ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾಮಾನ್ಯ ಬಸ್, ವೇಗದೂತ, ವಜ್ರ ಸೇವೆಗಳ ಪರಿಷ್ಕೃತ ದರ ಪ್ರಕಟ..!!

ಬೆಂಗಳೂರು: ದೀಪಾವಳಿ ಹಬ್ಬಕ್ಕೂ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.

ಬೆಂಗಳೂರಿನಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ದರ ಗರಿಷ್ಠ ₹9ರವರೆಗೆ ಹೆಚ್ಚಳ ಮಾಡಲಾಗಿದೆ. ಮತ್ತೊಂದೆಡೆ, ಬಿಎಂಟಿಸಿ ಸಾಮಾನ್ಯ ಬಸ್‌ಗಳ ಟಿಕೆಟ್ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಈ ಹಿಂದೆ ಒಂದು ಸ್ಟೇಜ್‌ಗೆ ₹6 ಇದ್ದ ಟಿಕೆಟ್ ದರವನ್ನು ₹10ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಬಸ್‌ಗಳನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಬೀಳಲಿದೆ.

ದೊಡ್ಡಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರಯಾಣಿಕರಿಗೂ ಬಿಸಿ

ಬೆಂಗಳೂರು ಸುತ್ತಮುತ್ತಲಿನ ಮಾರ್ಗಗಳಲ್ಲಿಯೂ ಪ್ರಯಾಣ ದರ ಹೆಚ್ಚಳವಾಗಿದ್ದು, ಮೆಜೆಸ್ಟಿಕ್‌ನಿಂದ ನೆಲಮಂಗಲ ಹಾಗೂ ಹೊಸಕೋಟೆಗೆ ₹35 ಇದ್ದ ದರ ₹44ಕ್ಕೆ ಏರಿಕೆಯಾಗಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ ₹38 ಇದ್ದ ಟಿಕೆಟ್ ದರ ₹47ಕ್ಕೆ ಹೆಚ್ಚಳವಾಗಿದೆ. ಮಾಗಡಿ ಮತ್ತು ಮಾಲೂರು ಮಾರ್ಗಗಳಲ್ಲಿ ₹46 ಇದ್ದ ದರ ₹57ಕ್ಕೆ ಏರಿಕೆಯಾಗಿದೆ.

ವೇಗದೂತ ಬಸ್ ಪ್ರಯಾಣವೂ ದುಬಾರಿ

ವೇಗದೂತ ಬಸ್‌ಗಳ ದರದಲ್ಲಿಯೂ ಹೆಚ್ಚಳ ಮಾಡಲಾಗಿದೆ. ಬೆಂಗಳೂರು–ಕೋಲಾರ ಹಾಗೂ ಬೆಂಗಳೂರು–ತುಮಕೂರು ಮಾರ್ಗದಲ್ಲಿ ₹81 ಇದ್ದ ದರ ₹100ಕ್ಕೆ, ಬೆಂಗಳೂರು–ಮಂಡ್ಯ ಮಾರ್ಗದಲ್ಲಿ ₹110 ಇದ್ದ ದರ ₹136ಕ್ಕೆ ಹೆಚ್ಚಳವಾಗಿದೆ. ಬೆಂಗಳೂರು–ಮೈಸೂರು ಮಾರ್ಗದಲ್ಲಿ ₹160ರಿಂದ ₹197ಕ್ಕೆ ಹಾಗೂ ಬೆಂಗಳೂರು–ಹಾಸನ ಮಾರ್ಗದಲ್ಲಿ ₹219ರಿಂದ ₹270ಕ್ಕೆ ದರ ಏರಿಕೆಯಾಗಿದೆ.

ಇನ್ನು ಬಿಎಂಟಿಸಿ ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ ದೂರಕ್ಕೆ ಅನುಗುಣವಾಗಿ ₹4ರಿಂದ ಗರಿಷ್ಠ ₹12ರವರೆಗೆ ಹೆಚ್ಚಳ ಮಾಡಲಾಗಿದೆ. ವಜ್ರ ಹವಾನಿಯಂತ್ರಿತ ಬಸ್‌ಗಳಲ್ಲಿಯೂ ₹5ರಿಂದ ₹15ರವರೆಗೆ ದರ ಹೆಚ್ಚಳ ಮಾಡಲಾಗಿದೆ.

ಒಟ್ಟಾರೆ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಸರ್ಕಾರ ಕೈಗೊಂಡಿರುವ ಬಸ್ ಪ್ರಯಾಣ ದರ ಹೆಚ್ಚಳ ಸಾರ್ವಜನಿಕರ ಪ್ರಯಾಣ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರು ಹೊಸ ದರದ ಹೊರೆಯನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Ramesh Babu

Journalist

Recent Posts

ಕರ್ನಾಟಕದಲ್ಲಿ ರಾಕೆಟ್ ಉತ್ಪಾದನಾ ಘಟಕ ಸ್ಥಾಪನೆಗೆ ಆಸ್ಟ್ರೋಬೇಸ್ 500 ಕೋಟಿ ಹೂಡಿಕೆ :10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಘಟಕ ಸ್ಥಾಪನೆಗೆ ಯೋಜನೆ: ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ಕರ್ನಾಟಕದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಆಸ್ಟ್ರೋಬೇಸ್ ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್…

4 hours ago

ಬೆಳಗಾವಿ: 4.21 ಲಕ್ಷ ರೂ.ಮೌಲ್ಯದ ಅನಧಿಕೃತ ಜೈವಿಕ ಉತ್ತೇಜಕಗಳ ಜಪ್ತಿ

ನೋಂದಣಿ ಪರವಾನಗಿಯಿಲ್ಲದ ಹಾಗೂ ಅನಧಿಕೃತ ಜೈವಿಕ ಉತ್ತೇಜಕಗಳನ್ನು (Biostimulation products) ದಾಸ್ತಾನು ಇರಿಸಿಕೊಂಡಿದ್ದ ಮಳಿಗೆಯ ಮೇಲೆ ಕೃಷಿ ಇಲಾಖೆಯ ಜಾಗೃತ…

6 hours ago

ವಿಷಮುಕ್ತ ಕೃಷಿಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ: ನಟರಾಜ್ ವಿ

ದೊಡ್ಡಬಳ್ಳಾಪುರ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ಗಂಭೀರ…

6 hours ago

ಇತಿಹಾಸದ ಸತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿದೆ……

ಗಾಂಧಿ ಹತ್ಯೆ ಹಿಂದಿನ ಸತ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಸತ್ಯ, ಬಸವಣ್ಣನವರ ಮರಣದ ಹಿಂದಿನ ಸತ್ಯ, ಟಿಪ್ಪು ಸುಲ್ತಾನ್…

7 hours ago

ಇರುವುದೊಂದೇ ಬದುಕು. ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳೋಣ….

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು........... ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು.…

1 day ago

2,411 ದಿನಗಳಿಂದ ನಿರಂತರ ಅನ್ನದಾಸೋಹ: ದಾನಿಗಳ ಸೇವೆಗೆ ಗಣ್ಯರ ಮೆಚ್ಚುಗೆ

  ದೊಡ್ಡಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಕಳೆದ 2,411 ದಿನಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹಿ ಮಲ್ಲೇಶ್ ಮತ್ತು…

2 days ago