
ಹಾಡಹಗಲೇ ಮನೆ ಬೀಗ ಮುರಿದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ಏ.20ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್ ನಾಗೇನಹಳ್ಳಿ ಗ್ರಾಮದ ಬೊಮ್ಮರಾಜುರವರ ಮನೆಯಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ..

ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿರುವ ಖದೀಮರು. 10ಗ್ರಾಂ ಗೋಲ್ಡ್ ಚೈನ್, ತಲಾ 15ಗ್ರಾಂ ಚಿನ್ನದ ಬ್ರಾಸ್ಲೈಟ್ ಮತ್ತು ನೆಕ್ಲೇಸ್ ಕದ್ದು ಪರಾರಿಯಾಗಿದ್ದಾರೆ. 8 ಗ್ರಾಂ ಉಂಗುರ, ಮೂರು ಜೊತೆ ಕಾಲುಗೆಜ್ಜೆ, 1 ಲಕ್ಷ 30 ಸಾವಿರ ನಗದು ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳತನ ಮಾಡಿ ಎಸ್ಕೇಪ್ ಆದ ಕಳ್ಳರಿಗಾಗಿ ಬಲೆ ಪೊಲೀಸರು ಬೀಸಿದ್ದಾರೆ.