Categories: ಕೋಲಾರ

ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ- ನಸೀರ್ ಅಹಮದ್

ಕೋಲಾರ: ಉತ್ತರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸಮಾಜ ಕಾಲೇಜಿನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಓದಲಿಕ್ಕೆ ಪೂರಕವಾದ ವಾತಾವರಣ ಇರಲಿಲ್ಲ ಇವತ್ತು ಕಣ್ಣು ಮುಂದೆ ತಂತ್ರಜ್ಞಾನವನ್ನು ನೋಡಬಹುದಾದ ಸಂದರ್ಭದಲ್ಲಿ ನಾವು ಇದ್ದೇವೆ ಬೇರೆ ಬೇರೆ ದೇಶಗಳಲ್ಲಿ ನಡೆಯುವ ವಿಚಾರಗಳನ್ನು ನೋಡಬಹುದು ಮೊದಲು ಅಲ್ಲಿಗೆ ಹೋಗಬೇಕಾಗಿತ್ತು ಇವತ್ತು ಇಲ್ಲೇ ಅಂತಹ ಅವಕಾಶಗಳು ಇವೆ ಕಾಲೇಜುಗಳಲ್ಲಿ ಹೊಸ ಹೊಸ ಕೋರ್ಸ್ ಗಳ ಜೊತೆಗೆ ಸೌಲಭ್ಯಗಳನ್ನು ಕೊಡುವ ಕೆಲಸ ನಡೆಯುತ್ತಿದೆ ಎಂದರು.

ಹಿಂದೆ ಕೋಲಾರ ಜಿಲ್ಲೆ ಎಂದರೆ ಸಿವಿಲ್ ಸರ್ವಿಸ್ ಹುದ್ದೆಗಳ ತವರು ಮನೆಯಾಗಿತ್ತು ಎಲ್ಲಾ ಇಲಾಖೆಗಳಲ್ಲಿ ಜಿಲ್ಲೆಯ ಅಧಿಕಾರಿ ವರ್ಗ ಇತ್ತು ಅಂತಹ ಸಂದರ್ಭ ಮತ್ತೆ ಬರಬೇಕಾದರೆ ನೀವು ಎಲ್ಲರೂ ಶಿಸ್ತುನಿಂದ ಕಲಿಯಬೇಕು ಸಾಧನೆ ಮಾಡುವವರು ನಿಮ್ಮಲ್ಲಿ ಸಹ ಇದ್ದಾರೆ ಅದರೆ ಸಾಧಿಸುವ ಛಲ ಬರಬೇಕಾಗಿದೆ ಕಾಲೇಜುಗಳಲ್ಲಿ ಹೆಚ್ಚಾಗಿ ಕೌಶಲ್ಯಕ್ಕೆ ಸಂಬಂಧಿಸಿದ ತರಬೇತಿ ಕೋರ್ಸುಗಳನ್ನು ತೆರೆದು ಓದಿನ ನಂತರ ನೇರವಾಗಿ ಉದ್ಯೋಗ ಸಿಗುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ವಿಧ್ಯಾರ್ಥಿಗಳೇ ದೇಶದ ಆಸ್ತಿಯಾಗಿದ್ದಾರೆ ಗುರುಗಳ ಮಾರ್ಗದರ್ಶನದಲ್ಲಿ ನೀವು ಎಲ್ಲರ ಒಳ್ಳೆಯ ಹೆಸರು ಗಳಿಸಬೇಕು ಸಾಧನೆ ಎಲ್ಲರೂ ಮಾಡಬಹುದು ಅದಕ್ಕೆ ಪರಿಶ್ರಮ ಮುಖ್ಯ ಸಾಧನೆ ಮಾಡಿದಾಗ ನಿಮ್ಮ ತಂದೆತಾಯಿಯ ಜೊತೆಗೆ ವಿದ್ಯೆ ಕಲಿಸಿದ ಗುರುಗಳಿಗೂ ಗೌರವ ಸಿಗುತ್ತದೆ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿಗೆ ಹೆಚ್ಚಿನ ಅಧ್ಯತೆ ನೀಡಲಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಶಿಕ್ಷಕರು ಸಹ ದೇಶದ ಪ್ರಥಮ ಪ್ರಜೆಯಾಗಬಹುದು ಎಂಬುದನ್ನು ಸರ್ವಪಲ್ಲಿ ರಾಧಾಕೃಷ್ಣನ್ ತೋರಿಸಿದ್ದಾರೆ ಅವರ ನಡುವಳಿಕೆ ವ್ಯಕ್ತಿತ್ವ ಮತ್ತು ಸಾಧನೆ ನಮಗೆ ಸ್ಪೂರ್ತಿಯಾಗಬೇಕು ಸಾಧನೆ ಮಾಡಿದ ಮಹನೀಯರ ದಾರಿಯಲ್ಲಿ ನಡೆದಾಗ ನಮಗೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸಮಾಜ ಆಡಳಿತಾಧಿಕಾರಿ ಎಂ.ನವೀನಾ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ರಾಕೇಶ್, ಅಂಬರೀಷ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ಜೈದೀಪ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಗಂಗಣ್ಣ, ಕುರಿಗಳ ರಮೇಶ್ ಅಬ್ದುಲ್ ಖಯ್ಯೂಂ, ಮಹಿಳಾ ಸಮಾಜ ಕಾಲೇಜಿನ ಕಾರ್ಯದರ್ಶಿ ಎಂ.ನಂದನಾ, ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಖಜಾಂಚಿ ಪದ್ಮ, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಮುಂತಾದವರು ಇದ್ದರು.

Ramesh Babu

Journalist

Recent Posts

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 hour ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

2 hours ago

ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಂಡರ್ ಪಾಸ್ ಅವೈಜ್ಞಾನಿಕ- ಮೇಲ್ಸೇತುವೆ ಅಗತ್ಯ- ಸಂಸದ ಡಾ. ಕೆ. ಸುಧಾಕರ್

ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ…

2 hours ago

ಮುಂದಿನ ದಿನಗಳಲ್ಲಿ 1000 ಸಬ್ ಇನ್ಸ್ ಪೆಕ್ಟರ್, 8000 ಕಾನ್ಸ್ಟೇಬಲ್ ಗಳ ನೇಮಕ – ಗೃಹ ಸಚಿವ ಪರಮೇಶ್ವರ್

  ಪೊಲೀಸ್ ಇಲಾಖೆಯಲ್ಲಿ 1000 ಸಬ್ ಇನ್ಸ್ಪೆಕ್ಟರ್ ಹಾಗೂ 8000 ಕಾನ್ಸ್ಟೇಬಲ್ ಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು…

2 hours ago

ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಇಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ…

6 hours ago

ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ದಿನವೇ National Academic Depository…

9 hours ago