
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಹಾವಳಿ ಮುಂದುವರಿದಿದೆ..
ರಾತ್ರೋರಾತ್ರಿ ರೈತರ ಹೊಲಗಳಿಗೆ ನುಗ್ಗಿ ಬಾಳೆ, ಹಲಸಿನ ಕಾಯಿಗಳನ್ನು ಅರೆಬರೆ ತಿಂದು ಎಸ್ಕೇಪ್ ಆಗಿದೆ.. ಕರಡಿ ಉಪಟಳದಿಂದ ರೈತರು ಜೀವ ಭಯದಲ್ಲಿ ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ಹೋಗುತ್ತಿದ್ದಾರೆ.

ಜೊತೆಗೆ ಬದುಗಳಲ್ಲಿರುವಂತಹ ಹುತ್ತಗಳನ್ನು ಕೊರೆದು ಜೇನು ತಿಂದು ಹೋಗಿದೆ. ಈಗಾಗಲೇ ಎರಡು ಬಾರಿ ಹೊಲದಲ್ಲಿ ನೀರನ್ನು ಕಟ್ಟಲು ಹೋದ ರೈತರ ಮೇಲೆ ದಾಳಿ ಮಾಡಿ ಗಾಯಪಡಿಸಿತ್ತು. ಸದ್ಯ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಹಿಡಿದು ರೈತರಲ್ಲಿರುವ ಭಯವನ್ನು ಹೋಗಲಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.