ಹಕ್ಕಿಜ್ವರ ಶಂಕೆ: ನವಿಲುಗಳ ಮಾರಣ ಹೋಮ…

ನೆಲಮಂಗಲ: ನೆಲಮಂಗಲದಲ್ಲಿ ನವಿಲುಗಳ ಸಾಮೂಹಿಕ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಹಕ್ಕಿಜ್ವರ (Bird Flu)ಶಂಕೆಯಿಂದ ಸುಮಾರು 10-15 ನವಿಲುಗಳು ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ತೋಟ ಹಾಗೂ ಕೆರೆ ಸುತ್ತಮುತ್ತಲು ನಡೆದಿದೆ.

ಕಳೆದ 3–4 ದಿನಗಳಿಂದ ನವಿಲುಗಳು ಧಿಡೀರನೆ ಸತ್ತು ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ಇನ್ನೂ ಹಲವು ಮೃತ ನವಿಲುಗಳ ದೇಹಗಳು ಶ್ವಾನಗಳ ಪಾಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ನೆಲಮಂಗಲ ಅರಣ್ಯ ವಲಯ ಸಿಬ್ಬಂದಿ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ನವಿಲುಗಳ ದೇಹಗಳಿಂದ ಮಾದರಿಗಳನ್ನು ವೈದ್ಯರು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕವಾಗಿ ಹಕ್ಕಿಜ್ವರ ಶಂಕೆ ವ್ಯಕ್ತವಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!