
ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ಬಳಿಯ ಖಾಸಗಿ ಕಂಪನಿ ಅವರಣದಲ್ಲಿ ನಡೆದಿದೆ…
ಹೊಂಗೆ ಮರದಲ್ಲಿ ಅಸ್ತಿ ಪಂಜರದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದಾರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಫ್ಯಾಕ್ಟರಿಯು 8 ಎಕರೆ ವಿಶಾಲವಾದ ಅವರಣವನ್ನ ಹೊಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವದಿಲ್ಲ, ಗಮನಕ್ಕೆ ಬರದ ಹಿನ್ನೆಲೆ ಶವ ಸಂಪೂರ್ಣ ಕೊಳೆತು ಅಸ್ತಿಪಂಜರವಾಗಿದೆ, ತಲೆಯ ಭಾಗ ಮಾತ್ರ ಮರದಲ್ಲಿ ನೇತಾಡುತ್ತಿದ್ದು, ಕೆಳಗೆ ದೇಹದ ಇತರ ಭಾಗದ ಮೂಳೆಗಳು ಬಿದ್ದಿವೆ.

ಸದ್ಯ ಮೃತನ ಹೆಸರು, ವಯಸ್ಸು, ವಿಳಾಸ ತಿಳಿದುಬಂದಿರುವುದಿಲ್ಲ.
ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ, ಮೃತನು ಫ್ಯಾಕ್ಟರಿ ನೌಕರನಾ ಅಥವಾ ಹೊರಗಿನ ವ್ಯಕ್ತಿಯಾ, ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದರು, ಸಂಪೂರ್ಣ ತನಿಖೆಯ ನಂತರ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಲಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ….