Categories: ಕೋಲಾರ

ಗಡಿಭಾಗದ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಆ.20 ರಂದು ಬಂಗಾರಪೇಟೆ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ರೈತ ಸಂಘ ನಿರ್ಧಾರ

ಕೋಲಾರ: ಹದೆಗೆಟ್ಟಿರುವ ಗಡಿಭಾಗದ ಕದರಿನತ್ತ ರಸ್ತೆಗೆ ಮುಕ್ತಿ ನೀಡಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಆ-೨೦ ರ ಮಂಗಳವಾರ ಶಾಸಕರ ಮನೆ ಮುಂದೆ ಹೋರಾಟ ನಡೆಸಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹದಗೆಟ್ಟಿರುವ ಬಂಗಾರಪೇಟೆ ಗಡಿಭಾಗದ ಕದರಿನತ್ತ ಗ್ರಾಮದ ರಸ್ತೆಯಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಹತ್ತಾರು ವರ್ಷಗಳಿಂದ ಅತೀ ಹೆಚ್ಚಾಗಿ ಕಾಡಾಣೆಗಳ ಹಾವಳಿಯಿಂದ ತತ್ತರಿಸಿರುವ ಗಡಿಭಾಗದ ರಸ್ತೆಗಳಿಗೆ ಮುಕ್ತಿ ನೀಡಲು ಸಂಬಂಧಪಟ್ಟ ಶಾಸಕರು ಅಧಿಕಾರಿಗಳು ವಿಫಲವಾಗಿ ಹತ್ತಾರು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯಲ್ಲಿಯೇ ಜೀವವನ್ನು ಅಂಗೈನಲ್ಲಿಟ್ಟುಕೊಂಡು ಓಡಾಡಬೇಕಾದ ಪರಿಸ್ತಿತಿ ಇದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ತಾಲ್ಲೂಕು ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಪ್ಪೋಜಿರಾವ್ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಚುನಾವಣಾ ಬಹಿಷ್ಕಾರ ನಿರ್ದಾರ ಕೈಗೊಂಡ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆಗಳನ್ನು ಆಲಿಸಿ ಪ್ರಮುಖವಾಗಿ ಕಾಳಮ್ಮ ಗುಡಿಯಿಂದ ಕದರಿನತ್ತವರೆಗೆ ಹದಗೆಟ್ಟಿರುವ ರಸ್ತೆಯನ್ನು ನೋಡಿ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿ ಸಂಬಂಧಪಟ್ಟ ಪಂಚಾಯತ್ ರಾಜ್ ಅಧಿಕಾರಿಗಳಿಗೆ ಕರೆ ಮಾಡಿ ಚುನಾವಣೆ ಮುಗಿದ ನಂತರ ಸರಿಪಡಿಸುತ್ತೇವೆಂದು ಮಾತು ಕೊಟ್ಟು ಹೋದ ಆಧಿಕಾರಿಗಳು ವರ್ಷ ಕಳೆದರೂ ಸಮಸ್ಯೆ ಕಡೆ ಗಮನ ಹರಿಸುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ಸಂವಿಧಾನದ ಅಡಿಯಲ್ಲಿ ಇರುವ ನಾವು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆ ಆದ ಜನ ಪ್ರತಿನಿಧಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸಬೇಕು ಚುನಾವಣೆಯಲ್ಲಿ ಗಡಿಭಾಗದ ಕದರಿನತ್ತ ಗ್ರಾಮದಲ್ಲಿ ನಮಗೆ ಹೆಚ್ಚಿನ ಮತ ಬಂದಿಲ್ಲ ಎಂಬ ಒಂದೇ ಒಂದು ಕಾರಣದಿಂದ ಮೂಲಭೂತ ಸೌಕರ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡದೇ ಇರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಒಂದು ಕಡೆ ಕಾಡಾಣೆಗಳ ಆವಳಿಯಿಂದ ರಾತ್ರಿವೇಳೆ ಭಯಭೀತರಾಗಿ ಜೀವವನ್ನು ಅಂಗೈನಲ್ಲಿಟ್ಟುಕೊಂಡು ಹದಗೆಟ್ಟಿರುವ ರಸ್ತೆಯಲ್ಲಿ ಓಡಾಡುತ್ತಿದ್ದರು ಕನಿಷ್ಠ ಸಮಸ್ಯೆ ಬಗ್ಗೆ ಏಕೆ ಗಂಭೀರತೆ ತೆಗೆದುಕೊಳ್ಳುತ್ತಿಲ್ಲ . ಇನ್ನೆಷ್ಟು ಅಮಾಯಕರ ಪ್ರಾಣ ಹಾಗು ಕೈಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾಗಿರುವ ಸಂಸಾರಗಳನ್ನು ಹಾಳು ಮಾಡಬೇಕಾಗಿದೆ.ರಾತ್ರಿ ವೇಳೆ ರಸ್ತೆಗಳಲ್ಲಿ ವಿದ್ಯುತ್ ದೀಪಗಳಲ್ಲಿದೇ ಹಳ್ಳಗಳು ಕಾಣಿಸದೇ ಅಪಘಾತಗಳಾಗಿ ಕುಟುಂಬದ ನಿರ್ವಹಣೆ ಮಾಡುವ ನೂರಾರು ಹಿರಿಯರು , ಕಿರಿಯರು , ಯುವಕರು, ಅಂಗವಿಲಕರಾಗುತ್ತಿದ್ದರೂ ಮಾತು ಬಾರದ ತಾಲ್ಲೂಕು ಆಡಳಿತ ಹಾಗೂ ಸಮಸ್ಯೆ ಕಡೆ ಗಮನ ಹರಿಸದ ಶಾಸಕರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಲು ಆ-೨೦ ರ ಮಂಗಳವಾರ ಆನೆಗಳ ಸಮೇತ ಮನೆ ಮುತ್ತಿಗೆ ಹಾಕಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುನಿರಾಜು, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ಗೋವಿಂದಪ್ಪ, ವಿಶ್ವ, ಶ್ರೀರಾಮಪ್ಪ, ಗುಲ್ಲಟ್ಟಿ ರಾಮಶೆಟ್ಟಿ , ಸುರೇಶ್, ನಾಗರಾಜಪ್ಪ, ಚಾಂದ್‌ಪಾಷ, ಕಿರಣ್, ಮುಂತಾದವರುಗಳು ಇದ್ದರು.

Ramesh Babu

Journalist

Recent Posts

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

5 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

6 hours ago

ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಂಡರ್ ಪಾಸ್ ಅವೈಜ್ಞಾನಿಕ- ಮೇಲ್ಸೇತುವೆ ಅಗತ್ಯ- ಸಂಸದ ಡಾ. ಕೆ. ಸುಧಾಕರ್

ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ…

6 hours ago

ಮುಂದಿನ ದಿನಗಳಲ್ಲಿ 1000 ಸಬ್ ಇನ್ಸ್ ಪೆಕ್ಟರ್, 8000 ಕಾನ್ಸ್ಟೇಬಲ್ ಗಳ ನೇಮಕ – ಗೃಹ ಸಚಿವ ಪರಮೇಶ್ವರ್

  ಪೊಲೀಸ್ ಇಲಾಖೆಯಲ್ಲಿ 1000 ಸಬ್ ಇನ್ಸ್ಪೆಕ್ಟರ್ ಹಾಗೂ 8000 ಕಾನ್ಸ್ಟೇಬಲ್ ಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು…

6 hours ago

ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಇಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ…

10 hours ago

ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ದಿನವೇ National Academic Depository…

13 hours ago