
ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ ಇವರುಗಳ ಸವಿನೆನಪಿಗಾಗಿ ಜೂ.7ರ ಭಾನುವಾರ ಬೆಳಗ್ಗೆ 9:30ರಿಂದ ಸಂಜೆ 5ರವರೆಗೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗೇಟ್ ಸಮೀಪದ ಎಲ್.ಜಿ ಮಹಲ್ ನಲ್ಲಿ “ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರೇಪುರ ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ ತಿಳಿಸಿದರು.
ತಾಲೂಕಿನ ಕಾರೇಪುರ ಗ್ರಾಮದಲ್ಲಿನ ಪೂತಮಾನಸ ಜ್ಯೋತಿಷ್ಯಾಲಯ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯದ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅರ್.ಜಿ ವೆಂಕಟಾಚಲಯ್ಯ, ಶಾಸಕ ಧೀರಜ್ ಮುನಿರಾಜು, ಬೀದರ್ ದಕ್ಷಿಣ ಶಾಸಕ ಡಾ|| ಶೈಲೇಂದ್ರ ಬೆಲ್ಲಾಳ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಮಾಜಿ ಅಧ್ಯಕ್ಷ ಮುನೇಗೌಡ, ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ಸೇರಿದಂತೆ ಇತರರು ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಯೋತಿಷ್ಯರು, ವಾಸ್ತು ತಜ್ಞನರಿಂದ ಜನರಿಗೆ ವಾಸ್ತು ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜ್ಯೋತಿಷ್ಯ ತಾಯಿ, ವಾಸ್ತು ಮಗು ಇದ್ದಂತೆ. ಒಳ್ಳೆ ಸ್ಥಾನ ಮಾನ, ಕೀರ್ತಿ, ಯಶಸ್ಸು, ಆರ್ಥಿಕವಾಗಿ ಸದೃಢತೆ ಪಡೆಯಲು ಜ್ಯೋತಿಷ್ಯ ಮತ್ತು ವಾಸ್ತು ಅತಿ ಮುಖ್ಯ ಎಂದರು.
ಗ್ರಾಮದಲ್ಲಿ ವಾಸಿಸುವ ಜನತೆಯ ಮನೆಗಳನ್ನು ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ಸರಿಪಡಿಸಿ ಶಾಂತಿ, ನೆಮ್ಮದಿ, ಆರೋಗ್ಯವಂತರಾಗಿ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.
ವಾಸ್ತು ವಿಜ್ಞಾನವು ನಗರವಾಸಿಗಳಿಗೆ ಮತ್ತು ಹಣವಂತರಿಗೆ ಮಾತ್ರ ಲಭ್ಯವಾಗಿರುತ್ತವೆ, ಆದರೆ, ರಾಜ್ಯದಲ್ಲಿ ಸುಮಾರು 30,000 ಗ್ರಾಮಗಳಿವೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸುಮಾರು 296 ಗ್ರಾಮಗಳು, 3 ಪಟ್ಟಣಗಳು, ಎಲ್ಲಾ ವರ್ಗದ ಜನತೆಗೆ ವಾಸ್ತು ಜ್ಞಾನ ನೀಡುವ ಸಲುವಾಗಿ ಈ ಬೃಹತ್ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಅನಂತ ರಾಘವನ್ ಬಿ.ಎನ್, ಖಜಾಂಚಿ ಕುಮಾರ ವಸಿಷ್ಠ, ವಾಸ್ತು ತಜ್ಞ ಗೊಟ್ಟಿಗೆರೆ ಶಿವಣ್ಣ, ಶಾರಧಾ ಮಣಿ, ಮೋಹನ್ ಕುಮಾರ್ ಸೇರಿದಂತೆ ಇತರರು ಇದ್ದರು.