Categories: ಕೋಲಾರ

ಕೆಯುಡಿಎ ವತಿಯಿಂದ ಎಲ್ಲದಕ್ಕೂ ಅನುಮತಿ ಕೊಟ್ಟರೆ ಮುಂದಿನ ಅನಾಹುತಗಳಿಗೆ ಹೊಣೆ ಯಾರು?-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಇಷ್ಟ ಬಂದ ಹಾಗೇ ಅನುಮತಿ ಕೊಟ್ಟರೆ ಮುಂದೆ ನಡೆಯುವ ಅನಾಹುತಗಳಿಗೆ ಯಾರು ಹೊಣೆ ಯಾವುದೇ ಅನುಮತಿ ಕೊಡಬೇಕಾದರೂ ಮೊದಲು ಸ್ಥಳ ಪರಿಶೀಲನೆ ಮಾಡಬೇಕು ಇದಕ್ಕೆ ಸಂಬಂಧಪಟ್ಟ ಇಲಾಖೆಯ ಕಡೆಯಿಂದ ನಡೆಯಬೇಕು ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು

ನಗರದ ಹೊರವಲಯದ ಕೆಯುಡಿಎ ಕಛೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪ್ರಾಧಿಕಾರಕ್ಕೆ ಹೆಸರಿಗೆ ಅಷ್ಟೇ ಹೋಟೆಲ್, ಮನೆ, ಮಳಿಗೆ ಅಂತ ಅರ್ಜಿ ಹಾಕಿಕೊಳ್ಳತ್ತಾರೆ ಅನುಮತಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳತ್ತಾರೆ ಅವತ್ತು ಏನಾದರೂ ಸಮಸ್ಯೆ ಬಂದರೆ ಪ್ರಾಧಿಕಾರದ ಮೇಲೆ ಆರೋಪ ಮಾಡತ್ತಾರೆ ಇಷ್ಟು ದಿನ ಆಗಿರಬಹುದು ಮುಂದೆ ಅಂತಹವುಗಳು ನಡೆಯಬಾರದು ಕೋಲಾರವನ್ನು ಮುಂದಿನ‌ ಐವತ್ತು ವರ್ಷದ ಭವಿಷ್ಯದಲ್ಲಿ ನೋಡಿಕೊಂಡು ಕೆಲಸ ಮಾಡಬೇಕು ಎಂದರು.

ನಗರದಿಂದ ಸುಮಾರು ಒಂಭತ್ತು ಕಿಮೀ ಅಂತರದಲ್ಲಿ ರಿಂಗ್ ರೋಡ್ ಕಾಮಗಾರಿಗೆ ಸರಕಾರದಿಂದ ಅನುಮೋದನೆ ಸಿಕ್ಕಿದೆ ಈಗಾಗಲೇ ಇದಕ್ಕೆ ಅನುದಾನ ಸಹ ಬಿಡುಗಡೆಯಾಗಿದೆ ಅದರ ಒಳಗಡೆಯಲ್ಲಿ ಕೆಯುಡಿಎ ವತಿಯಿಂದ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಿಸಲು ಭೂಮಿಯನ್ನು ಪಡೆಯಬೇಕು ಇದಕ್ಕೆ ರೈತ ಪಟ್ಟಿಯನ್ನು ಕೊಡಿ ನಂತರ ಅದರ ಬಗ್ಗೆ ಪರಿಶೀಲನೆ ಮಾಡಿ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ ಖಾಲಿ ಉಳಿದಿರುವ 332 ನಿವೇಶನಗಳನ್ನು ಸರಕಾರದ ನಿಯಮಾನುಸಾರವಾಗಿ ಮಾರಾಟ ಮಾಡಲು ಅದಕ್ಕೆ ಬೇಕಾದ ತಯಾರಿಗಳನ್ನು ನಡೆಸಲು ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಬಿಬಿಎಂಪಿ ಕಡೆಯಿಂದ ಕೇಳಿದಕ್ಕೆ ಎಲ್ಲಾ ಅನುಮತಿ ಕೊಟ್ಟು ಕೊಟ್ಟು ಇವತ್ತು ಹಾಳಾಗಿ ಹೋಗಿದೆ ಕೆಲವು ಸಂದರ್ಭಗಳಲ್ಲಿ ಕುಡಿಯಕ್ಕೆ ನೀರು ಇರಲ್ಲ ಮಳೆ ಬಂದರೆ ಅಷ್ಟೇ ಕಥೆ ಮುಗಿದಂತೆ ಅದರ ಪರಿಸ್ಥಿತಿ ಕೋಲಾರಕ್ಕೆ ಬರಬಾರದು ಎಂದರೆ ಮುಂಜಾಗ್ರತವಾಗಿ ಆಲೋಚನೆ ಮಾಡಿ ಯೋಜನೆ ರೂಪಿಸಬೇಕು ಖಾಸಗಿಯಾಗಿ ಲೇಔಟ್ ನಿರ್ಮಾಣ ಮಾಡೋರಿಗೆ ಕನಿಷ್ಠ ನೀರು, ಚರಂಡಿ, ರಸ್ತೆ, ವಿದ್ಯುತ್‌ ಇದ್ದೀಯಾ ಇಲ್ಲವಾ ಅಂತ ಪರಿಶೀಲನೆ ನಡೆಸಬೇಕು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಇದ್ದರೆ ಅಷ್ಟೇ ಪ್ರಾಧಿಕಾರದಿಂದ ಅನುಮತಿ ಕೊಡಿ ಇಲ್ಲದೆ ಹೋದರೆ ಸಭೆಯ ಅಜೆಂಡಾಗೆ ತರಬೇಡಿ ಎಂದರು.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲ್ಲಿ ನ್ಯಾಯಾಧೀಶರು ವಾಸ ಮಾಡತ್ತಾ ಇದ್ದಾರೆ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಇಲ್ಲ ಎಂದರೆ ಮುಂದೆ ನಮ್ಮ ಬಗ್ಗೆ ತಪ್ಪು ತಿಳಿವಳಿಕೆ ಹೋಗುತ್ತದೆ ಸುಮಾರು 30 ವರ್ಷವಾಗಿದೆ ಬಡಾವಣೆ ಪ್ರಾರಂಭವಾಗಿ ಅಭಿವೃದ್ಧಿ ಯಾಗಿಲ್ಲ ಎಂದರೆ ಹೇಗೆ ಮಳೆಗಾಲ ಪ್ರಾರಂಭವಾಗಿದೆ ಚರಂಡಿಗಳು ಸೇರಿದಂತೆ ಇನ್ನೂ ವಿವಿಧ ಅಭಿವೃದ್ಧಿ ಕೆಲಸವನ್ನು ಮಾಡಲಿಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್ ಮಾತನಾಡಿ ಕೆಯುಡಿಎ ಕಛೇರಿ ಪ್ರಾರಂಭವಾಗಿ ಇಷ್ಟು ವರ್ಷಗಳ ಕಳೆದರೂ ಕಡತಗಳನ್ನು ಗಣಕೀಕೃತ ಮಾಡಿಲ್ಲ ಎಂದರೆ ಹೇಗೆ ಕೂಡಲೇ ಸಂಬಂಧಿಸಿದ ಇಲಾಖೆಯ ಮಾರ್ಗದರ್ಶನದಲ್ಲಿ ಕೂಡಲೇ ಮಾಡಬೇಕು ಪ್ರಾಧಿಕಾರಕ್ಕೆ ಅನುಮತಿಗಾಗಿ ಬರುವ ಪ್ರತಿಯೊಬ್ಬರ ಅರ್ಜಿಯ ಜೊತೆಗೆ ನೇರವಾಗಿ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಇದ್ದರೆ ಇಂತಿಷ್ಟು ದಿನಗಳಲ್ಲಿ ಸರಿ ಪಡಿಸಬೇಕು ಅಂತ ಅವರ ಕಡೆಯಿಂದ ಲಿಖಿತವಾಗಿ ಉತ್ತರ ಪಡೆದು ಅನುಮತಿ ಕೊಡಬೇಕು ಎಂದರು.

ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ಮಹಮ್ಮದ್ ಹನೀಫ್, ಅಪರ ಜಿಲ್ಲಾಧಿಕಾರಿ ಮಂಗಳಾ, ಕೆಯುಡಿಎ ಆಯುಕ್ತ ಶ್ರೀನಾಥ್, ಸಹಾಯಕ ನಿರ್ದೇಶಕಿ ಅನಿತಾ, ಡಿಹೆಚ್ಒ ಜಗದೀಶ್, ಪಿಡ್ಯೂಡಿ ಇಂಜಿನಿಯರ್ ರಾಮಮೂರ್ತಿ, ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿದಂತೆ ಮುಂತಾದವರು ಇದ್ದರು.

Ramesh Babu

Journalist

Recent Posts

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

3 hours ago

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

4 hours ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

6 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

15 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

16 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

18 hours ago