Categories: ರಾಜ್ಯ

BPL ಕಾರ್ಡ್ ಹೊಂದಿದವರ ಆರ್ಥಿಕ ಸ್ಥಿತಿಗಳ ‌ಬಗ್ಗೆ ಸರ್ವೇ

BPL ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ಸೌಲಭ್ಯ ಪಡೆಯುತ್ತಿರುವವರಿಗೆ ಸರ್ಕಾರ ಶಾಕ್ ನೀಡಿದೆ. ಆಹಾರ ಇಲಾಖೆಯಿಂದ ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಹೊಂದಿದವರ ಆರ್ಥಿಕ ಸ್ಥಿತಿಗಳ ‌ಬಗ್ಗೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ.

ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಸರ್ವೇ ಮಾಡಿದರೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದು ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಎಂಡಿ ಗ್ಯಾನೇಂದ್ರ ಮಾಹಿತಿ ನೀಡಿದ್ದಾರೆ.

ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಹೀಗೆ ಒಟ್ಟು 6 ಮಾನದಂಡಗಳ ಆಧಾರದ ಮೇಲೆ ಸರ್ವೇ ನಡೆಸಲಾಗುತ್ತಿದೆ.

ಈಗಾಗಲೇ ಸರ್ವೇ ನಡೆಸಿ 35ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು, ಸಾವನ್ನಪ್ಪಿರುವ ಸುಮಾರು 4.55 ಲಕ್ಷ ಜನರ ಹೆಸರನ್ನ ಅಳಿಸಿದ ಆಹಾರ ಇಲಾಖೆ.

ರದ್ದು ಮಾಡುವುದುರ ಜೊತೆಗೆ ಮಾನದಂಡ ಉಲ್ಲಂಘಿಸಿದವರಿಂದ 8 ಕೋಟಿಗೂ ಅಧಿಕ ದಂಡ ವಸೂಲಿ ಸಹ ಮಾಡಲಾಗಿದೆ. ಸಾವನ್ನಪ್ಪಿದರ ಹೆಸರನ್ನ‌ ಅಳಿಸಿರುವುದರಿಂದ ಸರ್ಕಾರಕ್ಕೆ ತಿಂಗಳಿಗೆ 6ರಿಂದ 7 ಕೋಟಿ ಉಳಿತಾಯವಾಗಿದೆ.

ಅನಧಿಕೃತವಾಗಿ BPL ಕಾರ್ಡ್ ಹೊಂದಿರುವವರ ಪೈಕಿ ಸರ್ಕಾರಿ ನೌಕರರು & ವೈಟ್ ಬೋರ್ಡ್ ಕಾರು ಇರುವವರೇ ಹೆಚ್ಚಾಗಿದ್ದಾರೆ. RTO ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 44,62,107 ವೈಟ್ ಬೋರ್ಡ್ ಕಾರುಗಳಿವೆ ಎಂದು ಆಹಾರ ಇಲಾಖೆ ಎಂಡಿ ಗ್ಯಾನೇಂದ್ರ ಮಾಹಿತಿ ನೀಡಿದ್ದಾರೆ.

BPL ಕಾರ್ಡ್ ಮಾನದಂಡ ಏನು.!?

• ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು
• 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
• ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
• ಯಾವುದೇ ಸರ್ಕಾರಿ ನೌಕರರಾಗಿರಬಾರದು
• ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
• ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು

Ramesh Babu

Journalist

Recent Posts

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್

  ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…

9 hours ago

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

11 hours ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

12 hours ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

13 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

14 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

19 hours ago