ಭಾರತಕ್ಕೆ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಆಗಮನ: ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆ ಬಲಪಡಿಸುವ ಗುರಿಯೊಂದಿಗೆ ಭಾರತಕ್ಕೆ ಭೇಟಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಇಂದು ಸಂಜೆ 4:30 ರ ಸುಮಾರಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ವಿಶಾಲ ಗುರಿಯೊಂದಿಗೆ ಭಾರತಕ್ಕೆ ಬರಲಿದ್ದಾರೆ.

ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದು, ದ್ವಿಪಕ್ಷೀಯ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ರಕ್ಷಿಸುವುದು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಲ್ಲಿ ಸಹಕಾರವನ್ನು ಅನ್ವೇಷಿಸುವುದು ನಾಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ಶೃಂಗಸಭೆಯ ಮಾತುಕತೆಯ ಕೇಂದ್ರಬಿಂದುವಾಗಿದೆ.

23 ನೇ ಭಾರತ-ರಷ್ಯಾ ಶೃಂಗಸಭೆಗೆ ಮುಂಚಿತವಾಗಿ ಪುಟಿನ್ ಅವರಿಗೆ ವಿದ್ಯುಕ್ತ ಸ್ವಾಗತ ನೀಡಲಾಗುವುದು. ಶೃಂಗಸಭೆಯ ಸ್ಥಳವಾದ ಹೈದರಾಬಾದ್ ಹೌಸ್‌ನಲ್ಲಿ ಮೋದಿ ರಷ್ಯಾದ ನಿಯೋಗಕ್ಕೆ ಭೋಜನವನ್ನು ಸಹ ಆಯೋಜಿಸಲಿದ್ದಾರೆ.

ನಾಳೆ ಬೆಳಗ್ಗೆ ಪುಟಿನ್ ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ. ಶೃಂಗಸಭೆಯ ನಂತರ, ಪುಟಿನ್ ಅವರು ರಷ್ಯಾದ ಸರ್ಕಾರಿ ಸ್ವಾಮ್ಯದ ಪ್ರಸಾರಕ ಆರ್‌ಟಿಯ ಹೊಸ ಭಾರತ ಚಾನೆಲ್ ನ್ನು ಉದ್ಘಾಟಿಸಲಿದ್ದಾರೆ, ನಂತರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವಾರ್ಥವಾಗಿ ಆಯೋಜಿಸಲಾಗುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.

ಶೃಂಗಸಭೆಯ ಮಾತುಕತೆಗಳಲ್ಲಿ, ಭಾರತವು ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದರಿಂದ ಉಂಟಾದ ಹೆಚ್ಚುತ್ತಿರುವ ವ್ಯಾಪಾರ ಕೊರತೆಯನ್ನು ಪರಿಹರಿಸಲು ಭಾರತ ಒತ್ತಾಯಿಸುವ ನಿರೀಕ್ಷೆಯಿದೆ. ಅಮೆರಿಕ ಶೇಕಡಾ 50 ರಷ್ಟು ಭಾರಿ ನಿರ್ಬಂಧ ಹೇರಿದ ನಂತರ ಭಾರತ-ಯುಎಸ್ ಸಂಬಂಧ ಸಹ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರ ಭೇಟಿ ಮಹತ್ವ ಪಡೆದಿದೆ.

Leave a Reply

Your email address will not be published. Required fields are marked *

error: Content is protected !!