ಕೋಲಾರ: ಮುಂಬರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ನನಗೆ ಒಂದು ಅವಕಾಶವನ್ನು ಕ್ಷೇತ್ರದ ಜನತೆ ಮಾಡಿಕೊಡುವಂತೆ ಸಮಾಜ ಸೇವಕ ಹಾಗೂ ಉದ್ಯಮಿ ಎ.ಟಿ.ಕೃಷ್ಣನ್ ಮನವಿ ಮಾಡಿದರು
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ವಿದ್ಯಾರ್ಥಿ ಜೀವನದಿಂದಲೂ ಸಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ, ಯುವಜನ, ಮಹಿಳೆಯರು ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸಾಕಷ್ಟು ಹೋರಾಟವನ್ನು ನಡೆಸಲಾಗಿದೆ ಅದೇ ರೀತಿಯಲ್ಲಿ ನಿಸ್ವಾರ್ಥ ಸೇವೆ ನಡೆಸಲು ನಿಮ್ಮಗಳ ಕಷ್ಟಗಳಿಗೆ ಸ್ಪಂದಿಸಲು ಚುನಾವಣೆಯಲ್ಲಿ ಸ್ಪಂದಿಸುತ್ತಾ ಇದ್ದೇನೆ ಎಂದರು.
ಆದರ್ಶವಾಗಿರುವ ಹಾಗೂ ಚುನಾವಣೆಗೆ ನಿಲ್ಲಲು ಪ್ರೇರಣೆಯಾಗಿರುವ ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜ್‍ಕುಮಾರ್ ರವರ ಸೇವೆಯೇ ಮಾದರಿಯಾಗಿದೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಪುನೀತ್ ರಾಜ್‍ಕುಮಾರ್ ಅವರ ಸಮಾಧ ಮುಂದೆ ಮಾರ್ಚ್ 30 ರಂದು ಜನರ ಸೇವೆಗೆ ನನ್ನ ಜೀವನ ಮೀಸಲು ಎಂದು ಪ್ರಮಾಣವಚನ ಸ್ವೀಕರಿಸಲಿದ್ದೇನೆ ನಂತರ ಏಪ್ರಿಲ್ 2 ರಂದು ಕೋಲಾರದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ಹೇಳಿದರು.
ನಾನು 1980 ರಿಂದ ಸಕ್ರಿಯವಾಗಿ ರಾಜಕೀಯದಲ್ಲಿ ಗುರುತಿಸಿ ಕೊಂಡಿರುವುದಲ್ಲದೆ,1988 ರಲ್ಲಿ ರಾಷ್ಟ್ರ ಮಟ್ಟದ ಬ್ಯಾಸ್ಕೆಟ್ ಬಾಲ್ ಟೂರ್ನಮೆಂಟ್ ನಡೆಸಿದ್ದೇನೆ,1994 ರಲ್ಲಿ ಹಾಲು ಉತ್ಪಾದಕರ ಪರ ಹೋರಾಟದ ಮುಂಜೂಣಿ ನಾಯಕನಾಗಿ ಹೋರಾಟ ಮಾಡಿದ್ದೇನೆ ಹಾಗೂ ಗೋಲಿಬಾರ್ ಗೆ ಕಾರಣಕರ್ತರಾದ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಎಸ್ಪಿ ಅಮಾನತ್ತು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಜೊತೆಗೆ ಆಧಾರ್ ಕಾರ್ಡ್ ಗಾಗಿ ಹೋರಾಟ ಮಾಡಿದ್ದೇನೆ.ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಸಮಸ್ಯೆ ನೀಗಿಸಲು ಎತ್ತಿನ ಹೊಳೆ,ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಟ ನಡೆಸಿರುವುದರೊಂದಿಗೆ ಅನೇಕ ಸಮಾಜಿಕ ಹೋರಾಟಗಳನ್ನು ನಡೆಸಿರುವುದಾಗಿ
ವಿವರಿಸಿದರು.
ಚುನಾವಣೆಯಲ್ಲಿ ಗೆದ್ದರೂ ಸೋತರೂ ಮುಂದಿನ ದಿನಗಳಲ್ಲಿ ಕೆ.ಜಿ.ಎಫ್ ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಗ್ರಾಮಕ್ಕೆ ಒಂದು ಸ್ಮಶಾನಕ್ಕಾಗಿ ಮತ್ತು ಪ್ರತಿ ಶಾಲೆಗೆ ಆಟದ ಮೈದಾನಕ್ಕಾಗಿ ಹೋರಾಟ ನಡೆಸುವುದಾಗಿ ತಿಳಿಸಿದ ಅವರು ನಾನು ಪ್ರಭಾವಿ ರಾಜಕಾರಣಿ ಅಲ್ಲದಿದ್ದರೂ ರಾಜಕೀಯ ಹಿನ್ನಲೆ ಇರುವ ಕುಟುಂಬದಿಂದ ಬಂದಿದ್ದೇನೆ ಹಾಗೂ ನನ್ನ ತಾಯಿಯ ತವರು ಕೋಲಾರ ನಗರ ಹಾಗೂ ನನ್ನ ರಾಜಕೀಯ ಕ್ಷೇತ್ರ ಕೋಲಾರ ಅದ್ದರಿಂದ ಮತ್ತು ಎಲ್ಲಾ ವರ್ಗಗಳ,ಸಮುದಾಯಗಳ ನಿಕಟ ಸಂಪರ್ಕ ಹೊಂದಿರುವುದರಿಂದ ಲೋಕಸಭೆಗೆ ಪಕ್ಷೇತರ
ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸರೆಡ್ಡಿ ಇದ್ದರು.
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…