Categories: ಕೋಲಾರ

ಜನಗಣತಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರವು ಒಳ್ಳೆಯದು. ದೇಶದಲ್ಲಿ ಯಾವ ಯಾವ ಸಮುದಾಯಗಳ ಜನಸಂಖ್ಯೆ ಎಷ್ಟಿದೆ ಇದೆ ಎಂಬುದು ತಿಳಿದುಕೊಂಡರೇ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು.

ನಗರದ ತಮ್ಮ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಶ್ಲಾಘನೀಯ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರವರ ಅವಧಿಯಲ್ಲಿ ಜಾತಿಗಣತಿ ಮಾಡಿದ್ದರು, ಈಗ ಜಾತಿಗಣತಿ ಮುಂದಾಗಿದ್ದಾರೆ ಹತ್ತು ವರ್ಷಕ್ಕೊಮ್ಮೆ ಜಾತಿಗಣತಿ ಮಾಡುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದರು.

ಪಹಲ್ಗಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸತ್ತವರು ನಮ್ಮ ಅಣ್ಣ ತಮ್ಮಂದಿರು, ಇದು ತುಂಬಾ ಘೋರವಾದ ವಿಚಾರ ಭಯೋತ್ಪಾದಕರು ದಾಳಿ ನಡೆಸಿ ಇಷ್ಟು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಮಂಜಸವಲ್ಲ, ಹಾಗಾಗಿ ಕೆಂದ್ರ ಸರ್ಕಾರ ಮೊದಲು ರಾಜಿನಾಮೆ ನೀಡುವುದು ಸೂಕ್ತ, ಸುಮ್ಮನೆ ಯುದ್ದ ವಿಮಾನಗಳನ್ನು ಆಕಾಶದಲ್ಲಿ ಚಾಲನೆ ಮಾಡಿಕೊಂಡು ದೇಶದ ಜನತೆಗೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ ಅಷ್ಟೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ನಮ್ಮ ಜಾಗದಲ್ಲಿ ಬಂದು ಭಯೋತ್ಪಾದಕರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕ ೨೬ ಜನರನ್ನು ಬಲಿತೆಗೆದುಕೊಂಡರೂ ಕೇಂದ್ರ ಸರ್ಕಾರ ಈವರೆಗೂ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ಅವರಿಗೆ ಶೋಭೆ ತರುವುದಿಲ್ಲ, ಭಯೋತ್ಪಾದಕರು ದಾಳಿ ನಡೆಸಿದ ತಕ್ಷಣ ಎಚ್ಚೆತ್ತುಕೊಂಡಿದ್ದರೆ ಅವರು ನಮ್ಮ ಸ್ಥಳದ ಒಳಗೆ ಸಿಗುತ್ತಿದ್ದರು. ಭಯೋತ್ಪದಕರ ದಾಳಿ ಕೇಂದ್ರ ಸರ್ಕಾರ ಗುಪ್ತಚರ ಇಲಾಖೆಯ ಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದರು.

ಭಯೋತ್ಪಾದಕರ ದಾಳಿ ನಡೆಸಿದ ತಕ್ಷಣ ಕೇಂದ್ರ ಸರ್ಕಾರ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅದು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ ಸಿಂಧೂ ನದಿ ನೀರನ್ನು ನಿಲ್ಲಿಸಲು ಬೃಹತ್‌ ಅಣೆಕಟ್ಟು ಕಟ್ಟಬೇಕು ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಬೇರೊಂದು ಕಡೆ ಹರಿಸಲು ಲಕ್ಷಾಂತರ ರೂ ಅನುಧಾನ ಬೇಕು ಇದೆಲ್ಲಾ ಕೇಂದ್ರ ಸರ್ಕಾರದ ಗಿಮಿಕ್ ಹಾಗಿದೆ ದೇಶದ ಜನರನ್ನು ನಾವು ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ದೇಶದ ಜನರನ್ನು ಯಾಮಾರಿಸುತ್ತಿದೆ. ದೇಶದಿಂದ ಪಾಕಿಸ್ತಾನಕ್ಕೆ ರಪ್ತು ಆಗುವ ಔಷಧಿಗಳನ್ನು ನಿಲ್ಲಿಸಿದ್ದಲ್ಲಿ ಪಾಕಿಸ್ತಾನದಲ್ಲಿರುವ ಅರ್ಥದಷ್ಟು ಜನ ಮೂರು ದಿನದಲ್ಲಿ ಸಾಯುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ನಗರಸಭೆಯಲ್ಲಿ ಕೆಲ ಅಧಿಕಾರಿಗಳು ಕಳೆದ ಹತ್ತುವರ್ಷಗಳಿಂದ ಇಲ್ಲಿಯೇ ಬೇರೂರಿದ್ದು ಸಾಕಷ್ಟು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಅವರನ್ನೆಲ್ಲಾ ಬೇರೋಂದು ಜಿಲ್ಲೆಗೆ ವರ್ಗಾವಣೆ ಮಾಡಿ ಅಲ್ಲಿರುವವರನ್ನು ಕೋಲಾರಕ್ಕೆ ತರಬೇಕು ಎಂದು ಪ್ರಯತ್ನಗಳು ನಡೆಯುತ್ತಿವೆ ಆದರೆ ಕೋಲಾರ ನಗರಸಭೆಗೆ ಅಧಿಕಾರಿಗಳು ಬರಲು ಮುಂದಾಗುತ್ತಿಲ್ಲಾ ಉತ್ತಮವಾಗಿ ಜನರಿಗೆ ಸ್ಪಂದಿಸುವ ಅಧಿಕಾರಿಗಳು ಕೋಲಾರ ನಗರಸಭೆಗೆ ಬಂದರೆ ಅವರಿಗೆ ಸ್ವಾಗತಿಸಿ ಸಂಪೂರ್ಣ ಸಹಕಾರ ನೀಡುವುದಲ್ಲದೆ ಬರುವ ಅಂತಹ ಅಧಿಕಾರಿಗೆ ಉಚಿತವಾಗಿ ಒಂದು ದ್ವಿಚಕ್ರ ವಾಹನವನ್ನು ನೀಡಲಾಗುವುದು ಎಂದು ತಿಳಿಸಿದರು.

ಖಾದ್ರಿಪುರದಲ್ಲಿ ನಗರಸಭೆಗೆ ಸೇರಿದ ಜಾಗವನ್ನು ನಗರಸಭೆಗೆ ಸುಪ್ಪದ್ದಿಗೆಗೆ ಪಡೆಯಲು ಈಗಾಗಲೆ ಕ್ರಮ ವಹಿಸಲಾಗಿದೆ. ಕೋಲಾರ ತಹಶೀಲ್ದಾರ್, ಹಾಗೂ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ ಅತಿ ಶೀಘ್ರದಲ್ಲೇ ದಾಖಲೆಗಳನ್ನು ತಿರುಚಿ ನಗರಸಭೆ ಆಸ್ತಿಯನ್ನು ಕಬಳಿಸಿರುವವರಿಂದ ನಗರಸಭೆ ಆಸ್ತಿಯಾಗಿ ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಮುಳಬಾಗಿಲು ಅಲ್ಲದೆ ಕೋಲಾರದಲ್ಲೂ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುತ್ತಿದೆ. ಬೆಟ್ಟಿಂಗ್ ದಂದೆಯಿಂದ ಎಷ್ಟೋ ಅಮಾಯಕರ ಯುವಕರು ಬಲಿಯಾಗಿದ್ದಾರೆ ಎಷ್ಟೋ ಕುಟುಂಬಗಳು ಸಹ ಬೀದಿಗೆ ಬಿದ್ದಿವೆ ಬೆಟ್ಟಿಂಗ್ ದಂದೆಯಿಂದ ದ್ವಿಚಕ್ರ ವಾಹನ ಮನೆ ಮಟ ಮಾರಿಕೊಂಡಿರುವ ಉದಾಹರಣೆಗಳೂ ಇವೆ. ಬೆಟ್ಟಿಂಗ್ ದಂದೆ ಕುರಿತು ಇಂಚಿಂಚು ಮಾಹಿತಿ ಪೋಲೀಸರಿಗೆ ಗೊತ್ತಿದೆ ಆದರೆ ಪೋಲೀಸರೆ ಅವರನ್ನು ಬಿಟ್ಟುಬಿಟ್ಟಿದ್ದಾರೆ ಪೋಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕುಡಾ ಅಧ್ಯಕ್ಷ ಮಹಮದ್ ಹನೀಫ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮುಖಂಡರಾದ ಕಠಾರಿಪಾಳ್ಯ ಅಮರ್, ಜಂಬಾಪುರ ವೆಂಕಟರಾಮ್, ಉರಟ ಅಗ್ರಹಾರ ಚೌಡರೆಡ್ಡಿ, ತಿಪ್ಪೇನಹಳ್ಳಿ ನಾಗೇಶ್, ಚಿನ್ನಾಪುರ ನಾರಾಯಣಸ್ವಾಮಿ, ಸಿಎಂಎಂ ಮಂಜುನಾಥ್, ಸೈಫ್, ಮುಂತಾದವರು ಇದ್ದರು.

Ramesh Babu

Journalist

Recent Posts

3.75 ಲಕ್ಷ ಪಡಿತರ ಚೀಟಿದಾರರ ಇ-ಕೆವೈಸಿ ಬಾಕಿ: ಇ-ಕೆವೈಸಿಗೆ ಅ.20ರ ಗಡುವು: ಗಡುವು ವಿಸ್ತರಣೆಯಿಂದ ಫಲಾನುಭವಿಗಳಿಗೆ ಕೊಂಚ ನಿರಾಳ

ಬೆಂಗಳೂರು ಗ್ರಾಮಾಂತರ: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಗೆ ಸರ್ಕಾರ ಅ.20ರವರೆಗೆ ಗಡುವು ವಿಸ್ತರಿಸಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ ಶೇ.26.65ರಷ್ಟು…

4 hours ago

ಹಿಂಬದಿಯಿಂದ ಬೈಕ್‌ಗೆ ಕಾರು ಡಿಕ್ಕಿ: ದಂಪತಿ ಸಾವು

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

14 hours ago

ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ - ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ…

15 hours ago

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

1 day ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

1 day ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

1 day ago