ಕೋಲಾರ: ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ನ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಮುಖಂಡರ ನೇತೃತ್ವದಲ್ಲಿ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ತಾಲೂಕಿನಲ್ಲಿ ರೈತರ ಭವಿಷ್ಯವನ್ನು ರೂಪಿಸಲು ಟಿಎಪಿಸಿಎಂಎಸ್ ಚುನಾವಣೆಯು ಜ.7 ರಂದು ಭಾನುವಾರ ನಡೆಯಲಿದ್ದು ತಾಲೂಕಿನ ಸಮಾನ ಮನಸ್ಕರು, ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿಯ ನೇತೃತ್ವದಲ್ಲಿ ನಡೆಯಲಿದ್ದು 14 ನಿರ್ದೇಶಕ ಸ್ಥಾನಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಗಳ ಮೂಲಕ 4 ಸ್ಥಾನಗಳಿಗೆ ನೇರವಾದ ಚುನಾವಣೆ ನಡೆಯಲಿದೆ. ಇನ್ನೂ, ಉಳಿದ 7 ನಿರ್ದೇಶಕ ಸ್ಥಾನಗಳಿಗೆ ರೈತರು ಮೂಲಕವೇ ಮತದಾನ ಮಾಡಲಿದ್ದಾರೆ ಎಲ್ಲರನ್ನೂ ಮನವೊಲಿಸುವ ಮೂಲಕ ಒಗ್ಗಟ್ಟಿನಿಂದ ಮತ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಯಲ್ಲಿ ಪಾರದರ್ಶಕತೆಯಿಂದ ಹಣಕಾಸಿನ ವ್ಯವಹಾರಗಳು ಮುಕ್ತವಾಗಿದ್ದಾಗ ಮಾತ್ರವೇ ರೈತರ ಮೊಗದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಚುನಾವಣೆ ನಡೆಯುತ್ತಾ ಇದ್ದು, ಪ್ರತಿಯೊಬ್ಬ ರೈತರನ್ನು ನೇರವಾಗಿ ಭೇಟಿ ಮಾಡಿ ಮತ ಕೇಳಿ ಈ ಚುನಾವಣೆಯನ್ನು ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚರಿಕೆಯಿಂದ ಚುನಾವಣೆಯನ್ನು ಎದುರಿಸುವ ಮೂಲಕ ಮೈತ್ರಿ ಅಭ್ಯರ್ಥಿಗಳು ಎಲ್ಲರೂ ಗೆಲ್ಲುವಂತೆ ಮಾಡಬೇಕು ಎಂದು ತಿಳಿಸಿದರು.
ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮಾತನಾಡಿ, ಮೈತ್ರಿಯ ಏಳು ಅಭ್ಯರ್ಥಿಗಳು ಗೆಲುವು ನಮಗೆ ಪ್ರತಿಷ್ಠೆಯಾಗಿದ್ದು, ನಾವು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸೋಣ ರೈತರ ಅಭಿವೃದ್ಧಿಗಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ರೈತ ಜನಪರ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮತ ಕೇಳೋಣ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ ಬಿ.ಸಾಮಾನ್ಯ ಕ್ಷೇತ್ರದಿಂದ ಎನ್ ಮುನಿರಾಜು, ಮುನಿಶಾಮಿರೆಡ್ಡಿ, ವಿ.ಎನ್ ರಘುನಾಥ್, ವಿ.ರಾಮು, ಬಿ ಮಹಿಳಾ ಮೀಸಲಾತಿಯಲ್ಲಿ ಎಚ್.ಎಂ ಶಿಲ್ಪಾ ಮಂಜುನಾಥ್, ವಿ.ಸುನಂದಮ್ಮ, ಪರಿಶಿಷ್ಟ ಜಾತಿಯಿಂದ ಎಲ್.ಆರ್ ರಾಜಣ್ಣ ಸೇರಿದಂತೆ ಏಳು ಅಭ್ಯರ್ಥಿಗಳಿಗೆ ಮತ ನೀಡುವಂತೆ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಬಾಬು ಮೌನಿ, ಮಾಜಿ ಅಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ, ಜೆಡಿಎಸ್ ಎಸ್ಸಿ ಘಟಕ ಅಧ್ಯಕ್ಷ ಲಕ್ಷ್ಮೀಸಾಗರ ಜಿ ಸುನಿಲ್ ಕುಮಾರ್, ಮುಖಂಡರಾದ ಬ್ಯಾಲಹಳ್ಳಿ ಶಂಕರೇಗೌಡ, ಬಲಿಜ ಸಂಘದ ತೋಟಗಳ ಅಶೋಕ್, ಪಾಲಾಕ್ಷಗೌಡ, ಕೆ.ಆನಂದ್ ಕುಮಾರ್, ಜನಪನಹಳ್ಳಿ ಆನಂದ್, ದಿಂಬ ನಾಗರಾಜಗೌಡ, ವಿಜಯ್ ಗೌಡ, ಛತ್ರಕೋಡಿಹಳ್ಳಿ ಕುಮಾರ್, ಚಿಕ್ಕಹಸಾಳ ಮಂಜುನಾಥ್, ಬಿಜೆಪಿ ಮುಖಂಡರಾದ ತಂಬಿಹಳ್ಳಿ ಮುನಿಯಪ್ಪ, ಅಪ್ಪಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಗೌಡ ಮುಂತಾದವರು ಇದ್ದರು
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…