
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರಿಗೆ ತಮಗೆ ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ತಕ್ಷಣವೇ ಪ್ರವಾಸ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಚಿವರು ತಮ್ಮ ವ್ಯಾಪ್ತಿಯ ಪ್ರತಿಯೊಂದು ತಾಲ್ಲೂಕಿಗೆ ಭೇಟಿ ನೀಡಿ, ಸ್ಥಳೀಯ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು. ಅಲ್ಲದೆ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ವಾಸ್ತವ ಸ್ಥಿತಿಯ ಸಮಗ್ರ ವರದಿಯನ್ನು ಕೂಡಲೇ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರ ಜನರೊಂದಿಗೆ ನಿಲ್ಲಲಿದ್ದು, ಅತಿವೃಷ್ಟಿ ಹಾಗೂ ಬರದಿಂದ ಸಂಕಷ್ಟಕ್ಕೊಳಗಾದವರಿಗೆ ಅಗತ್ಯವಿರುವ ಎಲ್ಲ ತುರ್ತು ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯ ನೈಜ ಚಿತ್ರಣ ಪಡೆಯುವ ಉದ್ದೇಶದಿಂದ ಸಚಿವರ ಪ್ರವಾಸಕ್ಕೆ ಆದ್ಯತೆ ನೀಡಲಾಗಿದ್ದು, ವರದಿಗಳ ಆಧಾರದ ಮೇಲೆ ಮುಂದಿನ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಸಚಿವರಿಗೆ ಹೊಣೆಗಾರಿಕೆ ನೀಡಿರುವ ಜಿಲ್ಲೆ
1 ಡಾ. ಜಿ. ಪರಮೇಶ್ವರ- ತುಮಕೂರು
2 ರಘುಮೂರ್ತಿ- ಚಿತ್ರದುರ್ಗ
3 ಬಿ.ಎಸ್. ಸುರೇಶ್- ಚಿಕ್ಕಬಳ್ಳಾಪುರ
4 ಕೆ.ಹೆಚ್. ಮುನಿಯಪ್ಪ- ಬೆಂಗಳೂರು ಗ್ರಾಮಾಂತರ
5 ರಾಮಲಿಂಗಾ ರೆಡ್ಡಿ- ಕೋಲಾರ
6 ಹೆಚ್.ಸಿ. ಬಾಲಕೃಷ್ಣ- ಬೆಂಗಳೂರು ದಕ್ಷಿಣ
7 ಬಿ.ಜೆಡ್. ಜಮೀರ್ ಅಹ್ಮದ್ ಖಾನ್- ವಿಜಯನಗರ
8 ಕೆ.ಜೆ. ಜಾರ್ಜ್- ಚಿಕ್ಕಮಗಳೂರು
9 ಕೆ.ಎಂ. ಶಿವಲಿಂಗೇಗೌಡ- ಹಾಸನ
10 ಮಧು ಬಂಗಾರಪ್ಪ- ಶಿವಮೊಗ್ಗ
11 ಎಂ.ಬಿ. ಪಾಟೀಲ್- ವಿಜಯಪುರ
12 ವಿಜಯಾನಂದ ಕಾಶಪ್ಪನವರ- ಬಾಗಲಕೋಟೆ
13 ಬಸವರಾಜ ರಾಯರೆಡ್ಡಿ- ಗದಗ
14 ಎಸ್.ಎಸ್. ಮಲ್ಲಿಕಾರ್ಜುನ- ದಾವಣಗೆರೆ
15 ರುದ್ರಪ್ಪ ಲಮಾಣಿ- ಹಾವೇರಿ
16 ಸತೀಶ್ ಜಾರಕಿಹೊಳಿ- ಬೆಳಗಾವಿ
17 ಸಂತೋಷ್ ಲಾಡ್- ಧಾರವಾಡ
18 ಲಕ್ಷ್ಮಣ ಸವದಿ- ಉತ್ತರ ಕನ್ನಡ
19 ಪ್ರಿಯಾಂಕ್ ಖರ್ಗೆ- ಕಲಬುರಗಿ
20 ಅಜಯ್ ಧರ್ಮಸಿಂಗ್- ರಾಯಚೂರು
21 ಈಶ್ವರ್ ಖಂಡ್ರೆ- ಬೀದರ್
22 ಯು.ಟಿ. ಖಾದರ್- ದಕ್ಷಿಣ ಕನ್ನಡ ಹಾಗೂ ಉಡುಪಿ
23 ಪಿ.ಎಂ. ನರೇಂದ್ರಸ್ವಾಮಿ- ಕೊಡಗು
24 ಯತೀಂದ್ರ ಸಿದ್ದರಾಮಯ್ಯ- ಮೈಸೂರು
25 ಚೆಲುವರಾಯಸ್ವಾಮಿ- ಮಂಡ್ಯ
26 ಪುಟ್ಟರಂಗಶೆಟ್ಟಿ- ಚಾಮರಾಜನಗರ
27 ಬಿ. ನಾಗೇಂದ್ರ- ಬಳ್ಳಾರಿ
28 ಶರಣ ಪ್ರಕಾಶ ಪಾಟೀಲ- ಯಾದಗಿರಿ
29 ಶಿವರಾಜ ಸಂಗಪ್ಪ ತಂಗಡಗಿ- ಕೊಪ್ಪಳ
30 ಕೃಷ್ಣ ಭೈರೇಗೌಡ- ಬೆಂಗಳೂರು ನಗರ