
ವ್ಯಕ್ತಿಯ ಮೇಲೆ ಅತ್ಯಂತ ಕ್ರೂರವಾಗಿ ದೌರ್ಜನ್ಯ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ… ಸೈಜುಗಲ್ಲಿನಿಂದ ಮನಸೋ ಇಚ್ಚೆ ಜಜ್ಜಿದ ಕಿಡಿಗೇಡಿಗಳು. ಮಂಡ್ಯದ ಪಾಂಡವಪುರದ ಡಿಂಕಾ ಗ್ರಾಮದಲ್ಲಿ ನಡೆದಿರೋ ಘಟನೆ.
ತಪ್ಪು ಮಾಡಿದ ಅನ್ನೋ ಕಾರಣಕ್ಕೆ ವ್ಯಕ್ತಿ ಬಟ್ಟೆ ಬಿಚ್ಚಿ ಕಾಲು ಮೇಲೆ ಸೈಜು ಕಲ್ಲು ಎತ್ತಾಕಿ ದೌರ್ಜನ್ಯ ನಡೆಸಲಾಗಿದೆ. ಮೂರ್ನಾಲ್ಕು ಜನರ ತಂಡದಿಂದ ವ್ಯಕ್ತಿಯೊಬ್ಬನ್ನ ಮೇಲೆ ಹಲ್ಲೆ ಮಾಡಲಾಗಿದೆ.
ತಾವೆಸಗಿದ ಕೌರ್ಯವನ್ನು ವಿಡಿಯೋ ಮಾಡಿರೋ ಕಿರಾತಕರು. ವ್ಯಕ್ತಿಯ ಎರಡು ಕಾಲುಗಳ ಮೇಲೆ ಸೈಜು ಕಲ್ಲು ಎತ್ತಾಕಿ ಕೌರ್ಯ ಮೆರದಿದ್ದಾರೆ.
ಕೈಮುಗಿದು ತಪ್ಪಾಯ್ತು ಎಂದರು ಬಿಡದೆ ಕಲ್ಲು ಎತ್ತಾಕಿ, ಕಲ್ಲಿನಿಂದ ದೇಹದ ಮೇಲೆ ಹಲ್ಲೆ ನಡೆಸಲಾಗಿದೆ. ವ್ಯಕ್ತಿಯ ಮೇಲೆ ಭೀಕರ ಹಲ್ಲೆ ನಡೆಸಿ ಕಾಲು ಮುರಿದಿರೋ ಕಿರಾತಕರು.

ಹುಡುಗಿ ವಿಚಾರವಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರೋ ಮಾಹಿತಿ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಲ್ಲೆಗೊಳಗಾದವನು ನವೀನ್. ಮೈಸೂರು ಮೂಲದ ನವೀನ್ ಹಾಗೂ ಈತನ ಭಾವನ ಮೇಲೆ ಹಲ್ಲೆ. ಕಲ್ಲಿನಿಂದ ಜಜ್ಜಿ ವಿಕೃತವಾಗಿ ಹಲ್ಲೆ. ಗಿರೀಶ್ ಹಾಗೂ ಗಣೇಶ್ ಎಂಬುವವರಿಂದ ಹಲ್ಲೆ. ಕೆಆರ್ ಪೇಟೆಯ ಬೊಮ್ಮಲಾಪುರದ ಗಿರೀಶ್ ಹಾಗೂ ಗಣೇಶ್.
ಹುಡುಗಿ ಮಿಸ್ಸಿಂಗ್ ವಿಚಾರಕ್ಕೆ ನಡೆದಿರುವ ಗಲಾಟೆ. ಕೆಆರ್ ಪೇಟೆಯ ಬೊಮ್ಮಲಾಪುರದ ನಿಂಗಣ್ಣ ಎಂಬುವವರ ಮಗಳು ಮಿಸ್ಸಿಂಗ್. ಈ ಮಿಸ್ಸಿಂಗ್ ವಿಚಾರಕ್ಕೆ ನವೀನ್ ಹಾಗೂ ಆತನ ಭಾವ ಸಹಕರಿಸಿದ ಆರೋಪ. ಮಿಸ್ಸಿಂಗ್ ಆದ ಹುಡುಗಿ ಸಹೋದರ ಸಂಜಯನಿಗೆ ನವೀನ್ ಗುಂಪಿನಿಂದ ಗಂಭೀರ ಹಲ್ಲೆ ಆರೋಪ. ಇದೆ ವಿಚಾರಕ್ಕೆ ನವೀನ್ ಮತ್ತು ಆತನ ಭಾವನನ್ನ ಹಿಡಿದು ಹಲ್ಲೆ. ಪಾಂಡವಪುರದ ಕನಗನಹಳ್ಳಿ ಬಳಿ ಕಲ್ಲಿನಿಂದ ಜಜ್ಜಿ ಹಲ್ಲೆ. ಸೈಜ್ ಗಲ್ಲಿನಿಂದ ಹಲ್ಲೆ ನಡೆಸಿದ್ದ ಗಿರೀಶ್ ಹಾಗೂ ಗಣೇಶ್.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ನವೀನನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಹಲ್ಲೆ ಮಾಡಿದ ಗಿರೀಶ್ ನನ್ನ ವಶಕ್ಕೆ ಪಡೆದ ಪಾಂಡವಪುರ ಪೊಲೀಸರು.