Categories: ಲೇಖನ

ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡತೆ…….

ಅಮೆರಿಕಾದ ಘನತೆಗೆ ಧಕ್ಕೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಸೇರಿದಂತೆ ಅವರ ಕೆಲವು ಸಲಹೆಗಾರರ ತಂಡ……

ಈ ಭೂಮಿಯ ಮೇಲೆ ಈ ಕ್ಷಣದಲ್ಲಿ ಅಸ್ತಿತ್ವದಲ್ಲಿರುವ ಸುಮಾರು 200 ಕ್ಕೂ ಹೆಚ್ಚು ದೇಶಗಳಲ್ಲಿ ಅತ್ಯಂತ ಹೆಚ್ಚು ಬಲಿಷ್ಠ ದೇಶ ಅಮೆರಿಕ ಸಂಯುಕ್ತ ಸಂಸ್ಥಾನ. ಆಧುನಿಕ ವಿಶ್ವದಲ್ಲಿ ಜಾಗತಿಕವಾಗಿ ದೊಡ್ಡಣ್ಣ ಎಂದೇ ಹೆಸರಾಗಿದೆ. ಆರ್ಥಿಕವಾಗಿ, ಸೈನಿಕವಾಗಿ, ವೈಜ್ಞಾನಿಕವಾಗಿ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನದಲ್ಲಿ, ವ್ಯಾಪಾರ, ವ್ಯವಹಾರಗಳಲ್ಲಿ ಜೊತೆಗೆ ವಿಶ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಮಾನವ ಹಕ್ಕು, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಈ ಕ್ಷಣಕ್ಕೂ ಮುಂಚೂಣಿಯಲ್ಲಿ ನಿಂತಿರುವ ದೇಶ ಅಮೆರಿಕ. ಜಗತ್ತು ಎರಡು ಮಹಾಯುದ್ಧಗಳ ನಂತರ ಒಂದಷ್ಟು ಅಭಿವೃದ್ಧಿಯತ್ತ ಮುನ್ನಡೆದು ಇಡೀ ವಿಶ್ವದಲ್ಲಿ ಒಂದಷ್ಟು ಶಾಂತಿ, ಸೌಹಾರ್ದತೆ ಉಳಿದಿದ್ದರೆ ಅದರಲ್ಲಿ ಅಮೆರಿಕಾದ ಕೊಡುಗೆಯೂ ಸಾಕಷ್ಟಿದೆ.

ಹಾಗೆಯೇ ಅದರ ಮೇಲೆ ಕೆಲವೊಂದು ಆರೋಪಗಳೂ ಇವೆ. ತನ್ನ ವ್ಯಾಪಾರ ಮತ್ತು ವಿದೇಶಾಂಗ ನೀತಿಯಿಂದ ವಿಶ್ವದಲ್ಲಿ ಒಡಕುಂಟು ಮಾಡಿ ತಾನೇ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಗಲಭೆಗಳನ್ನು ಸೃಷ್ಟಿ ಮಾಡಲು ಶಸ್ತ್ರಾಸ್ತ್ರ ಒದಗಿಸುತ್ತದೆ. ದೇಶ ದೇಶಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಿ ಯುದ್ಧ ಮಾಡಿಸುತ್ತದೆ ಹೀಗೆ ನಾನಾ ಆರೋಪಗಳಿದ್ದರೂ ಅಮೆರಿಕ ಜಗತ್ತಿಗೆ ಒಂದು ಆಕರ್ಷಕ ಮತ್ತು ಮಾದರಿ ದೇಶವಾಗಿದೆ…..

ಅಂತಹ ಅಮೆರಿಕ ದೇಶಕ್ಕೆ ಎರಡನೆಯ ಬಾರಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂಬ ವ್ಯಾಪಾರಿ ಮನೋಭಾವದ, ನೈತಿಕವಾಗಿ ಅಷ್ಟೇನೂ ಉತ್ತಮ ಹಿನ್ನೆಲೆ ಹೊಂದಿರದ, ತೀರ ಅಕ್ರಮಣಕಾರಿ ಮತ್ತು ಅಪ್ರಬುದ್ಧತೆಯ, ತುಂಬಾ ಹಗುರವಾದ ಮಾತಿನ ವ್ಯಕ್ತಿ ಆ ದೇಶದ ಮೇಲಿನ ಅಭಿಮಾನ, ಗೌರವ ಮತ್ತು ಘನತೆಯನ್ನು ಕಡಿಮೆ ಮಾಡುತ್ತಿದ್ದಾರೆ.

ಅಮೆರಿಕ ಮೊದಲು ಎಂಬ ಅವರ ನೀತಿಯೇ ಸಂಕುಚಿತ ಮನೋಭಾವದಿಂದ ಕೂಡಿದೆ. ಏಕೆಂದರೆ ಈಗಲೂ ವಿಶ್ವದಲ್ಲಿ ಅಮೆರಿಕವೇ ಎಲ್ಲ ರೀತಿಯಲ್ಲೂ ಮೊದಲನೆಯ ಸ್ಥಾನದಲ್ಲಿದೆ. ಅಮೆರಿಕವೇ ಅತ್ಯಂತ ಬಲಿಷ್ಠವಾಗಿದೆ. ಆರ್ಥಿಕವಾಗಿ ಮಾರುಕಟ್ಟೆಯ ದೃಷ್ಟಿಯಿಂದ ಅಮೆರಿಕವೇ ವಿಶ್ವದ ಹೆಚ್ಚು ಕಡಿಮೆ ಎಲ್ಲಾ ಆಗುಹೋಗುಗಳನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ತಾನು ವಹಿಸಬೇಕಾದ ದೃಢ ನಾಯಕತ್ವದ ರೀತಿಯಲ್ಲಿ ಮುನ್ನಡೆಯದೆ ಯಾವುದೋ ಆತುರಕ್ಕೆ ಬಿದ್ದ ಸಾಮಾನ್ಯ, ಮಧ್ಯಮ ದರ್ಜೆಯ ದೇಶದಂತೆ ವರ್ತಿಸುತ್ತಿರುವುದು ಅಷ್ಟೇನೂ ಒಳ್ಳೆಯ ಲಕ್ಷಣವಲ್ಲ.

ತನ್ನ ದೇಶಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎನಿಸಿದಾಗ ಈಗ ತೆಗೆದುಕೊಳ್ಳುತ್ತಿರುವ ಆಕ್ರಮಣಕಾರಿ ನಿರ್ಧಾರಗಳಿಗಿಂತ ಉತ್ತಮ ನಿರ್ಧಾರಗಳು, ಆಯ್ಕೆಗಳು ಖಂಡಿತ ಅದರ ಮುಂದಿದೆ.

ಯಾವಾಗಲೂ ನಾಯಕರಾದವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಎಲಾನ್ ಮಸ್ಕ್ ರೀತಿಯ ಸಂಪೂರ್ಣ ವ್ಯಾಪಾರಿ ಮನೋಭಾವದ ವ್ಯಕ್ತಿಗಳು ಅವರನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಏಕೆಂದರೆ ಜಗತ್ತಿನಲ್ಲಿ ಕೇವಲ ಹಣ ಮಾತ್ರ ಮುಖ್ಯವಲ್ಲ. ಹಣ ಸಾಧನೆಗೆ ಪೂರಕವಾದ ಒಂದು ಅಂಶ ಮಾತ್ರ. ನಾಗರಿಕ ಸಮುದಾಯದ ಹಿತರಕ್ಷಣೆಗೆ ಮಾನವೀಯ ಮೌಲ್ಯಗಳೇ ಅತಿಮುಖ್ಯ, ಅಂತಿಮ ಮತ್ತು ಶಾಶ್ವತವಾದದ್ದು.

ರಷ್ಯಾ ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಅವರ ದೇಶದಲ್ಲಿ ನಡೆದುಕೊಂಡ ರೀತಿ ಅಥವಾ ಬೀದಿ ಜಗಳದಂತೆ ಬಹಿರಂಗವಾಗಿ ವರ್ತಿಸಿದ್ದು ಅಮೆರಿಕಾದ ಅಧ್ಯಕ್ಷರ ಘನತೆಗೆ ತಕ್ಕದಾಗಿರುವುದಿಲ್ಲ. ಅವರು ಹೇಳಬೇಕಾಗಿದ್ದ ವಿಷಯವನ್ನು ಬೇರೆ ವಿಧಾನದಲ್ಲಿ ಘನತೆಯಿಂದ ಹೇಳಬಹುದಿತ್ತು. ಜೊತೆಗೆ ಅನೇಕ ರಾಜತಾಂತ್ರಿಕ ಅಧಿಕಾರಿಗಳು, ಆಯ್ಕೆಗಳು, ಸಂಧಾನಗಳು, ಅವಕಾಶಗಳು ಅವರ ಮುಂದಿರುತ್ತದೆ.

ಎಲ್ಲವನ್ನು ದಾಟಿ ಬಂದ ನಂತರ ಅಂತಿಮ ತೀರ್ಮಾನದ ಸಮಯದಲ್ಲಿ, ಎಲ್ಲವೂ ಒಪ್ಪಿಗೆಯಾದಲ್ಲಿ ಇಬ್ಬರೂ ಅಧ್ಯಕ್ಷರು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಜಗತ್ತಿಗೆ ಮಾಹಿತಿ ನೀಡಬೇಕು. ಅದು ಒಂದು ದೇಶದ ಅಧ್ಯಕ್ಷರುಗಳ ಘನತೆಯನ್ನು ಎತ್ತಿ ಹಿಡಿಯುತ್ತದೆ. ಇನ್ನೂ ಚರ್ಚೆಯ ಹಂತದಲ್ಲಿ ಇರುವಾಗಲೇ ಸಂಧಾನದ ವಿವಿಧ ಆಯ್ಕೆಗಳು ನಿರ್ದಿಷ್ಟವಾಗಿ ತೀರ್ಮಾನವಾಗದೆ ಇರುವಾಗಲೇ ಚಿಕ್ಕ ಮಕ್ಕಳಂತೆ ಪತ್ರಿಕಾಗೋಷ್ಠಿಯಲ್ಲಿ ಈ ರೀತಿಯ ವರ್ತನೆ ನಿಜಕ್ಕೂ ಅಮೆರಿಕಾದ ಘನತೆಗೆ ತಕ್ಕದಾಗಿರಲಿಲ್ಲ.

ಇದೊಂದೇ ವಿಷಯವಲ್ಲ, ಅಕ್ರಮ ವಲಸಿಗರನ್ನು ಹೊರಹಾಕುವಲ್ಲಿ, ತೆರಿಗೆ ವಿಷಯದಲ್ಲಿ, ಇತರ ದೇಶಗಳಿಗೆ ಆರ್ಥಿಕ ಸಹಾಯ ನೀಡುವಲ್ಲಿ ಇನ್ನೂ ಮುಂತಾದ ವಿಷಯಗಳಲ್ಲಿ ಡೊನಾಲ್ಡ್ ಟ್ರಂಪ್ ವರ್ತನೆ ಖಂಡಿತಾ ಸ್ವೀಕಾರಾರ್ಹವಲ್ಲ.

ಬೇಕಾದರೆ ಗಮನಿಸಿ, ವಿದೇಶಾಂಗ ವ್ಯವಹಾರಗಳ ವಕ್ತಾರರು ಮಾತನಾಡಬಹುದಾದ ಸಣ್ಣ ವಿಷಯಗಳನ್ನು ತಾವೇ ಖುದ್ದಾಗಿ ನಿಂತು ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಕ್ಷುಲ್ಲಕ ಮನೋಭಾವವನ್ನು ಟ್ರಂಪ್ ಪ್ರದರ್ಶಿಸುತ್ತಿದ್ದಾರೆ. ಆ ಕಾರಣದಿಂದಲೇ ಆಫ್ರಿಕಾದ ಕೆಲವು ದೇಶಗಳು, ಏಷ್ಯಾದ ಕೆಲವು ದೇಶಗಳು, ಇದೀಗ ಯುರೋಪಿನ ದೇಶಗಳು ಸಹ ಅಮೆರಿಕ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿವೆ.

ಈ ಮನೋಭಾವ ವಿಚಿತ್ರ ರೀತಿಯಲ್ಲಿ ಮೂರನೇ ಮಹಾಯುದ್ಧಕ್ಕೆ ಕಾರಣವಾಗಲೂಬಹುದು. ಜೊತೆಗೆ ಜಾಗತಿಕವಾಗಿ ಇಲ್ಲಿಯವರೆಗೂ ಇದ್ದ ಮಿತ್ರ ರಾಷ್ಟ್ರ ಮತ್ತು ಶತ್ರು ರಾಷ್ಟ್ರಗಳ ಪಟ್ಟಿಯಲ್ಲಿ ಬದಲಾವಣೆಯೂ ಆಗಬಹುದು. ಅಮೆರಿಕಾದ ಉದಾರವಾದಿ ನೀತಿ ಸಂಕುಚಿತ ನೀತಿಯಾಗಿ ಮಾರ್ಪಟ್ಟು ಮುಂದಿನ ದಿನಗಳಲ್ಲಿ ಅಮೆರಿಕಾದ ಜನ ಪಶ್ಚಾತಾಪ ಪಡಬೇಕಾಗುತ್ತದೆ.

ವಲಸಿಗರ ನಾಡು ಅಮೆರಿಕಾ ಸುಭದ್ರ ಸ್ಥಿತಿಯಲ್ಲಿ ಮುಂದುವರಿಯಬೇಕಾದರೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಇವರ ತಿಕ್ಕಲು ನಿರ್ಧಾರಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಾಗುತ್ತದೆ ಅಥವಾ ಅಮೆರಿಕಾದ ಸಂಸತ್ತು ಇವರನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು.

ಅಮೆರಿಕ ವಿಶ್ವದ ಪ್ರಜಾಪ್ರಭುತ್ವ ರಕ್ಷಣೆಯ ಮಹತ್ವದ ಹೊಣೆ ಹೊತ್ತಿರುವುದರಿಂದ ಅದರ ಬಗ್ಗೆ ವಿಶ್ವದ ಸಾಮಾನ್ಯ ಜನ ಕಾಳಜಿ ವ್ಯಕ್ತಪಡಿಸಬೇಕಾಗುತ್ತದೆ. ಅದು ನಮ್ಮ ಜವಾಬ್ದಾರಿ ಸಹ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

4 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

6 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

7 hours ago

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

13 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

14 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

17 hours ago