ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ ಸಚಿವ ಸ್ಥಾನ ನೀಡಬೇಕು, ಗೃಹ ಅಥವಾ ಕಂದಾಯ ಇಲಾಖೆಗಳನ್ನು ನಿರ್ವಹಿಸುವ ಶಕ್ತಿ ಇರುವ ಮುನಿಯಪ್ಪನವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನಾದರೂ ನೀಡಬೇಕು ಎಂದು ದೊಡ್ಡಬಳ್ಳಾಪುರ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮನು.ಆರ್.ವಿ ಒತ್ತಾಯ ಮಾಡಿದ್ದಾರೆ.

ಕರ್ನಾಟಕದಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಅದಕ್ಕನುಗುಣವಾಗಿ ಮಂತ್ರಿಸ್ಥಾನ ನೀಡಬೇಕು, ಜನಪ್ರಿಯ ಶಾಸಕರು ಹಾಗೂ ಹಿರಿಯರ ಅನುಭವ ಪರಿಗಣಿಸಿ ಪ್ರಬಲವಾದ ಸಚಿವ ಸ್ಥಾನ ನೀಡಬೇಕು‌. ಎಡಗೈ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ಕೆ.ಎಚ್. ಮುನಿಯಪ್ಪನವರನ್ನು ಉಪಮುಖ್ಯಮಂತ್ರಿಯಾಗಿ ಮಾಡಿ, ಸಮಾಜ ಕಲ್ಯಾಣ ಸಚಿವ ಸ್ಥಾನವನ್ನೂ ನೀಡಬೇಕು ಅವರಿಗೆ ಇರುವ ಅಪಾರ ಅನುಭವವನ್ನು ಡಿ.ಕೆ.ಶಿವಕುಮಾರ್ ಸಂಪುಟ ಬಳಸಿಕೊಳ್ಳಬೇಕೆಂದರು.

Leave a Reply

Your email address will not be published. Required fields are marked *

error: Content is protected !!