ಮೇ.21ಕ್ಕೆ ಭೂಸ್ವಾಧೀನ ವಿರೋಧಿಸಿ ಡಿಸಿ ಕಚೇರಿಗೆ ಟ್ರ್ಯಾಕರ್ ಮೆರವಣಿಗೆ

ದೊಡ್ಡಬೆಳವಂಗಲ ಹೋಬಳಿಯ 2100 ಎಕರೆಯ ಭೂಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಗೆ ದೊಡ್ಡಬೆಳವಂಗಲ,‌ ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳ ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದೊಡ್ಡ ಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಪಿ ಶಶಿಧರ್ ತಿಳಿಸಿದರು.

ತಾಲೂಕಿನ ದೊಡ್ಡಬೆಳವಂಗಲದ ಹಳೇ ನಾಡಕಚೇರಿ ಸಮೀಪದ ಭೂಸ್ವಾಧೀನ ವಿರೋಧಿ ಹೋರಾಟದ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು .

ದೊಡ್ಡಬೆಳವಂಗಲ ಸುತ್ತಮುತ್ತಲ್ಲಿನ 5 ಗ್ರಾಮಗಳ 2100 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇದನ್ನು ವಿರೋಧಿಸಿ ಮಾ.20 ರಿಂದ ಹೋರಾಟ ಆರಂಭಿಸಲಾಯಿತು. ಕೆಐಎಡಿಬಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಮುಖ್ಯ ಮಂತ್ರಿಗಳಿಗೂ ಮನವಿ ಮಾಡಲಾಗಿದೆ. ‌ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ‌ಜೀವ ಇರುವವರಿಗೂ ಸರಕಾರಕ್ಕೆ ಭೂಮಿ ಕೊಡುವುದಿಲ್ಲ. ಈವರೆಗೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ಸ್ಪಂದಿಸಿಲ್ಲ.‌ ರೈತರ ವಿರೋಧಿ ಸರಕಾರಕ್ಕೆ ದಿಕ್ಕಾರ ಹೇಳುತ್ತೇವೆ. ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ‌ಮುಂದಿನ‌ ಪೀಳಿಗೆಗರ ನೀಡಬೇಕು. ಕಳೆದ 42 ದಿನಗಳಿಂದ ಹೋರಾಟ ಮಾಡಿಕೊಂಡು ಬದಲಾಗುತ್ತಿದೆ. ಮೇ.21ರಂದು ಟ್ರ್ಯಾಕರ್ ಮೆರವಣಿಗೆಯನ್ನು ಹೋರಾಟದ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೆಳಿಗ್ಗೆ 9.30 ಕ್ಕೆ ಆರಂಭಿಸಲಾಗುತ್ತದೆ. ಇಲ್ಲಿನ ರೈತರ ಜಮೀನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದರು.

ಸದ್ಯ ಅಧಿಕೃತವಾಗಿ 2100 ಎಕರೆ ಸ್ವಾಧೀನ ಮಾಡಿಕೊಳ್ಳಲು ಮೇಲ್ನೋಟಕ್ಕೆ ಹೇಳುತ್ತಿದ್ದರೆ. ಆದರೆ ಮೂಲಗಳ ಪ್ರಕಾರ 3 ಸಾವಿರಕ್ಕೂ ಅಧಿಕ ಭೂಮಿಯನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಅಡಿಕೆ ಫಸಲು ಬರುವ ಮುನ್ನವೇ ನಮ್ಮ ಭೂಮಿ ವಶಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ 18 ಸಾವಿರಕ್ಕೂ ಅಧಿಕ ಭೂಮಿ‌ ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಪ್ರಭಾ ಬೆಳವಂಗಲ ಮಾತನಾಡಿ, ಪಕ್ಷ, ಧರ್ಮ, ಜಾತಿ ಮರೆತು ಒಗ್ಗೂಟ್ಟಿನಿಂದ ಹೋರಾಟ ನಡೆಯುತ್ತಿದೆ. ಈಗಾಗಲೇ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. 42 ದಿನ ಕಳೆದರೂ ಕೂಡ ಯಾರು ಸ್ಪಂದಿಸಿಲ್ಲ. ಪ್ರತಿ ಹಳ್ಳಿಗಳಲ್ಲಿ ಹೋರಾಟದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಎಸ್ ಟಿಆರ್ ಆರ್ ರಸ್ತೆ ಸುತ್ತಮುತ್ತಲಿನ ಎಲ್ಲಾ ಜಮೀನು ಕಬಳಿಸಲು ಮುಂದಾಗುತ್ತಿದೆ. ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದೆ. ಕೆಐಎಡಿಬಿ ವತಿಯಿಂದ ಈಗಾಗಲೇ ಸಾವಿರಾರು ಎಕರೆ ಜಮೀನು ಕಬಳಿಸಲಾಗಿದೆ. ಈ ತಾಲೂಕಿನಲ್ಲಿ ಮೊದಲ ಬಾರಿಗೆ ಭೂಮಿಯ ಕೊಡದಿರುವ ಬಗ್ಗೆ ಕೂಗು ರೈತರಿಂದ ಕೇಳಿಬಂದಿದೆ. ಇಲ್ಲಿನ ರೈತರು ಶೇ.99 ರಷ್ಡು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಈ ಹೋರಾಟ ಚರಿತ್ರೆಯಾಗಲಿದೆ. ಒಗ್ಗಟ್ಟಿನ ಹೋರಾಟ‌ ಮಾಡಲಾಗುತ್ತಿದೆ ಭೂಮಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದರು.

ಈ‌ ವೇಳೆ ಮುಖಂಡರಾದ ತಿಮ್ಮೇಗೌಡ, ಸುನೀಲ್, ಕೇಶವ್ ಮೂರ್ತಿ, ಧರ್ಮೇಂದ್ರ, ರಾಮಕೃಷ್ಣಯ್ಯ, ಮಲ್ಲರಾಜು, ರಮೇಶ್ ,ಆನಂದ್, ಕಿಶೋರ್,  ಗೋವಿಂದ್ ರಾಜು, ಚನ್ನೇಗೌಡ, ಕೆಂಪೇಗೌಡ, ರಾಮೇಗೌಡ, ಕೃಷ್ಣಮೂರ್ತಿ, ಶಿವಗಂಗಯ್ಯ, ಅಪ್ಪಯ್ಯಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!