಿತಿ ಸ್ವಾಭಿಮಾನ ಸಂಘನೆಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಶಾಸಕ ಧೀರಜ್ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಮಾಜಿ ಶಾಸಕರು ಹಾಗೂ ಬೆಂಬಲಿಗರ ಹೇಳಿಕೆಗಳಿಗೆ ಬಿಜೆಪಿ ಜಿಲ್ಲಾ ವಕ್ತಾರೆ ಪುಷ್ಪಾಶಿವಶಂಕರ್ ಆಕ್ಷೇಪ

ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ವೈಯಕ್ತಿಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು…

59 minutes ago

ಅರ್ಧ ದಾರಿಯಲ್ಲೇ ಕೆಟ್ಟು ನಿಂತ ಸರ್ಕಾರಿ ಬಸ್: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಮಸ್ಯೆ ಮುಂದುವರಿಕೆ | ಸುಸ್ಥಿತಿಯಲ್ಲಿರುವ ಬಸ್‌ಗಳ ಸಂಚಾರಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಪದೇಪದೇ ಮಾರ್ಗಮಧ್ಯದಲ್ಲೇ ಕೆಟ್ಟು ನಿಲ್ಲುವ ಸಮಸ್ಯೆ ಮುಂದುವರಿದಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇಂದು…

4 hours ago

ಪಿಎಂ ಕಿಸಾನ್ ಕಂತಿಗೆ ಇ-ಕೆವೈಸಿ ಅಡ್ಡಿ: ಬೆಂಗಳೂರು ಗ್ರಾಮಾಂತರದಲ್ಲಿ 69,020 ರೈತರ ಇ-ಕೆವೈಸಿ ಬಾಕಿ: ಅಕ್ಟೋಬರ್ ಕಂತು ಪಡೆಯಲು ತಕ್ಷಣ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು ಗ್ರಾಮಾಂತರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿರುವ 23ನೇ ಕಂತಿನ ಹಣ ಪಡೆಯಲು…

6 hours ago

ಅಂತರರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ: ಮೂವರ ಬಂಧನ: 7 ಲಕ್ಷ ರೂ. ಮೌಲ್ಯದ ಗಾಂಜಾ, ಬೈಕ್ ವಶ

ದೊಡ್ಡಬಳ್ಳಾಪುರ: ಖಾಸಗಿ ಕಾಲೇಜಿನ ಸಮೀಪದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ…

20 hours ago

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಬೇಟೆ: 28 ಕೋಟಿ ಗಾಂಜಾ, 1.75 ಕೋಟಿ ಚಿನ್ನ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ…

20 hours ago

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ….

ಪರಿವರ್ತನೆಯ ಹಾದಿಯಲ್ಲಿ........ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ…

1 day ago