ಕೋಲಾರದ ಕೆಜಿಎಫ್ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಕಲಬೆರಕೆ ಹಾಲು ಮಾಡುತ್ತಿದ್ದ ಗ್ಯಾಂಗ್ ಪತ್ತೆಯಾಗಿದೆ.
ಕೆಮಿಕಲ್ ಪೌಡರ್, ನಂದಿನಿ ಪೌಡರ್ ಬಳಸಿ ಆಂಧ್ರ ಮೂಲದ ವ್ಯಕ್ತಿಗಳು ಹಾಲು ತಯಾರು ಮಾಡ್ತಿದ್ದರು.
ಹಾಲು ತಯಾರಿಕಾ ಮನೆಯ ಮೇಲೆ ಕೆಜಿಎಫ್ ನ ಆಂಡ್ರಸನ್‌ಪೇಟೆ ಪೊಲೀಸರು, ಆಹಾರ ಸುರಕ್ಷತಾ ಅಧಿಕಾರಿಗಳ ಸಮ್ಮುಖದಲ್ಲಿ ದಾಳಿ ನಡೆಸಿ ಕಲಬೆರಕೆ ಹಾಲು ತಯಾರು ಮಾಡ್ತಿದ್ದ 8 ಮಂದಿ ವಶಕ್ಕೆ ಪಡೆಯಲಾಗಿದೆ.
ಆಂಧ್ರ ಮೂಲದ ವೆಂಕಟೇಶಪ್ಪ, ಬಾಲಾಜಿ, ದಿಲೀಪ್, ಬಾಲರಾಜು ಮತ್ತು ಮನೋಹರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಮಿಕಲ್ ಮಿಶ್ರಿತ ಪುಡಿಗೆ ಪಾಮ್ ಆಯಿಲ್ ಬಳಸಿ ಹಾಲು ತಯಾರು ಮಾಡ್ತಿದ್ದರು, ಕಲಬೆರಕೆ ಹಾಲಿನ ದಂಧೆಗೆ ಸರ್ಕಾರಿ ಶಾಲೆಗೆ ಪೂರೈಕೆ ಮಾಡುವ ಅವಧಿ ಮೀರಿದ ಹಾಲು ಪುಡಿ ಬಳಕೆ ಮಾಡಿದ್ದಾರೆ.
ಪೊಲೀಸರ ದಾಳಿ ವೇಳೆ ಕೆಮಿಕಲ್ ಮಿಶ್ರಿತ 56 ಹಾಲಿನ ಪೌಡರ್ ಚೀಲ, ಕಲಬೆರಕೆ ಹಾಲು ತುಂಬಿದ್ದ 51 ಕ್ಯಾನ್ ವಶಕ್ಕೆ ಪಡೆಯಲಾಗಿದ್ದು, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ
ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…
ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…
ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…