Categories: ಲೇಖನ

ಅಪರೂಪದ ದುಬಾರಿ ಖಾಯಿಲೆಗಳು…:ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ

ಅಪರೂಪದ ದುಬಾರಿ ಖಾಯಿಲೆಗಳು……….

ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು…

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು ನೋಡುತ್ತೇವೆ..

” ನನಗೆ ತುಂಬಾ ಗಂಭೀರ ಮತ್ತು ಅಪರೂಪದ ಖಾಯಿಲೆ ಬಂದಿದೆ. ಅದಕ್ಕೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಸುಮಾರು 10/20/30…… ಲಕ್ಷಗಳಷ್ಟು ಹಣ ಬೇಕಾಗಿದೆ. ಒಂದು ಇಂಜೆಕ್ಷನ್ ಬೆಲೆ 50000/100000/200000…..
ನಾವು ಬಡವರು. ನಮ್ಮ ಬಳಿ ಅಷ್ಟು ಹಣವಿಲ್ಲ. ಆದ್ದರಿಂದ ಯಾರಾದರೂ ದಾನಿಗಳು ದಯವಿಟ್ಟು ಕೆಳಕಂಡ ಬ್ಯಾಂಕ್ ಅಕೌಂಟಿಂಗೆ ಹಣ ಸಹಾಯ ಮಾಡಿ ” ಎಂಬ ನಿಜವಾದ ನತದೃಷ್ಟರ ಮನವಿಗಳು ಕರುಳು ಕಿವುಚಿದಂತೆ ಮಾಡುತ್ತದೆ. ( ಸುಳ್ಳು – ವಂಚನೆಗಳನ್ನು ಹೊರತುಪಡಿಸಿ )….

ಇಂತಹ ಪ್ರಕರಣಗಳಲ್ಲಿ ಆರೋಗ್ಯ ವಿಮೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮುಂತಾದ ಯೋಜನೆಗಳು ಹೆಚ್ಚು ‌ಉಪಯೋಗ ಆಗುವುದಿಲ್ಲ. ಒಂದು ವೇಳೆ ಆಗುವುದಾದರು ಸರ್ಕಾರದ ಸವಲತ್ತುಗಳನ್ನು ಪಡೆಯಲು ತುಂಬಾ ತುಂಬಾ ಶ್ರಮಪಡಬೇಕು ಮತ್ತು ಸಾಕಷ್ಟು ಸಮಯ ಬೇಕಾಗುತ್ತದೆ. ರೋಗಿಯ ಅಥವಾ ಅವರ ಹತ್ತಿರದ ಸಂಬಂಧಿಕರ ಬಳಿ ಅಷ್ಟು ಚೈತನ್ಯವೇ ಉಳಿದಿರುವುದಿಲ್ಲ….

ಗಂಡ ಹೆಂಡತಿ ಅಪ್ಪ ಅಮ್ಮ ಮಗ ಮಗಳು ಯಾರು ಬೇಕಾದರೂ ಈ ಪರಿಸ್ಥಿತಿಯಲ್ಲಿ ಇರಬಹುದು. ಸಾವಿನ ನಿರೀಕ್ಷೆಯ ಆ ಮನೆಯ ವಾತಾವರಣ ಕಲ್ಪಿಸಿಕೊಳ್ಳುವುದರಿಂದ ನಮ್ಮ ನೋವಿನ ಪ್ರಮಾಣ ಹೆಚ್ಚಾಗುತ್ತದೆ….

ರೋಗಿಯ ಸಂಕಟ, ಅವಲಂಬಿತರ ನರಳಾಟ, ಪ್ರೀತಿ ಪಾತ್ರರ ಗೋಳಾಟ, ವಿಧಿಯ ಅಸಹಾಯಕತೆ ಎಲ್ಲವೂ ನರಕಯಾತನೆ. ಇಂತಹ ಬಹುತೇಕ ಘಟನೆಗಳಲ್ಲಿ ರೋಗಿಯೂ ಉಳಿಯುವ ಸಾಧ್ಯತೆ ಕಡಿಮೆ. ಹಣವೂ ಖರ್ಚು. ಉಳಿದರು ಎಂದಿನ ಬದುಕು ಸಾಧ್ಯವಿಲ್ಲ…..

ರೋಗ ಬಂದಿರುವುದು ಒಬ್ಬರಿಗೆ. ಆದರೆ ನರಳುವುದು ಮಾತ್ರ ಇಡೀ ಕುಟುಂಬ. ಹಾಗೆಂದು ರೋಗಿಯನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಮತ್ತು ಅದು ಅಮಾನವೀಯ. ಬಹುಶಃ ಇದಕ್ಕೊಂದು ಕ್ರಮಬದ್ಧ ಯೋಜನೆ ಸರ್ಕಾರ ರೂಪಿಸಬೇಕಿದೆ….

ಯಾವುದೇ ವ್ಯಕ್ತಿ ಹಣದ ಕಾರಣದಿಂದ ವೈದ್ಯಕೀಯ ಚಿಕಿತ್ಸೆ ಪಡೆಯದೆ ಸಾಯಲು ಸಮಾಜ ಮತ್ತು ಸರ್ಕಾರ ಬಿಡಬಾರದು. ಅದು ಎಷ್ಟೇ ವೆಚ್ಚದ್ದಾಗಿದ್ದರು ವ್ಯಕ್ತಿಗಳಿಗೆ ಸಿಗಬೇಕು. ಅವಕಾಶ ಇದ್ದರೂ ಮನುಷ್ಯರ ಜೀವ ಉಳಿಸಲಾಗದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು….

ಇದಕ್ಕಾಗಿ ಒಂದು ಕ್ರಿಯಾ ಯೋಜನೆ ರೂಪಿಸಬಹುದು. ಯಾವುದಾದರೂ ಸಣ್ಣ ಪ್ರಮಾಣದ ತೆರಿಗೆ ಮತ್ತು ದಾನಿಗಳ ಸಹಾಯದಿಂದ ಒಂದು ಶಾಶ್ವತ ನಿಧಿ ಸ್ಥಾಪಿಸಬಹುದು. ಅಪರೂಪದ ಖಾಯಿಲೆಗಳಿಗೆ ವೈದ್ಯಕೀಯ ವಿನಾಯಿತಿ ಘೋಷಿಸಬಹುದು. ಖಾಯಿಲೆಗಳ ವಿಷಯದಲ್ಲಿ ಮನುಷ್ಯ ಸುಳ್ಳು ಹೇಳುವುದು ಆಗುವುದಿಲ್ಲ. ಆದ್ದರಿಂದ ಇದರಲ್ಲಿ ಹೆಚ್ಚು ಪಾರದರ್ಶಕತೆ ಕಾಪಾಡಬಹುದು…..

ಆದರೆ ಸಮಸ್ಯೆ ಇರುವುದು ಅದರ ನಿರ್ವಹಣೆಯಲ್ಲಿ. ಎಲ್ಲವೂ ಭ್ರಷ್ಟ ಅಪ್ರಾಮಾಣಿಕ ವ್ಯವಸ್ಥೆಯಲ್ಲಿ ಇದು ಮತ್ತೊಂದು ಸಂಸ್ಥೆಯಾಗುತ್ತದೆಯೇ ಹೊರತು ನಿಜವಾದ ಅಸಹಾಯಕರಿಗೆ ಸಹಾಯವಾಗುವುದಿಲ್ಲ. ಈಗಾಗಲೇ ಈ ಕೆಲವು ಈ ರೀತಿಯ ವ್ಯವಸ್ಥೆ ಇದೆ.
ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ…..

ನಮಗೆ ನೋವಾದಾಗ ನಾವು ಪ್ರತಿಕ್ರಿಯಿಸುತ್ತೇ‌ವೆ. ಇತರರ ನೋವಿಗೆ ನಾವು ಸ್ಪಂದಿಸದೆ ನಿರ್ಲಕ್ಷಿಸುತ್ತೇವೆ. ಇಡೀ ವ್ಯವಸ್ಥೆಗೆ ಆ ಜಿಡ್ಡುಗಟ್ಟಿದ ಮನಸ್ಥಿತಿ ಇದೆ. ಅದನ್ನು ಆಳುವ ವರ್ಗ ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ….

ಆಸ್ಪತ್ರೆಗಳು ಜೈಲಿಗಿಂತ ದೊಡ್ಡ ನರಕದ ಕೂಪಗಳಾಗಿವೆ. ಒಂದೊಂದು ರೋಗಿಯ ಮತ್ತು ಅವರ ಕುಟುಂಬದವರ ಕಥೆ ಕೇಳಿದಾಗಲು ದುಃಖ, ಆಘಾತ ಮತ್ತು ವ್ಯವಸ್ಥೆಯ ಬಗ್ಗೆ ಆಕ್ರೋಶ ಉಂಟಾಗುತ್ತದೆ….

ಆಹಾರ ನೀರು ಗಾಳಿಯ ಮಲಿನತೆಯ ಜೊತೆಗೆ, ಸರ್ಕಾರಗಳು ಮಲಿನವಾಗಿ ಕೊನೆಗೆ ಮನುಷ್ಯರ ದೇಹ ಮನಸ್ಸುಗಳು ಸಹ ಕೆಟ್ಟದಾಗಿ ಹೋಗಿವೆ. ಅದಕ್ಕೆ ಕಳಸವಿಟ್ಟಂತೆ ಈಗ ಸಾಮಾನ್ಯ ವೈದ್ಯಕೀಯ ಸೌಕರ್ಯಗಳಿಗೇ ಕೊರತೆಯಾಗಿದೆ…..

ಈಗಲಾದರು ಎಚ್ಚೆತ್ತುಕೊಂಡು ಭ್ರಷ್ಟಾಚಾರ ರಹಿತ, ಜನಸ್ನೇಹಿ, ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ರೂಪಿಸಿಕೊಳ್ಳಬೇಕಿದೆ. ಸಾಮಾನ್ಯ ಜನರಿಗು ಎಲ್ಲಾ ರೀತಿಯ ಮಾಹಿತಿ ಸಿಗುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಬಹುದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸ್ನೇಹಿತರ ದಿನದ ಅಂಗವಾಗಿ ನಂದಿಬೆಟ್ಟಕ್ಕೆ ತೆರಳಿದ್ದ ಸ್ನೇಹಿತರು: ನಂದಿ ಬೆಟ್ಟದ ತಿರುವು ರಸ್ತೆಯಲ್ಲಿ ಬೈಕ್ ಅಪಘಾತ: ಇಬ್ಬರು ಸ್ನೇಹಿತರು ಸ್ಥಳದಲ್ಲೇ ದುರ್ಮರಣ

ನಂದಿ ಬೆಟ್ಟದ ತಿರುವು ರಸ್ತೆಯಲ್ಲಿ ಬೈಕ್ ಅಪಘಾತವಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಸ್ನೇಹಿತರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ನಂದಿ ಬೆಟ್ಟದ…

9 hours ago

ಭೂಗಳ್ಳರಿಂದ 8 ಎಕರೆ ಜಮೀನು ರಕ್ಷಣೆ: ಆಶ್ರಯ ಯೋಜನೆಗೆ ಭೂಮಿ ಮಂಜೂರು: ಆಶ್ರಯ ಯೋಜನೆಯ ಯಶಸ್ವಿ ಕಾರ್ಯಕ್ರಮ ಆಯೋಜನೆ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮೇಲಿನಜೂಗಾನಹಳ್ಳಿ(ಎಸ್.ಎಸ್.ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ ಒಟ್ಟು 120…

23 hours ago

ಶಾಲಾಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿದ ಪ್ರಕರಣ: ಸಿಎಂ ಸಿದ್ದರಾಮಯ್ಯ ಏನಂದ್ರು…?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು, ಅವರನ್ನು ತಮ್ಮ ಊರಿನಿಂದ…

1 day ago

ಹೋರಾಟ ಮತ್ತು ಹೋರಾಟಗಾರರು……

ಹೊಸ ಹೋರಾಟಗಾರರು ಸೃಷ್ಟಿಯಾಗಬೇಕಿದೆ, ಹಳೆಯ ಹೋರಾಟಗಾರರು ಮರುಹುಟ್ಟು ಪಡೆಯಬೇಕಿದೆ, ಸಮಕಾಲೀನ ಹೋರಾಟಗಾರರು ಹೋರಾಟದ ಮಾರ್ಗಗಳನ್ನು ಪುನರ್ ರೂಪಿಸಿಕೊಳ್ಳಬೇಕಿದೆ...... 1995/2000 ಇಸವಿಯ…

1 day ago

ತಿರುಮಗೊಂಡಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಘಾಟಿ ಪ್ರಾಧಿಕಾರದ ಸದಸ್ಯರ ಮನವಿ

ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ‌‌ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು,…

2 days ago

ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿಂದ ಆರ್‌ಟಿಐ ಅರ್ಜಿಗಳ ವಿಲೇವಾರಿ ವಿಳಂಬ- ಮಾಹಿತಿ ಆಯುಕ್ತ ಹರೀಶ್ ಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…

2 days ago