ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದವರಿಗೆ ಅಂದರೆ ಕ್ರೈಸ್ತರು, ಮುಸಲ್ಮಾನರು, ಬೌದ್ಧರು, ಸಿಖ್ಖರು, ಮತ್ತು ಪಾರ್ಸಿ ಜನಾಂಗದವರಿಂದ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗಂಗಾ ಕಲ್ಯಾಣ ಯೋಜನೆ:-
ಅ) ಏತ ನೀರಾವರಿ ಯೋಜನೆ
ಈ ಯೋಜನೆಯಡಿಯಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರನ್ನು (ನದಿ) ಪೈಪ್‌ಲೈನ್ ಮೂಲಕ ಮೇಲಕ್ಕೆ ಎತ್ತಿ, ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು ನಿಗಮವು ಅನುಷ್ಠಾನಗೊಳಿಸಿ ನಂತರ ಅದನ್ನು ಫಲಾನುಭವಿಗಳ ಗ್ರಾಹಕರ ಸಹಕಾರ ಸಂಘಕ್ಕೆ ಹಸ್ತಾಂತರ ಮಾಡಲಾಗುವುದು. ಉತ್ತಮ ಬೆಳೆ ಪಡೆಯುವ ಸಲುವಾಗಿ ಕೃಷಿ ತಜ್ಞರಿಂದ ಸಲಹೆ ಮತ್ತು ನೆರವನ್ನು ಕೊಡಿಸಲಾಗುವುದು, ಏತ ನೀರಾವರಿ ಯೋಜನೆಯ ಘಟಕ ವೆಚ್ಚವನ್ನು ಪ್ರತಿ ಎಕರೆಗೆ ರೂ.40,000/- ದಂತೆ ಬಿಡುಗಡೆ ಮಾಡಲಾಗುವುದು, ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.
ಆ) ವೈಯಕ್ತಿಕ ಕೊಳವೆ ಬಾವಿ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂ ವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲ ಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆ ಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಕೊಳವೆ ಮೂಲಕ ಕೃಷಿಭೂಮಿಗೆ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.
ಈ ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆ ಬಾವಿ ಕೊರೆಯಿಸಿ ಅಥವಾ ತೆರೆದ ಬಾವಿಯನ್ನು ನಿರ್ಮಿಸಿ, ಅದಕ್ಕೆ ನಿಗಮದಿಂದ ಪಂಪ್ ಸೆಟ್‌ನ್ನು ಅಳವಡಿಸಲಾಗುವುದು. ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.4.00 ಲಕ್ಷಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಿಗದಿಪಡಿಸಿರುತ್ತದೆ. ಈ ಮೊತ್ತವು ಕೊಳವೆಬಾವಿ ಕೊರೆಯುವಿಕೆ, ಪಂಪು, ಮೋಟಾರು ಸರಬರಾಜು ಮತ್ತು ವಿದ್ಯುದೀಕರಣ ಠೇವಣಿ ಮೊತ್ತ ಒಳಗೊಂಡಿರುತ್ತದೆ.
ವಿದ್ಯುದ್ದೀಕರಣ ಠೇವಣಿ ರೂ.75000/-ವನ್ನು ನಿಗಮದಿಂದ ನೇರವಾಗಿ ಸಂಬಂಧಪಟ್ಟ ಎಸ್ಕಾಂಗಳಿಗೆ ಪಾವತಿಸಲಾಗುವುದು. ಈಗಾಗಲೇ ತಮ್ಮ ಜಮೀನಿಗೆ ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರಿಗೆ ಹನಿ ನೀರಾವರಿ ಅಳವಡಿಸಲು ತೋಟಗಾರಿಕೆ ಇಲಾಖೆಯ ಮಾರ್ಗಸೂಚಿ ಪ್ರಕಾರ ಸಹಾಯಧನ ನೀಡುವುದು.
1.ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ
ಧಾರ್ಮಿಕ ಅಲ್ಪಸಂಖ್ಯಾತರ
ಸಮುದಾಯಕ್ಕೆ ಸೇರಿದವರಾಗಿರಬೇಕು.
2. ಪ್ರತಿ ಫಲಾನುಭವಿಗೆ 1 ಎಕರೆ 20 ಗುಂಟೆ (1 ಎಕರೆ 50 ಸೆಂಟ್ಸ್) ಎಕರೆಯಿಂದ 5 ಎಕರೆಯವರೆಗೆ ಜಮೀನಿರಬೇಕು.
3. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
4. ಅರ್ಜಿದಾರರು ಸಣ್ಣ, ಅತಿ ಸಣ್ಣ ಹಿಡುವಳಿದಾರ ರೈತರಾಗಿರಬೇಕು.
5.ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.96,000/- ಗಳನ್ನು ಮೀರಬಾರದು.
6. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಇರಬೇಕು.
7. ಅಂಬೇಡ್ಕರ ಅಭಿವೃದ್ಧಿ ನಿಗಮ ಮತ್ತು ದೇವರಾಜ್ ಅರಸು ಅಭಿವೃದ್ಧಿ ನಿಗಮಗಳಲ್ಲಿ ಇರುವಂತೆ ಆರ್ಜಿದಾರರ ಗರಿಷ್ಠ ವಯೋಮಿತಿ 55 ವರ್ಷ ಇರುವುದನ್ನು ರದ್ದುಪಡಿಸಲಾಗಿದೆ.
ಆನ್ ಲೈನ್ ವೆಬ್ ಸೈಟ್ https://kmdconline.karnataka.gov.in ಮೂಲಕ ಅರ್ಜಿಯನ್ನು ದಿನಾಂಕ:-22.08.2023 ರಿಂದ 25.09.2023 ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂ.1599, ವೈ.ಎನ್.ಬಿಲ್ಡಿಂಗ್, ಹೊಸ ಬಸ್ ಸ್ಟಾಂಡ್ ಹಿಂಭಾಗ, ಯಲಹಂಕ ಬೀದಿ, ದೇವನಹಳ್ಳಿ ತಾಲ್ಲೂಕು, ದೂರವಾಣಿ ಕಚೇರಿ: 080-27681786/ Gmail: kmdcbrural@gmail.com ಸಹಾಯವಾಣಿ ಸಂಖ್ಯೆ:-8277799990 (24*7) ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ)ದ
ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…