ತಾಲ್ಲೂಕಿನಲ್ಲಿ ಜೆಡಿಎಸ್ ತನ್ನ ಶಕ್ತಿ ಕಳೆದುಕೊಳ್ಳಲು ಪಕ್ಷ ವಿರೋಧಿ ಚಟುವಟಿಕೆಗಳೇ ಕಾರಣ- ಜೆಡಿಎಸ್ ಮುಖಂಡ ಹುಸ್ಕೂರ್ ಆನಂದ್

ದೊಡ್ಡಬಳ್ಳಾಪುರದ ಜೆಡಿಎಸ್ ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಬಣ, ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯುವ ಕಾರ್ಯಕರ್ತರ ಬಣ ಎಂಬ ಎರಡು ಬಣಗಳು ಉದ್ಭವಾಗಿವೆ. ಈ ಎರಡು ಬಣಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ದೊಡ್ಡತನವನ್ನು ಜಿಲ್ಲಾಧ್ಯಕ್ಷರಾದವರು ತೋರಬೇಕಿದೆ ಎಂದು ಜೆಡಿಎಸ್ ಮುಖಂಡ ಹುಸ್ಕೂರ್ ಆನಂದ್ ತಿಳಿಸಿದ್ದಾರೆ.

ದೊಡ್ಡಬೆಳವಂಗಲ ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ 25ನೇ ವರ್ಷದ ಬೆಳ್ಳಿಹಬ್ಬದ ಸಮಾಲೋಚನಾ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿದ್ದ ಬಿ.ಮುನೇಗೌಡ ಅವರ ಜೊತೆ ಸಂವಾದ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು, ಜೆಡಿಎಸ್ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸುವ ಮೂಲಕ ನಮ್ಮ ಶಕ್ತಿ ತೋರಿಸಬೇಕು ಎಂದರು.

ಯುವ ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಗೌಡ ಮಾತನಾಡಿ, ಇದು ನಿಷ್ಠಾವಂತ ಕಾರ್ಯಕರ್ತರ ಒಗ್ಗೂಡಿಸುವ ಕಾರ್ಯ. ಇದನ್ನು ಹುಸ್ಕೂರ್ ಆನಂದ್ ನೇತೃತ್ವದಲ್ಲಿ ಮಾಡಿತ್ತಿದ್ದೇವೆ, ಮೇ.8ರಂದು ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾವು ಯಾರ ವಿರೋಧಿಗಳಲ್ಲ. ಎಲ್ಲರ ಜೊತೆಗೂಡಿ ಪಕ್ಷ ಸಂಘಟನೆ ಮಾಡಿ ಎಂಬುದಷ್ಟೇ ನಮ್ಮ ಅಗ್ರಹ. ನಮ್ಮಿಂದ ಮೇ.8ರ ಬೆಳ್ಳಿಹಬ್ಬ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದರು.

ವಕೀಲರಾದ ಸತೀಶ್ ಮಾತನಾಡಿ, ಕಳೆದ 35 ವರ್ಷಗಳಿಂದ ನಿರಂತರವಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇವೆ. ಈವರೆಗೂ ಯಾವುದೇ ಅಧಿಕಾರ ಬಯಸದೆ ಪಕ್ಷ ನಿಷ್ಠೆಯಿಂದ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಕಳೆದ ಬಮೂಲ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಇಂದು ಅಧಿಕಾರ ನೀಡಿರುವುದು ನಮಗೆ ನೋವುಂಟುಮಾಡಿದೆ. ಪಕ್ಷದ ರಾಜ್ಯ ವರಿಷ್ಠರು ಹಾಗೂ ಜಿಲ್ಲಾ ವರಿಷ್ಟರ ಆದೇಶದ ಮೇರೆಗೆ ಹುಸ್ಕೂರ್ ಆನಂದ್ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅವರಿಗೆ ಕೊಟ್ಟ ಬಳುವಳಿ ಸೋಲು. ಇಂದು ಅವರೇ ಅಧಿಕಾರ ಪಡೆದ್ದಿದ್ದಾರೆ ಇದು ಸರಿಯೇ ಎಂದು ಪ್ರಶ್ನೆ ಮಾಡಿದರು.

ಇಂದು ತಾಲ್ಲೂಕಿನಲ್ಲಿ ಜೆಡಿಎಸ್ ತನ್ನ ಶಕ್ತಿ ಕಳೆದುಕೊಳ್ಳಲು ಪಕ್ಷ ವಿರೋಧಿ ಚಟುವಟಿಕೆಗಳೇ ಕಾರಣ. ಇನ್ನಾದರೂ ಇಂತಹ ಕಾರ್ಯಗಳು ನಿಲ್ಲಬೇಕು. ನಾವು ಸಾಕಷ್ಟು ಸೋಲು ಕಂಡಿದ್ದೇವೆ. ಆದರೂ, ಇಂದಿಗೂ ನಾವು ಜೆಡಿಎಸ್ ಪಕ್ಷ ಬಿಟ್ಟಿಲ್ಲ, ಇಂದಿಗೂ ಶಾಲು ಹಾಕುತ್ತೇವೆ ಅಂದರೆ ಅದು ದೇವೇಗೌಡರ ಮೇಲಿನ ಗೌರವ, ಎಚ್ ಡಿ ಕುಮಾರಸ್ವಾಮಿಯವರ ಮೇಲಿನ ಭರವಸೆ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಮೇಲಿನ ಭವಿಷ್ಯದ ಆಶಯ. ಅದನ್ನು ಉಳಿಸುವ ಕಾರ್ಯ ವರಿಷ್ಠರಿಂದ ಆಗಬೇಕಿದೆ ಎಂದರು.

ಈ ವೇಳೆ ಚನ್ನೇಗೌಡ, ರಾಜಣ್ಣ ಹನುಮಂತ ರಾಜು, ಸುರೇಶ, ಮೂರ್ತಿ, ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ರಾಜು, ನಾಗರಾಜ್ ಹನುಮಂತರಾಯಪ್ಪ, ಜಗದೀಶ್, ಪುನೀತ್ ಅಪ್ಪು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!