ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕು ಒಳಗೊಂಡ ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ಬಸ್ ಡಿಪೋ ವಿಭಾಗಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ.
ಯೋಜನೆ ಆರಂಭವಾಗಿ (ಜು.11) ಒಂದು ತಿಂಗಳು ಪೂರ್ಣವಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 27.96 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಪಾಸ್ ಮೂಲಕ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳಿಗೂ ಯೋಜನೆಯಿಂದ ಲಾಭವಾಗಿದೆ. ಈ ಮಧ್ಯೆ ಮೊದಲೇ ನಷ್ಟದಲ್ಲಿದ್ದ ಖಾಸಗಿ ಬಸ್ ಮಾಲೀಕರು ಮಾತ್ರ ಈಗ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ ಶೇ.30ರಷ್ಟು ಏರಿಕೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಆಟೋ, ಟೆಂಪೋ, ಇತರ ವಾಹನಗಳ ಪ್ರಯಾಣಕ್ಕೆ ಗುಡ್ ಬೈ ಹೇಳಿ, ಕೆಎಸ್ಆರ್ ಟಿಸಿ ಬಸ್ ನತ್ತ ಹೆಜ್ಜೆ ಇಟ್ಡಿದ್ದಾರೆ. ಇದರಿಂದ ಸಹಜವಾಗಿ ಮಹಿಳೆಯರ, ಪತಿ, ಮಕ್ಕಳು ಬಸ್ ನಲ್ಲಿ ಓಡಾಟ ಗಣನೀಯವಾಗಿ ಹೆಚ್ಚಿದೆ. ತಿಂಗಳಲ್ಲಿ 27.96 ಲಕ್ಷ ಮಹಿಳೆಯರು ಪ್ರಯಾಣಿಸಿ ಚಿಕ್ಕಬಳ್ಳಾಪುರ ಬಸ್ ಘಟಕ್ಕೆ ಮಹಿಳೆಯರು ಶಕ್ತಿ ತುಂಬಿದ್ದಾರೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್ ನಾಯ್ಡು ತಿಳಿಸಿದರು.
ಪ್ರತಿದಿನ ಸರಾಸರಿ 12-15 ಲಕ್ಷ ಲಾಭ:
ಶಕ್ತಿ ಯೋಜನೆ ಬಳಿಕ ಚಿಕ್ಕಬಳ್ಳಾಪುರ ಬಸ್ ಡಿಪೋ ವಿಭಾಗಕ್ಕೆ ನಿರೀಕ್ಷೆ ಮೀರಿ ಲಾಭವಾಗಿದೆ. ನಿರ್ವಹಣೆಯ ವೆಚ್ಚ ಸರಿದೂಗಿಸುವುದೇ ಕಷ್ಟಕರವಾಗಿದ್ದ ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ವಿಭಾಗಕ್ಕೆ ಶಕ್ತಿ ಯೋಜನೆ ಭರಪೂರ ಲಾಭ ತಂದಿದೆ. ಈ ಹಿಂದೆ ಪ್ರತಿದಿನ ಇದ್ದ 70 ಲಕ್ಷ ರೂ. ಇದೀಗ ಸುಮಾರು 12 ರಿಂದ 15 ಲಕ್ಷ ರೂ. ಏರಿಕೆಯಾಗಿ 85 ಲಕ್ಷ ರೂ.ವರಗೆ ವಹಿವಾಟು ನಡೆಸುತ್ತಿದೆ. ಒಟ್ಟಾರೆ ಒಂದು ತಿಂಗಳ ಅವಧಿಯಲ್ಲಿ 9.11 ಕೋಟಿ ರೂ. ವಹಿವಾಟು ನಡೆಸಿ, ಶೇ.32 ರಷ್ಟು ಹೆಚ್ಚಿನ ಲಾಭಂಶವನ್ನು ಕಂಡಿದೆ.
ಶಕ್ತಿ ಯೋಜನೆಗೂ ಮೊದಲು ಲಾಂಗ್ ರೂಟ್ ನಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದ ಘಟಕಕ್ಕೆ. ಗ್ರಾಮಾಂತರ, ಹಳ್ಳಿಗಳ ರೂಟ್ ಗಳಲ್ಲಿ ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ, ಶಕ್ತಿ ಯೋಜನೆ ಜಾರಿಯಾದಗಿನಿಂದ ಗ್ರಾಮಾಂತರ ಸಾರಿಗೆಗೆ ಹಳ್ಳಿಗಳಿಂದ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಮಾರ್ಗದಲ್ಲಿ ಇಪಿಕೆಎಂ( ಅರ್ನಿಂಗ್ ಪರ್ ಅವರ್) 15-20 ರೂ. ಇದ್ದದ್ದು, ಇದೀಗ 30-40 ರೂ.ರವರೆಗೆ ಏರಿಕೆಯಾಗಿದೆ. ಅಂದರೆ ಪ್ರತಿದಿನ ಕನಿಷ್ಟ 8 ಸಾವಿರ ರೂ. ಕಲೆಕ್ಷನ್ ಆಗುತ್ತಿದ್ದ ಜಾಗದಲ್ಲಿ ಈಗ 10-12 ಸಾವಿರ ರೂ. ಕಲೆಕ್ಷನ್ ಆಗುತ್ತಿದೆ. ಇನ್ನೂ ಲಾಂಗ್ ರೂಟ್ ಗಳಲ್ಲಿ 40 ರೂ. ಅರ್ನಿಂಗ್ ಪರ್ ಕಿ.ಮೀ ಬರುತ್ತಿತ್ತು. ಈಗ ಇಪಿಕೆಎಂ 40% ಹೆಚ್ಚಾಗಿ 72ರೂ. ಬರುತ್ತಿದೆ.
ಹೆಚ್ಚಿದ ಅಂತಾರಾಜ್ಯ ಪ್ರಯಾಣಿಕರ ಸಂಖ್ಯೆ:
ಚಿಕ್ಕಬಳ್ಳಾಪುರ ವಿಭಾಗದಿಂದ ತುಮಕೂರು, ಬೆಂಗಳೂರು, ಕೋಲಾರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಅಷ್ಟೇ ಅಲ್ಲದೆ ಪಕ್ಕದ ಆಂಧ್ರ ಪ್ರದೇಶದ ಹಿಂದೂಪುರ, ಅನಂತಪುರ, ಮಂತ್ರಾಲಯ, ಗೋರಂಟ್ಲಾ, ಕದಿರಿ, ಪುಟ್ಟಪರ್ತಿಗೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಅಧಿಕವಾಗಿ ಲಾಭವು ಹೆಚ್ಚಿದೆ.
1) ದೊಡ್ಡಬಳ್ಳಾಪುರ ಡಿಪೋ
ಪ್ರಯಾಣಿಕರು: 4,07,121.
ಟಿಕೆಟ್ ಮೌಲ್ಯ(ರೂ): 1,14,97,578
2) ಚಿಕ್ಕಬಳ್ಳಾಪುರ ಡಿಪೋ
ಪ್ರಯಾಣಿಕರು: 6,92,094.
ಟಿಕೆಟ್ ಮೌಲ್ಯ(ರೂ): 2,26,59,62
3) ಚಿಂತಾಮಣಿ ಡಿಪೋ
ಪ್ರಯಾಣಿಕರು 5,58,822.
ಟಿಕೆಟ್ ಮೌಲ್ಯ(ರೂ): 2,09,15,819
4) ಬಾಗೇಪಲ್ಲಿ ಡಿಪೋ
ಪ್ರಯಾಣಿಕರು 4,06,171.
ಟಿಕೆಟ್ ಮೌಲ್ಯ(ರೂ):1,46,30,810
5) ಗೌರಿಬಿದನೂರು ಡಿಪೋ
ಪ್ರಯಾಣಿಕರು: 5,19,427.
ಟಿಕೆಟ್ ಮೌಲ್ಯ(ರೂ): 1,54, 87,683
6) ಶಿಡ್ಲಘಟ್ಟ ಡಿಪೋ
ಪ್ರಯಾಣಿಕರು: 2,12,627.
ಟಿಕೆಟ್ ಮೌಲ್ಯ(ರೂ): 59, 71,816.
ಒಟ್ಟು
ಪ್ರಯಾಣಿಕರು: 27,96,312.
ಟಿಕೆಟ್ ಮೌಲ್ಯ(ರೂ): 9,11,62,768
ನಮ್ಮ ಮೊದಲ ಆದ್ಯತೆ ಪ್ರಯಾಣಿಕ ಸುರಕ್ಷತೆ. ಇಡೀ ಭಾರತ ದೇಶದಲ್ಲೇ ಕಡಿಮೆ ಅಪಘಾತ ಪ್ರಕರಣಗಳು ಇರೋದು ಕೆಎಸ್ ಆರ್ ಟಿಸಿಯಲ್ಲಿ. ಬಸ್ ಗುಣಮಟ್ಟ, ಪ್ರಯಾಣಿಕರ ಜೊತೆ ಚಾಲಕ, ನಿರ್ವಾಹಕರು ಧನಾತ್ಮಕವಾಗಿ ವರ್ತನೆ ಮಾಡುತ್ತಾರೆ. ಆದಾಯ ಜೊತೆಗೆ ಉಳಿತಾಯ ಮಾಡುವುದರಲ್ಲಿ ಮೊದಲ ಸ್ಥಾನ, ಡೀಸಲ್ ಉಳಿತಾಯ ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಹೀಗೆ ಹಲವಾರು ಸಾಧನೆಗಳೊಂದಿಗೆ ಕರ್ನಾಟಕ ಸಾರಿಗೆ ಇಲಾಖೆ ಮುನ್ನಡೆಯುತ್ತಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್ ನಾಯ್ಡು ತಿಳಿಸಿದರು.
ಇತ್ತೀಚೆಗೆ ದೊಡ್ಡಬಳ್ಳಾಪುರ ಘಟಕಕ್ಕೆ ಹೊಸ ಬಸ್ ಗಳ ಸೇರ್ಪಡೆ ಆಗಲಿಲ್ಲ, ಸರ್ಕಾರ ಹೊಸ ಬಸ್ ಗಳ ಖರೀದಿ ಮಾಡಿ ನೀಡಲಾಗುವುದು ಎಂದು ತಿಳಿಸಿದೆ. ಅದೇರೀತಿ ಸಿಬ್ಬಂದಿ ನೇಮಕಾತಿ ಆಗದೇ ಇರೋದು ಬಸ್ ಸಮಸ್ಯೆ ಉಲ್ಬಣವಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಹೊರ ಗುತ್ತಿಗೆ ಆಧಾರದಲ್ಲಿ ಹಾಗೂ ನಿವೃತ್ತಿ ಸಿಬ್ಬಂದಿ ನೇಮಕ ಮಾಡಿಕೊಂಡು ಬಸ್ ಸೇವೆ ಕಲ್ಪಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…