Categories: Crime

ಅನ್ಯಕೋಮಿನ ಯುವಕನ ಪ್ರೇಮಪಾಶಕ್ಕೆ ಮೂರು ಮಕ್ಕಳ ತಾಯಿ ಬಲಿ….!

ಪ್ರೀತಿ, ನಂಬಿಕೆ ಮತ್ತು ಸಂಶಯದ ನಡುವೆ ನಡೆದ ಈ ಭೀಕರ ಘಟನೆ ಇಡೀ ಹೊಸಪೇಟೆಯನ್ನೇ ಬೆಚ್ಚಿಬೀಳಿಸಿದೆ. ಕಷ್ಟಪಟ್ಟು ಜೀವನ ಕಟ್ಟಿಕೊಳ್ಳುತ್ತಿದ್ದ ಮಹಿಳೆ ಕೊನೆಗೆ ಪ್ರೇಮಿಯ ಕೈಯಲ್ಲೇ ಹ*ತ್ಯೆಗೀಡಾಗಿದ್ದಾರೆ.

ಘಟನೆಯ ವಿವರ ಇಲ್ಲಿದೆ….ಪರಿಚಯ ಪ್ರೇಮಕ್ಕೆ ತಿರುಗಿದ್ದು ಹೇಗೆ?

ಹೊಸಪೇಟೆಯ ಚಾಪಲಗಡ್ಡ ನಿವಾಸಿ ಉಮಾ (32), ಕಳೆದ 8 ವರ್ಷಗಳಿಂದ ಪತಿಯಿಂದ ದೂರವಿದ್ದು ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿತ್ತು. ಸ್ನೇಹ ಬೆಳೆದು ನಂತರ ಇಬ್ಬರೂ ಪ್ರೀತಿಸಿ, ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ತಿಳಿಸದೆ ಗುಪ್ತವಾಗಿ ಮದುವೆಯಾಗಿದ್ದರು.

ಕೊಲೆಗೆ ಕಾರಣವಾದ ಸಂಶಯ ಮತ್ತು ಹಣ:

ಮೊದಮೊದಲು ಚೆನ್ನಾಗಿದ್ದ ಇವರ ಸಂಸಾರದಲ್ಲಿ ನಂತರ ಹಣಕಾಸಿನ ವಿಚಾರವಾಗಿ ಗಲಾಟೆ ಶುರುವಾಗಿತ್ತು. ಇದರ ಜೊತೆಗೆ ಖಾಜಾ ಉಮಾ ಮೇಲೆ ಅತಿಯಾದ ಸಂಶಯ ಪಡಲು ಆರಂಭಿಸಿದ್ದ. ಉಮಾ ಫೋನ್ ಬಿಜಿಯಿದ್ದರೆ ಸಾಕು ಜಗಳ ಮಾಡುತ್ತಿದ್ದ. ಇವರ ಮದುವೆಯ ವಿಚಾರ ಉಮಾ ಮನೆಯವರಿಗೂ ತಿಳಿದಿರಲಿಲ್ಲ.

ಬೆಳಗಿನ ಜಾವ ನಡೆದ ಭೀಕರ ಕೃತ್ಯ: 

ಜನವರಿ 6ರಂದು ಸಂಶಯದ ವಿಚಾರವಾಗಿ ಇಬ್ಬರ ನಡುವೆ ಜೋರು ಗಲಾಟೆಯಾಗಿದೆ. ಬೆಳಗಿನ ಜಾವ 4:30ರ ಸುಮಾರಿಗೆ ಉಮಾ ಪಕ್ಕದ ಮನೆಯ ಮಹಡಿಯ ಮೇಲೆ ಖಾಜಾ ಜೊತೆ ಮಾತನಾಡಲು ಹೋಗಿದ್ದಾರೆ. ಮೊದಲೇ ಕೊಲೆಗೆ ಸಂಚು ರೂಪಿಸಿದ್ದ ಖಾಜಾ, ತನ್ನಲ್ಲಿದ್ದ ಹರಿತವಾದ ಚಾಕುವಿನಿಂದ ಕೋಳಿ ಕೊಯ್ದಂತೆ ಉಮಾ ಅವರ ಕುತ್ತಿಗೆ ಸೀಳಿ ಸ್ಥಳದಲ್ಲೇ ಕೊ**ಲೆ ಮಾಡಿ ಪರಾರಿಯಾಗಿದ್ದಾನೆ.

ಪತ್ತೆಯಾಗಿದ್ದು ಹೇಗೆ?

ಬೆಕ್ಕುಗಳು ಮಹಡಿಯ ಮೇಲೆ ಕಿರುಚಾಡುತ್ತಿದ್ದನ್ನು ನೋಡಿ ಪಕ್ಕದ ಮನೆಯವರು ಹೋದಾಗ ರಕ್ತದ ಮಡುವಿನಲ್ಲಿ ಉಮಾ ಶವ ಪತ್ತೆಯಾಗಿದೆ. ವಿಜಯನಗರ ಎಸ್ಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ, ಕೇವಲ 4 ಗಂಟೆಗಳಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ಪರಿಣಾಮ: ಇಂದು ಮೂವರು ಗಂಡು ಮಕ್ಕಳು ತಾಯಿಯಿಲ್ಲದೆ ಅನಾಥವಾಗಿದ್ದಾರೆ. ಕ್ಷಣಿಕ ಪ್ರೀತಿ ಮತ್ತು ಸಂಶಯದ ಹಾದಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

1 hour ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

3 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

6 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

7 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

14 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

14 hours ago