
ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ ನಡೆದಿದೆ.
ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ. ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಈವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಚಹರೆ: ಸುಮಾರು 165 ಸೆಂ.ಮೀ ಎತ್ತರ, ಗೋಧಿ ಮೈಬಣ್ಣ, ದುಂಡನೆಯ ಮುಖ, ದಪ್ಪ ಮೂಗು, ಸಣ್ಣನೆಯ ಶರೀರ, ಕಪ್ಪು ಗಡ್ಡ–ಮೀಸೆ ಹಾಗೂ ಕಪ್ಪು ಕೂದಲು ಹೊಂದಿದ್ದಾನೆ. ಬಲಗೈ ಮೇಲೆ ಶಿವನ ತ್ರಿಶೂಲ ಮತ್ತು “ರಾಹುಲ್” ಎಂಬ ಹಚ್ಚೆ ಗುರುತು ಇದೆ.
ಧರಿಸಿದ್ದ ಬಟ್ಟೆ: ಸಿಮೆಂಟ್ ಬಣ್ಣದ ಟೀಶರ್ಟ್, ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಅಂಡರ್‌ವೇರ್ ಹಾಗೂ ಒಳಬನಿಯನ್ ಧರಿಸಿದ್ದಾನೆ.
ಮೃತ ವ್ಯಕ್ತಿಯ ವಾರಸುದಾರರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್: 9108630967, 9902193960 ಹಾಗೂ ರೈಲ್ವೆ ಪಿಎಸ್‌ಐ: 9480802118 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.