ಕರ್ನಾಟಕದಲ್ಲಿ ರಾಕೆಟ್ ಉತ್ಪಾದನಾ ಘಟಕ ಸ್ಥಾಪನೆಗೆ ಆಸ್ಟ್ರೋಬೇಸ್ 500 ಕೋಟಿ ಹೂಡಿಕೆ :10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಘಟಕ ಸ್ಥಾಪನೆಗೆ ಯೋಜನೆ: ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ಕರ್ನಾಟಕದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಆಸ್ಟ್ರೋಬೇಸ್ ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ₹500 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಆದಿನಾರಾಯಣ ಹೊಸಹಳ್ಳಿ ಫೇಸ್-II ವಿಶೇಷ ಆರ್ಥಿಕ ವಲಯದಲ್ಲಿ (SEZ) 10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪಿಸಲು ಸಂಸ್ಥೆ ಉದ್ದೇಶಿಸಿದೆ. ಇಲ್ಲಿ ರಾಕೆಟ್ ಎಂಜಿನ್‌ಗಳು, ಪ್ರೊಪಲ್ಷನ್ ವ್ಯವಸ್ಥೆಗಳು ಹಾಗೂ ಉಡಾವಣಾ ವಾಹನಗಳ ರಚನಾತ್ಮಕ ಬಿಡಿಭಾಗಗಳನ್ನು ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ.

ಸಂಸ್ಥೆಯ ಹಿರಿಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಹೂಡಿಕೆ ಹಾಗೂ ಕಂಪನಿಯ ವಿಸ್ತರಣಾ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಘಟಕ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಸೌಲಭ್ಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬೆರಳೆಣಿಕೆಯಷ್ಟು ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು ಮಾತ್ರ ಅಭಿವೃದ್ಧಿಪಡಿಸುತ್ತಿರುವ ಅತ್ಯಂತ ಸಂಕೀರ್ಣ ತಂತ್ರಜ್ಞಾನವಾದ ‘ಫುಲ್-ಫ್ಲೋ ಸ್ಟೇಜ್ಡ್ ಕಂಬಸ್ಟನ್’ (FFSC) ರಾಕೆಟ್ ಎಂಜಿನ್ ಅನ್ನು ಭಾರತದಲ್ಲೇ ಮೊದಲ ಬಾರಿಗೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಆಸ್ಟ್ರೋಬೇಸ್ ಸಂಸ್ಥೆ ತೊಡಗಿಸಿಕೊಂಡಿದೆ. ಇದರ ಜತೆಗೆ ಮರುಬಳಕೆ ಮಾಡಬಹುದಾದ ಮಧ್ಯಮ ಸಾಮರ್ಥ್ಯದ ಉಡಾವಣಾ ವಾಹನಗಳ (Medium-lift Launch Vehicles) ಅಭಿವೃದ್ಧಿಯಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಈ ಹೂಡಿಕೆಯು ಕರ್ನಾಟಕದ ಖಾಸಗಿ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಗೆ ಮಹತ್ವದ ಉತ್ತೇಜನ ನೀಡಲಿದೆ. ಸ್ವದೇಶಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯವನ್ನು ಜಾಗತಿಕ ಏರೋಸ್ಪೇಸ್ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

Ramesh Babu

Journalist

Recent Posts

ಬೆಳಗಾವಿ: 4.21 ಲಕ್ಷ ರೂ.ಮೌಲ್ಯದ ಅನಧಿಕೃತ ಜೈವಿಕ ಉತ್ತೇಜಕಗಳ ಜಪ್ತಿ

ನೋಂದಣಿ ಪರವಾನಗಿಯಿಲ್ಲದ ಹಾಗೂ ಅನಧಿಕೃತ ಜೈವಿಕ ಉತ್ತೇಜಕಗಳನ್ನು (Biostimulation products) ದಾಸ್ತಾನು ಇರಿಸಿಕೊಂಡಿದ್ದ ಮಳಿಗೆಯ ಮೇಲೆ ಕೃಷಿ ಇಲಾಖೆಯ ಜಾಗೃತ…

2 hours ago

ವಿಷಮುಕ್ತ ಕೃಷಿಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ: ನಟರಾಜ್ ವಿ

ದೊಡ್ಡಬಳ್ಳಾಪುರ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ಗಂಭೀರ…

3 hours ago

ಇತಿಹಾಸದ ಸತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿದೆ……

ಗಾಂಧಿ ಹತ್ಯೆ ಹಿಂದಿನ ಸತ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಸತ್ಯ, ಬಸವಣ್ಣನವರ ಮರಣದ ಹಿಂದಿನ ಸತ್ಯ, ಟಿಪ್ಪು ಸುಲ್ತಾನ್…

4 hours ago

ಇರುವುದೊಂದೇ ಬದುಕು. ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳೋಣ….

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು........... ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು.…

1 day ago

2,411 ದಿನಗಳಿಂದ ನಿರಂತರ ಅನ್ನದಾಸೋಹ: ದಾನಿಗಳ ಸೇವೆಗೆ ಗಣ್ಯರ ಮೆಚ್ಚುಗೆ

  ದೊಡ್ಡಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಕಳೆದ 2,411 ದಿನಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹಿ ಮಲ್ಲೇಶ್ ಮತ್ತು…

2 days ago

ಮಾನವೀಯ ಸಂಬಂಧಗಳ ಹುಡುಕುತ್ತಾ………

ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ…

2 days ago