
ಇಂದು ಬೆಳ್ಳಬೆಳಗ್ಗೆ ಸರಗಳನ್ನ ಕೈಚಳಕ ಕಂಡುಬಂದಿದೆ. ಬೆಳಗ್ಗೆ ಸುಮಾರು 5:30ರ ಸಮಯದಲ್ಲಿ ಮಹಿಳೆ ವಾಕಿಂಗ್ ಮಾಡುವ ವೇಳೆ ಕಳ್ಳನೋರ್ವ ಏಕಾಏಕಿ ಮಹಿಳೆ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ…
ಕೊನಘಟ್ಟ ಗ್ರಾಮದ ಗಾಯತ್ರಿ(52), ಸರ ಕಳೆದುಕೊಂಡ ಮಹಿಳೆ.
40 ಗ್ರಾಂ ಚೈನ್, 8 ಗ್ರಾಂ ಮಾಂಗಲ್ಯ ಬೊಟ್ಟು, 1 ಗ್ರಾಂ ಗುಂಡುಗಳು ಇದ್ದ ಮಾಂಗಲ್ಯ ಸರವನ್ನು ಕಿತ್ತು ಕಳ್ಳ ಎಸ್ಕೇಪ್ ಆಗಿದ್ದಾನೆ..
ಇಬ್ಬರು ಮಹಿಳೆಯರು ಕೊನಘಟ್ಟ ಗ್ರಾಮ ಸಮೀಪದ ಲೇಔಟ್ ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಸರ ಕಳ್ಳತನ ಮಾಡಲೆಂದೇ ಪಕ್ಕದಲ್ಲೇ ಇದ್ದ ತೋಪಿನಲ್ಲಿ ಅಡಗಿ ಕುಳಿತಿದ್ದ ಕಳ್ಳ, ಮಹಿಳೆಯರ ಕತ್ತಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಂಡು ಮಹಿಳೆ ಕತ್ತಿಗೆ ಚಾಕು ಇಟ್ಟು ಬೆದರಿಸಿ ಸರವನ್ನು ಕಿತ್ತು ಪರಾರಿಯಾಗಿದ್ದಾನೆ..
ಗಾಬರಿಗೊಂಡ ಮಹಿಳೆಯರು ಜೋರಾಗಿ ಕೂಗಿಕೊಂಡಾಗ ಕಳ್ಳ ಕಾಲ್ಕಿತ್ತಿದ್ದಾನೆ…
ಇದರಿಂದ ಇಡೀ ಕೊನಘಟ್ಟ ಗ್ರಾಮವೇ ಬೆಚ್ಚಿಬಿದ್ದಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…